ಬೆಂಗಳೂರು ; ಬಿಜೆಪಿಯಲ್ಲಿನ ಗುಂಪುಗಾರಿಕೆ, ಭಿನ್ನಮತಗಳಿಗೆ ತಡೆ ಹಾಕಲು ಆರ್‌ಎಸ್‌ಎಸ್ ನಾಯಕರ ಮಧ್ಯಸ್ಥಿಕೆಯಲ್ಲಿ ನಿನ್ನೆ ಸಂಧಾನ ಸಭೆ ನಡೆದಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವಂತಹ ಹೇಳಿಕೆಗಳನ್ನು ನೀಡದಂತೆ ಸಭೆಯಲ್ಲಿ ತಾಕೀತು ಮಾಡಲಾಗಿದ್ದು, ಭಿನ್ನಮತೀಯರಿಗೂ ಖಡಕ್ ಎಚ್ಚರಿಕೆಯನ್ನು ಈ ಸಭೆಯಲ್ಲಿ ನೀಡಲಾಗಿದೆ.
ಬೆಂಗಳೂರಿನ ಸದಾಶಿವ ನಗರದಲ್ಲಿರುವ ರಾಷ್ತ್ತ್ರೋತ್ಥಾನ ಪರಿಷತ್‌ನ ಕಚೇರಿಯಲ್ಲಿ ಈ ಸಭೆ ನಡೆದಿದ್ದು, ಈ ಸಭೆಯಲ್ಲಿ 40 ಕ್ಕೂ ಹೆಚ್ಚು ಬಿಜೆಪಿ ನಾಯಕರು ಭಾಗಿಯಾಗಿದ್ದರು. ಯಾವುದೇ ಸಮಸ್ಯೆಗಳಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಿ. ಅದುಬಿಟ್ಟು ನಾಯಕರ ವಿರುದ್ಧ ಬಹಿರಂಗವಾಗಿ ಮಾತನಾಡಬೇಡಿ. ಪಕ್ಷದ ಸಿದ್ಧಾಂತ, ನೀತಿ- ನಿಲುವುಗಳನ್ನು ಒಪ್ಪಿಕೊಂಡು ಅದಕ್ಕೆ ತಕ್ಕಂತೆ ನಡೆದುಕೊಳ್ಳಿ. ಅದು ಬಿಟ್ಟು ನಾಯಕರುಗಳನ್ನು ಟೀಕಿಸುತ್ತ ಪಕ್ಷಕ್ಕೆ ಮುಜುಗರ ಮಾಡಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ನಿಮ್ಮ ಚಾಳಿಯನ್ನು ಇಲ್ಲಿಗೇ ಬಿಟ್ಟುಬಿಡಿ, ಇಲ್ಲದಿದ್ದರೆ ಬೇರೆ ದಾರಿ ಕಂಡುಕೊಳ್ಳಿ ಎಂದು ಭಿನ್ನಮತೀಯ ನಾಯಕರುಗಳಿಗೆ ಆರ್‌ಎಸ್‌ಎಸ್ ನಾಯಕರು ಕಟ್ಟಪ್ಪಣೆ ವಿಧಿಸಿದ್ದಾರೆ.
ಪಕ್ಷದ ವರಿಷ್ಠರು ಎಲ್ಲರೊಡನೆ ಚರ್ಚಿಸಿ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ತೀರ್ಮಾನಗಳನ್ನು
ಕೈಗೊಂಡಿದ್ದಾರೆ. ಅದರ ವಿರುದ್ಧ ಹೇಳಿಕೆ ಕೊಡುವುದು ಹೊಂದಾಣಿಕ ರಾಜ್ಯಕಾರಣವಿದೆಯೆAದೆಲ್ಲ ಹೇಳುವುದು. ಕೆಲವರನ್ನು ಬದಲಾಯಿಸಿ, ಕೆಲವರಿಗೆ ಇಂತಹುದೆ ಸ್ಥಾನಮಾನ ಕೊಡಿ ಎಂದೆಲ್ಲ ಹೇಳುವುದು ಬೇಡ ಯಾವುದೇ ಸಮಸ್ಯೆ ಇದ್ದರೆ ವರಿಷ್ಠರ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ ಎಂದು ಆರ್‌ಎಸ್‌ಎಸ್ ನಾಯಕರು ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಈ ಸಭೆಯಲ್ಲಿ ಆರ್‌ಎಸ್‌ಎಸ್ನಾ ಯಕರು ಮುಂದೆ ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಗುಂಪುಗಾರಿಕೆ ಬೇಡ, ಎಲ್ಲರೂ ಒಟ್ಟಾಗಿ ಹೊಂದಾಣಿಕೆ ಮಾಡಿಕೊAಡು ಪಕ್ಷ ಸಂಘಟನೆ ಮುAದಾಗಿ ಮಾಧ್ಯಮಗಳ ಮುಂದೆ ಮಾತನಾಡುವುದನ್ನು ಬಿಡಿ, ಪರಸ್ಪರ ದೂಷಣೆ ಮಾಡುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಇಲ್ಲಿಗೇ ಎಲ್ಲವನ್ನೂ ಮರೆತು ಪಕ್ಷ ಸಂಘಟನೆಗೆ ಗಮನ ಹರಿಸಿ ಎಂದು ಆರ್‌ಎಸ್‌ಎಸ್ ನಾಯಕರು ಸಭೆಯಲ್ಲಿದ್ದ
ಎಲ್ಲ ನಾಯಕರುಗಳಿಗೂ ಕಿವಿಮಾತು ಹೇಳಿದ್ದಾರೆ


