Friday, March 13, 2026
Flats for sale
Homeರಾಜಕೀಯಬೆಂಗಳೂರು : ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ?. ಏಪ್ರಿಲ್ 3ಕ್ಕೆ ಮಹತ್ವದ...

ಬೆಂಗಳೂರು : ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ?. ಏಪ್ರಿಲ್ 3ಕ್ಕೆ ಮಹತ್ವದ ನಿರ್ಧಾರ ಘೋಷಣೆ.

ಬೆಂಗಳೂರು : ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್​ ಜೆಡಿಎಸ್ ಪಾಲಾಗಿದ್ದಕ್ಕೆ ಸಂಸದೆ ಸುಮಲತಾ ಬೇಸರಗೊಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯೇ ಅಖಾಡಕ್ಕೆ ಧುಮುಕುತ್ತಿರುದು ತಿಳಿದ ಬಳಿಕ ಸುಮಲತಾ ಅವರು ಮೌನಕ್ಕೆ ಶರಣಾಗಿದ್ದರು. ಇನ್ನು ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸುಮಲತಾರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಕೂಡ ಮಾಡಲಾಗಿತ್ತು.ಬೆಂಬಲಿಗರ ಜೊತೆ ಸಭೆ ನಡೆಸಿದ್ದು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮಹತ್ವದ ಘೋಷಣೆ ಮಾಡಿದ್ದಾರೆ. ಸುಮಲತಾ ಅಂಬರೀಶ್‌ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬೆಂಬಲಿಗರು ಒತ್ತಾಯಿಸಿದ್ದಾರೆ.

ಜೆಪಿ ನಗರದ ನಿವಾಸದ ಮುಂದೆ ಅಭಿಮಾನಿಗಳು ಜಮಾವಣೆಗೊಂಡಿದ್ದರು. ಬಳಿಕ ಬೆಂಬಲಿಗರ ಜೊತೆ ಸಭೆ ಮಾಡಿದ್ದು, ನಿಮ್ಮನ್ನ ನೋಯಿಸುವ ನಿರ್ಧಾರ ನಾನು ಮಾಡಲ್ಲ. ಏಪ್ರಿಲ್​ 3ರಂದು ಮಂಡ್ಯದಲ್ಲಿ ಸಭೆ ಮಾಡಿ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿ ನನ್ನ ಹಾಗೂ ಅಂಬರೀಶ್ ಅಭಿಮಾನಿಗಳಿಗೆ 5 ವರ್ಷದ ರಾಜಕೀಯ ಜೀವನ ನೀಡಿದ್ದು ಮಂಡ್ಯದ ಜನ. ಇಂದು ನನ್ನ ಜೊತೆಯಲ್ಲಿ, ಅಂಬರೀಶ್ ರಾಜಕೀಯ ಜೀವನದ ಮೊದಲ ದಿನದಂದು ಇಂದಿನವರೆಗೂ ಇರುವ ಎಲ್ಲರಿಗೂ ಧನ್ಯವಾದಗಳು.ಅಂದು ನನ್ನ ಜೊತೆಗೆ ಮಂತ್ರಿಗಳು ಇರಲಿಲ್ಲ. ನೀವೇ ಇದ್ದದ್ದು. 5 ವರ್ಷ ನಿಮ್ಮ ಕೈಲಾದ ಸೇವೆ ಮಾಡಿದ್ದೀರಿ‌ ಎಂದ್ರು. ಕಳೆದ 5 ವರ್ಷದಲ್ಲಿ ಕಣ್ಣೀರು ಹಾಕಿದ ದಿನಗಳು ಇದೆ. ನಾನು ಸ್ವಾರ್ಥದಿಂದ ನನ್ನ ಹೆಜ್ಜೆ ಹಾಕಿಕೊಳ್ಳಬಹುದಿತ್ತು. ರಾಜಕೀಯದಲ್ಲಿ ನನ್ನ ಸ್ವಾರ್ಥ ಇರಬೇಕು‌ ಅಂದಿದ್ರೆ, ನಾನು ಬೇರೆ ಮಾರ್ಗದಲ್ಲೇ ಹೋಗುತ್ತಿದೆ. ನಾನು ನನ್ನ ಮಗ ಆರಾಮವಾಗಿ ಇರಬಹುದಿತ್ತು. ಮಂಡ್ಯದ ಜನರಿಗೆ ಮಾಡುವಂತಹ ಕೆಲಸ ಕಾರ್ಯ ಇನ್ನು ಈ ಮಣ್ಣಿನ ಋಣ ಮುಗಿಯುದಿಲ್ಲ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular