ಬೆಂಗಳೂರು : ರೈತರಿಗೆ ಕೊಡುವ ಬರ ಪರಿಹಾರದಲ್ಲೂ ಬಿಜೆಪಿ ಸರ್ಕಾರದಲ್ಲಿ ಭಾರೀ ಲೂಟಿಯಾಗಿದ್ದು ವ್ಯಾಪಕ ಅವ್ಯವಹಾರವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಳೆದ ವರ್ಷ ರೈತರಿಗೆ ಕೊಡುವ ಬರಪರಿಹಾರದಲ್ಲಿ ದೊಡ್ಡ ಮಟ್ಟದ ಲೂಟಿಯಾಗಿದೆ. ಗ್ರಾಮ ಲೆಕ್ಕಿಗರು ಯಾರದ್ದೋ ಜಮೀನಿಗೆ ಇನ್ನಾರಿಗೋ ಪರಿಹಾರ ಕೊಡುವಂತೆ ಮಾಡಿದ್ದಾರೆ. ಬೆಳೆ ಬೆಳೆಯದವರಿಗೇ ಪರಿಹಾರ ಸಿಕ್ಕಿದೆ. ಈ ಲೂಟಿ ಕಂಡುಬAದರೂ ಆಗಿನ ಸರ್ಕಾರ (ಬೊಮ್ಮಾಯಿ ಸರ್ಕಾರ) ತಡೆಗಟ್ಟುವ ಕೆಲಸ ಮಾಡಿಲ್ಲ. ತನಿಖಾ ವರದಿ ಬಂದರೂ ಕ್ರಮ ಕೈಗೊಳ್ಳದೇ ಮೌನ ವಹಿಸಿತ್ತು ಎಂದು ಪುನರುಚ್ಚರಿಸಿದರು.
ನಮ್ಮ ಸರ್ಕಾರ ಬರಪರಿಹಾರದ ಹಣ ದುರುಪಯೋಗ ಆಗದಂತೆ ನೇರವಾಗಿ ರೈತರ ಖಾತೆಗಳಿಗೆ ಹಣತಲುಪಿಸಲು ಕ್ರಮ ಕೈಗೊಂಡಿದೆ. ಬೆಳೆನಷ್ಟದಿಂದ ತೊಂದರೆಯಲ್ಲಿರುವ ರೈತರ ನೆರವಿಗೆ ಸರ್ಕಾರ ಮುಂದಾಗಿದ್ದು ಈ ತನಕ 33 ಲಕ್ಷ ರೈತರಿಗೆ 627 ಕೋಟಿ ರೂಪಾಯಿ ಪರಿಹಾರದ ಹಣ ನೀಡಲಾಗಿದೆ. ಇನ್ನೂ 66 ಸಾವಿರ ರೈತರಿಗೆ ಹಣ ಸಂದಾಯ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಕೃಷ್ಣ ಭೈರೇಗೌಡ ತಿಳಿಸಿದರು.
ಸದ್ಯ ರಾಜ್ಯದ 223 ತಾಲ್ಲೂಕುಗಳಲ್ಲಿ ಬರ ಇದ್ದು ಪರಿಸ್ಥಿತಿ ನಿಭಾಯಿಸಲು ಜಿಲ್ಲಾಧಿಕಾರಿತಹಶೀಲ್ದಾರ್‌ಗಳಿಗೆ 870 ಕೋಟಿ ರೂಪಾಯಿ ಒದಗಿಸಲಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಲಾಗಿದೆ.
ಕುಡಿಯುವ ನೀರಿನ ಸಮಸ್ಯೆಯಿರುವ 202 ಹಳ್ಳಿಗಳಿಗೆ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು 46 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಇದೇ ವೇಳೆ 7082 ಗ್ರಾಮಗಳು ಮತ್ತು 1193 ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಬರಬಹುದೆಂದು ಅಂದಾಜಿಸಲಾಗಿದ್ದು ಟೆಂಡರ್ ಕರೆದು ಬಾಡಿಗೆ ಮೂಲಕ ಟ್ಯಾಂಕರ್ ಮೂಲಕ ನೀರು ಒದಗಿಸಲು ಸೂಚನೆ ಕೊಟ್ಟಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು. ರಾಜ್ಯದಲ್ಲಿ ನೀರಿನ ಕೊರತೆ ನಿಭಾಯಿಸಲು 2654 ಖಾಸಗಿ ಬೋರ್‌ವೆಲ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಗುರುತಿಸಲಾಗಿದ್ದು
ರೈತರ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ತೀರಾ ಅನಿವಾರ್ಯವಾದರೆ ಡಿಪಿಆರ್ ಮೂಲಕ ಬೋರ್‌ವೆಲ್‌ಗಳನ್ನು ಕೊರೆಸಲು ಸೂಚನೆ ನೀಡಲಾಗಿದೆ. ಈಗಾಗಲೇ ಮೂರು ಕಡೆ ಗೋಶಾಲೆ ತೆರೆಯಲಾಗಿದೆ. ಏಪ್ರಿಲ್‌ವರೆಗೆ ಮೇವಿನ ಕೊರತೆ ನೀಗಿಸಲು ಎರಡು
ಲಕ್ಷ ಮೇವಿನ ಕಿಟ್ ಕೊಡುತ್ತೇವೆ. ಮೇವು ಖರೀದಿಸಲು, ಶೇಖರಿಸಲು ಕಾರ್ಯಪಡೆಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಕೃಷ್ಣ ಭೈರೇಗೌಡ ವಿವರಿಸಿದರು.


