Thursday, March 12, 2026
Flats for sale
Homeಕ್ರೈಂಬೆಂಗಳೂರು : ಭೀಕರ ಹತ್ಯೆ ಮಾಡಿ ಪ್ರೀಜರ್​ನಲ್ಲಿಟ್ಟ ಪ್ರಕರಣ : ಕುಟುಂಬಸ್ಥರಿಗೆ ಸ್ನೇಹಿತ ಅಶ್ರಫ್​ ಸೇರಿದಂತೆ...

ಬೆಂಗಳೂರು : ಭೀಕರ ಹತ್ಯೆ ಮಾಡಿ ಪ್ರೀಜರ್​ನಲ್ಲಿಟ್ಟ ಪ್ರಕರಣ : ಕುಟುಂಬಸ್ಥರಿಗೆ ಸ್ನೇಹಿತ ಅಶ್ರಫ್​ ಸೇರಿದಂತೆ ನಾಲ್ವರ ಮೇಲೆ ಅನುಮಾನ..!

ಬೆಂಗಳೂರು : ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್‌ ಮಾದರಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿ 30ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಟ್ಟು ಘಟನೆ ಆರೋಪಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ವೈಯಾಲಿಕಾವಲ್‌ನ ವಿನಾಯಕನಗರದಲ್ಲಿ ನಡೆದಿದೆ.ಇದೀಗ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಾಲಕ್ಷ್ಮೀಯ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಕ್ತ, ಶಶಿಧರ್, ಸುನೀಲ್ ಮತ್ತು ಅಶ್ರಫ್ ಎಂಬುವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಮಹಾಲಕ್ಷ್ಮಿ ಬರ್ಬರ ಕೊ*ಲೆಯ ವಿಷಯ ಗೊತ್ತಾಗಿದ್ದು ಭೀಕರವಾಗಿದೆ. ಮಹಾಲಕ್ಷ್ಮಿ ವಾಸವಿದ್ದ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಕೊನೆಗೆ ಆ ಮನೆಯ ಓನರ್ ಮಹಾಲಕ್ಷ್ಮಿಯ ಗಂಡನಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಮಹಾಲಕ್ಷ್ಮಿಯ ಗಂಡ ಆಕೆಯ ಅಕ್ಕನಿಗೆ ಈ ರೀತಿ ಮನೆಯ ಓನರ್ ಫೋನ್ ಮಾಡಿ ಏನೋ ವಾಸನೆ ಬರುತ್ತಿದೆ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ. ಫ್ರಿಡ್ಜ್‌ನಲ್ಲಿದ್ದ ತುಂಡು, ತುಂಡು ದೇಹವನ್ನ ತೆಗೆದುಕೊಂಡು ಹೋದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. FSL ತಂಡ ಹಾಗೂ ವೈದ್ಯರ ಪರಿಶೀಲನೆ ಬಳಿಕ ಮಹಾಲಕ್ಷ್ಮಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ಉತ್ತರಾಖಂಡ್ ಮೂಲದ ಅಶ್ರಫ್ ಮಹಾಲಕ್ಷ್ಮಿ ಜೊತೆ ಸಲುಗೆಯಿಂದ ಇದ್ದನು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಹಾಲಕ್ಷ್ಮಿ ತಾನು ಕೆಲಸ ಮಾಡುವ ಕಂಪನಿಯಲ್ಲಿ ಜಗಳ ಮಾಡಿಕೊಂಡಿದ್ದಳು ಎಂದು ಮಾಹಿತಿ ನೀಡಿದ್ದಾರೆ.ಸೆಪ್ಟೆಂಬರ್ 21ರಂದು ಮಹಾಲಕ್ಷ್ಮಿಯ ತಾಯಿ, ಅಕ್ಕ ಇಬ್ಬರು ವೈಯಾಲಿಕಾವಲ್‌ ಮನೆಯ ಡೋರ್‌ ಓಪನ್‌ ಮಾಡಿದಾಗ ಕೊ*ಲೆಯಾದ ವಿಷಯ ಗೊತ್ತಾಗಿದೆ. ಫಸ್ಟ್ ಫ್ಲೋರ್‌ನಲ್ಲಿದ್ದ ಮನೆಯ ಡೋರ್ ಓಪನ್ ಮಾಡಿದಾಗಲೇ ನೆಲದಲ್ಲಿ ಹುಳಗಳು ಕಾಣಿಸಿಕೊಂಡಿದೆ. ತಾಯಿ, ಅಕ್ಕ ವಿಡಿಯೋ ಮಾಡಿಕೊಂಡು ಮಹಾಲಕ್ಷ್ಮಿ ಇದ್ದ ಮನೆಯೊಳಗೆ ಹೋಗಿದ್ದಾರೆ. ಮನೆಯೊಳಗೆ ಯಾರೂ ಇರಲಿಲ್ಲ. ಆದರೆ ಫ್ರಿಡ್ಜ್‌ ಬಳಿ ಮಾತ್ರವೇ ಹುಳುಗಳು ಕಾಣಿಸಿಕೊಂಡು ಕೆಟ್ಟ ವಾಸನೆ ಬರುತ್ತಿದೆ. ಫ್ರಿಡ್ಜ್ ಓಪನ್ ಮಾಡ್ತಿದ್ದಂತೆ ಅಕ್ಕ, ತಾಯಿ ಇಬ್ಬರು ಏಕಾಏಕಿ ಕಿರುಚಾಡಿ ಹೊರಗೆ ಬಂದಿದ್ದಾರೆ.

ಯಾರು ಕೊಲೆ ಮಾಡಿದ್ದಾರೆ ಅಂತ ಗೊತ್ತಿಲ್ಲ. ಅವರಿಗೆ ಶಿಕ್ಷೆ ಆಗಬೇಕು. ಪ್ರೀಜರ್​ನಲ್ಲಿ ದೇಹವನ್ನು ತುಂಡು ತುಂಡು ಮಾಡಿ ಇಟ್ಟಿದ್ದರು. ಅಕ್ಕ-ನಾನು ಭೇಟಿಯಾಗಿ ಒಂದು ವರ್ಷ ಆಗಿತ್ತು. ಅಕ್ಕ ಪತಿಯಿಂದ ಬೇರೆಯಾಗಿದ್ದಳು. ಕೊಲೆ ಯಾರು ಮಾಡಿದಾರೆ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಕೊಲೆಯಾದ ಮಹಾಲಕ್ಷ್ಮೀ ತಂಗಿ ಸಹೀದಾ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular