Friday, March 13, 2026
Flats for sale
Homeಕ್ರೈಂಬೆಂಗಳೂರು : ಬಾಯ್‌ ಫ್ರೆಂಡ್‌ ಜತೆ ಸೇರಿ ಹೆತ್ತ ಮಗುವಿನ ಮೇಲೆ ಹಲ್ಲೆ,ಮಗುವಿನ ಮರ್ಮಾಂಗ ಕಚ್ಚಿದ...

ಬೆಂಗಳೂರು : ಬಾಯ್‌ ಫ್ರೆಂಡ್‌ ಜತೆ ಸೇರಿ ಹೆತ್ತ ಮಗುವಿನ ಮೇಲೆ ಹಲ್ಲೆ,ಮಗುವಿನ ಮರ್ಮಾಂಗ ಕಚ್ಚಿದ ಪಾಪಿ ತಾಯಿ .

ಬೆಂಗಳೂರು : ಎಷ್ಟೋ ಜನ ಮಕ್ಕಳಿಲ್ಲದೆ ದತ್ತು ತೆಗೆದುಕೊಂಡು ತಾವು ಹೆತ್ತ ಮಕ್ಕಳ ರೀತಿ ಸಾಕುತ್ತಾರೆ,ಆದರೆ ಇಲ್ಲಿ ಒಬ್ಬಳು ರಕ್ಷಾಶ ವಂಶದವಳು ಏನೂ ಅರಿಯದ ಮಗುವನ್ನು ಕೂಡಿ ಹಾಕಿ, ಮನಬಂದಂತೆ ಹೊಡೆದು ಬಡಿದು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ವೀರಭದ್ರ ನಗರದಲ್ಲಿ ನಡೆದಿದೆ.

ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ ಹೋದರೆ ರಾತ್ರಿ ಬರುವವರೆಗೂ ಬಾಗಿಲು ತೆಗಯದೆ ಕೂಡಿಹಾಕುತ್ತಾಳೆ. ಈ ವಿಷಯ ತಿಳಿಯುತ್ತಿದ್ದಂತೆ ಸಂಘಟನೆಯೊಂದು ಮಗುವಿನ ರಕ್ಷಣೆಗೆ ಬಂದಿದೆ. ಗಂಡನಿಂದ ವಿಚ್ಛೇದನೆ ಪಡೆದುಕೊಂಡಿರುವ ಸ್ಟ್ಯಾಲಿನ್ ಎನ್ನುವ ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ಎರಡ್ಮೂರು ವರ್ಷದ ಮಗುವಿನ ಮೇಲೆ ಹಲ್ಲೆ ಮಾಡಿದ್ದಾಳೆ.ಮಗುವಿನ ಲಾಲನೆ ಪಾಲನೆ ಮಾಡಬೇಕಾದವಳೇ ಮನೆಯಲ್ಲಿ ಕೂಡಿ ಹಾಕಿ, ಮನಬಂದಂತೆ ಹೊಡೆದು ಬಡಿದು ಮಾಡಿದ್ದಾಳೆ. ತನ್ನ ಪ್ರಿಯಕರನ ಜತೆ ಸೇರಿ ಮಗುವಿನ ಮರ್ಮಾಂಗವನ್ನೇ ಕಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಮಗುವಿನ ಮೈತುಂಬ ಗಾಯಗಳಾಗಿವೆ. ಮನೆಗೆ ಬಂದ ಅಂಕಲ್‌ವೊಬ್ಬರ್‌ ಕುಕ್ಕರ್‌ನಿಂದ ತಲೆಗೆ ಹೊಡೆದರಂತೆ. ಅಮ್ಮ ಕೂಡ ನೀನು ಬೇಡ ಮನೆ ಬಿಟ್ಟು ಹೋಗು ಎಂದು ಕಾಲಲ್ಲಿ ಒದ್ದರಂತೆ. ಇದೆಲ್ಲವನ್ನೂ ಮಗುವು ಸಂಘಟನೆಯೊಬ್ಬರ ಬಳಿ ಹೇಳಿಕೊಂಡಿದೆ.ಈ ಅಮಾನುಷ್ಯ ಕೃತ್ಯ 2-3 ವರ್ಷದ ಮಗುವು ತೊದಲನುಡಿಯಲ್ಲೇ ತನಗೆ ಹೇಗೆಲ್ಲ ಹೊಡೆದು ಹಿಂಸೆ ಕೊಟ್ಟರು ಎಂಬುದನ್ನು ತಿಳಿಸಿದೆ.

ನನ್ನ ಗಂಡನ ಜೊತೆ ವಿಚ್ಛೇದನವಾಗಿದ್ದು,ನನಗೆ ಕೆಲಸ ಇರಲಿಲ್ಲ ಮನೆಯಲ್ಲಿ ನಾನು ಒಬ್ಬರೇ ಇರುವುದು. ಹೀಗಾಗಿ ಮಗುವನ್ನ ಕೂಡಿ ಹಾಕುತ್ತಿದ್ದೆ,ಆದ್ರೆ ಮಗು ಬುದ್ಧಿಕಲಿಬೇಕು ಎಂದು ಮಾಡಿದ್ದೀನಿ. ಜೀವನದಲ್ಲಿ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಈ ರೀತಿ ಮಾಡಿದ್ದೀನಿ. ಮಗುವೇ ಸುಳ್ಳು ಹೇಳುತ್ತೆ ಎಂದು ಮಗುವನ್ನು ಹೊಡೆದಿರುವುದನ್ನು ಸ್ವತಃ ತಾಯಿ ಸ್ಟ್ಯಾರೀನ್ ಒಪ್ಪಿಕೊಂಡಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

Most Popular