Wednesday, November 19, 2025
Flats for sale
Homeರಾಜ್ಯಬೆಂಗಳೂರು : ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ…!

ಬೆಂಗಳೂರು : ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ…!

ಬೆಂಗಳೂರು : 114 ವರ್ಷದ ವೃಕ್ಷಮಾತೆ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಮಕ್ಕಳಿಲ್ಲದ ಕಾರಣಕ್ಕೆ ಸಸಿಗಳನ್ನೇ ಮಕ್ಕಳಂತೆ ಬೆಳೆಸಿ, 385 ಆಲದ ಮರಗಳು ಸೇರಿದಂತೆ 8,000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದರು. ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಅವರನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ಚಿಕ್ಕಯ್ಯ ಎಂಬವರೊಂದಿಗೆ ಮದುವೆ ಮಾಡಿಕೊಡಲಾಗುತ್ತದೆ. ಆದ್ರೆ ಚಿಕ್ಕಯ್ಯ-ತಿಮ್ಮಯ್ಯ ದಂಪತಿಗೆ ಮಕ್ಕಳಾಗುವುದಿಲ್ಲ. ಮಕ್ಕಳಿಲ್ಲದ ದುಃಖವನ್ನು ಮರೆಯಲು ತಿಮ್ಮಕ್ಕ ಅವರು ಮರಗಳನ್ನು ನೆಡಲು ಆರಂಭಿಸುತ್ತಾರೆ. ರಾಜ್ಯ ಹೆದ್ದಾರಿ 99ರ ಕುದೂರಿನಿಂದ ಹುಲಿಕಲ್ ಮಾರ್ಗದ ನಡುವೆ ತಿಮ್ಮಕ್ಕ ಅವರು ನೆಟ್ಟಿರುವ ಮರಗಳನ್ನು ಕಾಣಬಹುದು. ಈ ಆಲದ ಮರಗಳು ಹೆಮ್ಮರವಾಗಿ ಬೆಳೆದು ನಿಂತಿವೆ. ಈ ಮರಗಳನ್ನೇ ತಿಮ್ಮಕ್ಕ ಅವರು ಮಕ್ಕಳಂತೆ ಕಾಣುತ್ತಿದ್ದರು.

2019 ರಲ್ಲಿ ಪದ್ಮಶ್ರೀ ಪ್ರಶಸ್ತಿಯ ಗೌರವ ತಿಮ್ಮಕ್ಕ ಅವರು ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಅಂದಿನಿಂದ ಇವರನ್ನು ಸಾಲು ಮರದ ತಿಮ್ಮಕ್ಕ ಎಂದು ಗುರುತಿಸಲಾಗುತ್ತದೆ. ಸಾಲು ಮರದ ತಿಮ್ಮಕ್ಕ ಅವರನ್ನು ಭಾರತದ ರಾಷ್ಟ್ರೀಯ ನಾಗರಿಕ ಪ್ರಶಸ್ತಿಯಿಂದ ಗೌರವಿಸಲಾಗಿದೆ. ಭಾರತ ಸರ್ಕಾರ 2019 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಸಾಲು ಮರದ ತಿಮ್ಮಕ್ಕ ಅವರನ್ನು ಗೌರವಿಸಲಾಗಿದೆ. ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯವು 2020 ರಲ್ಲಿ ತಿಮ್ಮಕ್ಕ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಘೋಷಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular