ಬೆಂಗಳೂರು : ಎಲುಬಿಲ್ಲದ ನಾಲಗೆ ಏನನ್ನು ಬೇಕಾದರೂ ಆಡುತ್ತೆ ಎಂಬ ಗಾದೆ ಮಾತಿನ ತರಹ ಶಾಸಕ ಎಚ್.ಸಿ.ಬಾಲಕಷ್ಣ ಬಿಜೆಪಿ ಸಂಸದರ ವಿರುದ್ಧ ತಮ್ಮ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ. ಸುದ್ದಿಗಾರರೊಡನೆ ಮಾತನಾಡಿ, ಬಿಜೆಪಿಯಲ್ಲಿ ಯಾರೂ ಗಂಡಸರಿಲ್ಲ, ಬಿಜೆಪಿ ಸಂಸದರೆಲ್ಲಾ ಶೋ ಪೀಸ್‌ಗಳು ಕೇವಲ ದೆಹಲಿಗೆ ಹೋಗೋದು ಟಿಎ-ಡಿಎ ತಕೊಂಡು ಬರೋದು ಅಷ್ಟೇ ಎನ್ನುವುದರ ಮೂಲಕ ಕೇಂದ್ರದಿAದ ಅನುದಾನ ತರಿಸದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಎಂಪಿಗಳು. ಮAತ್ರಿಗಳು ರಾಜ್ಯದ ಧ್ವನಿ ಎತ್ತಿಲ್ಲ ಹಾಗಾಗಿ ನಾವು ಹೋರಾಟ ಮಾಡುತ್ತಿದ್ದೀವಿ ಪಾಪ ನಮ್ಮ ಹೋರಾಟ ನೋಡಿ ಬಿಜೆಪಿಯ ಗಂಡಸರು ಹೋರಾಟ ಮಾಡ್ತಾರಾ ನೋಡೋಣ ಎಂದು ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಹೇಳಿದರ ಅರ್ಥ ಬಿಜೆಪಿಯಲ್ಲಿ ಯಾರೂ ಗಂಡಸರಿಲ್ಲ ಅಂತ. ಈಗಿರುವ ಬಿಜೆಪಿ ಎಂಪಿಗಳು ಯಾರೂ ಗಂಡಸರಲ್ಲ, ಕೇಂದ್ರದಿAದ ಅನುದಾನ ತಾರತಮ್ಯ ಖಂಡಿಸಿ ದೆಹಲಿಯಲ್ಲಿ ಹೋರಾಟ ಮಾಡುತ್ತೇವೆ. ಹೆಚ್ಚು ಟ್ಯಾಕ್ಸ್ ಕಟ್ಟುವ ಎರಡನೇ ರಾಜ್ಯ ನಮ್ಮದು, ಕೊಡಬೇಕಾದ ಅನುದಾನವನ್ನು ನಮಗೆ ಕೊಡುತ್ತಿಲ್ಲ. ಬಿಜೆಪಿಯ ಸಂಸದರು ನರೇAದ್ರ ಮೋದಿ ಮುಂದೆ ಕೂರೋದೂ ಇಲ್ಲ, ಏಳೋದೂ ಇಲ್ಲ ಎಂದು ಬಿಜೆಪಯವರ ವರ್ತನೆಯನ್ನು ಟೀಕಿಸಿದರು.
ಕೇವಲ ಮೋದಿ ಹೆಸರಲ್ಲಿ ಗೆಲ್ಲುತ್ತಾರೆ, ಆದರೆ ವೈಯಕ್ತಿಕ ವರ್ಚಸ್ಸು ಇಲ್ಲ. ಪಕ್ಕದ ತಮಿಳುನಾಡು ತನ್ನ ಹಕ್ಕಿಗಾಗಿ ಮಾಡುವ ಹೋರಾಟವನ್ನು ನೋಡಿ ಕಲಿಯಲಿ ಎಂದರು.


