Tuesday, February 3, 2026
Flats for sale
Homeರಾಜ್ಯಬೆಂಗಳೂರು : ಮಕ್ಕಳ ದಿನಾಚರಣೆ ದಿನದಂದು‌ ಮುಖ್ಯೋಪಧ್ಯಾಯಿನಿಯಿಂದ ವಿದ್ಯಾರ್ಥಿನಿ ಮೇಲೆ ಹಲ್ಲೆ,ಪೋಷಕರಿಂದ ಶಾಲೆಗೆ ಮುತ್ತಿಗೆ..!

ಬೆಂಗಳೂರು : ಮಕ್ಕಳ ದಿನಾಚರಣೆ ದಿನದಂದು‌ ಮುಖ್ಯೋಪಧ್ಯಾಯಿನಿಯಿಂದ ವಿದ್ಯಾರ್ಥಿನಿ ಮೇಲೆ ಹಲ್ಲೆ,ಪೋಷಕರಿಂದ ಶಾಲೆಗೆ ಮುತ್ತಿಗೆ..!

ಬೆಂಗಳೂರು : ಮಕ್ಕಳ ದಿನಾಚರಣೆ ದಿನದಂದು‌ ಖಾಸಗಿ ಶಾಲೆಯಲ್ಲಿ ಹಿನಾಯ ಕೃತ್ಯ ನಡೆದಿದೆ. ಶಾಲಾ ಮುಖ್ಯೋಪಧ್ಯಾಯಿನಿಯ ಮಗನ‌ ಸೇವೆ ಮಾಡಲಿಲ್ಲ ಎಂದು ಐದನೇ ತರಗತಿ ವಿದ್ಯಾರ್ಥಿನಿ ಮೇಲೆ ದರ್ಪದಿಂದ ಬೆತ್ತದಲ್ಲಿ ಮನಬಂದಂತೆ ಥಳಿಸಿದ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಮಂಡಿಬೆಲೆ ರಸ್ತೆಯ ವಿಸ್ಡಮ್ ಇಂಗ್ಲಿಷ್ ಶಾಲೆಯಲ್ಲಿ ನಡೆದಿದೆ.

ಪಟ್ಟಣದ ಪ್ರಭಾವತಿ ಹಾಗೂ ಆಂಜಿನಪ್ಪ ದಂಪತಿಯ ಐದನೇ ತರಗತಿ ವಿದ್ಯಾರ್ಥಿನಿ ಭವ್ಯ ಹಲ್ಲೆಗೊಳಗಾದವರು ಎಂಬ ಮಾಹಿತಿ ದೊರೆತಿದೆ. ಮಗಳ ಮೇಲೆ ಹಲ್ಲೆ ಮಾಡಿರೋ ಪ್ರಿನ್ಸಿಪಾಲ್ ನಡೆ ಖಂಡಿಸಿದ್ದು ಪೋಷಕರು ಶಾಲೆಗೆ ಮುತ್ತಿಗೆ ಹಾಕಿ ಮುಖ್ಯೋಪಧ್ಯಾಯಿನಿ ಉಷಾ ಕಿರಣ್ ಗೆ ದಿಗ್ಬಂಧನ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಮಗು‌ ಮೇಲೆ ದರ್ಪ ತೋರಿದ್ದಕ್ಕೆ ಶಾಲೆಯ ಆಡಳಿತ ಮಂಡಳಿಯ ಮೇಲೆ ಆಕ್ರೋಶಹೊರಹಾಕಿ ಗದ್ದಲ ಸೃಷ್ಟಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ವಿಜಯಪುರ ಪೊಲೀಸರ ದೌಡಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular