Saturday, March 14, 2026
Flats for sale
Homeರಾಜ್ಯಬೆಂಗಳೂರು : ನೀರಿಲ್ಲದೆ ಮಾಲ್‌ಗೆ ಶೌಚ ಮಾಡಲು ಹೊರಟ ಬೆಂಗಳೂರಿಗರು.

ಬೆಂಗಳೂರು : ನೀರಿಲ್ಲದೆ ಮಾಲ್‌ಗೆ ಶೌಚ ಮಾಡಲು ಹೊರಟ ಬೆಂಗಳೂರಿಗರು.

ಬೆಂಗಳೂರು : ನೀರಿನ ಮಹತ್ವ ಜನರಿಗೆ ಈಗ ಗೊತ್ತಗ್ತಾ ಇದೆ ಬೆಂಗಳೂರಲ್ಲಿ ನೀರಿನ ಬರ ಎಷ್ಟಿದೆ ಅಂದ್ರೆ ಜನ ನೀರಿಲ್ಲದೆ ಜನ ಊರು ಬಿಟ್ಟು ಹೋಗುವ ಸ್ಥಿತಿ ಬಂದಿದೆ.ಟ್ಯಾಂಕಲ್ಲೂ ಇಲ್ಲ, ಸಂಪಲ್ಲೂ ಇಲ್ಲ, ಕುಡಿಯೋಕೂ ನೀರಿಲ್ಲ ತಿಕ ತೊಳೆಯೋಕೂ ನೀರಿಲ್ಲ, ಬೆಂಗಳೂರಿನಲ್ಲಿ ನೀರಿಲ್ಲಂದತ್ತಾಗಿದೆ. ನಗರದಲ್ಲಿ ತೀವ್ರ ನೀರಿನ ಬಿಕ್ಕಟ್ಟಿನ ಮಧ್ಯೆ ಜನರು ಶೌಚಾಲಯಗಳನ್ನು ಬಳಸಲು ಹತ್ತಿರದ ಮಾಲ್‌ಗಳಿಗೆ ಹೋಗುತ್ತಿದ್ದಾರೆ ಪ್ರೆಸ್ಟೀಜ್ ಫಾಲ್ಕನ್ ಸಿಟಿಯ ಜನರು 1 ಕೋಟಿ ರೂ. ಇಎಂಐ ಪಾವತಿಸುತ್ತಿದ್ದಾರೆ. ಆದರೆ ಶೌಚಾಲಯದಲ್ಲಿ ಫ್ಲಶ್ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ನೀರಿಲ್ಲ. ನಾವು ಎಲ್ಲಿಗೆ ಬಂದಿದ್ದೇವೆ? ಇದಕ್ಕೆ ನಿಮ್ಮ ದೀರ್ಘಾವಧಿಯ ಪರಿಹಾರವೇನು?ಎಂದು ನಗರದ ನಿವಾಸಿಯೊಬ್ಬರು ಹೇಳಿದ್ದಾರೆ.

ಕಳೆದ ಹಲವು ದಿನಗಳಿಂದ ನೀರಿಲ್ಲದ ಪರಿಣಾಮ ಶೌಚಾಲಯಗಳು ಸ್ವಚ್ಚಗೊಳಿಸದಿರುವುದರಿಂದ ಗಬ್ಬು ವಾಸನೆ ಬರುತ್ತಿವೆ. ಹೀಗಾಗಿ ಜನರು ತಮ್ಮ ನಿತ್ಯಕರ್ಮಗಳನ್ನು ಮಾಡಲು ಹತ್ತಿರದ ಮಾಲ್‌ಗೆ ಹೋಗುತ್ತಿರುವುದು ಸಾಮಾನ್ಯವಾಗಿದೆ ಎಂದು ನಿವಾಸಿಯೊಬ್ಬರು ಪೋಸ್ಟ್ ಹಂಚಿಕೊಂಡಿದ್ದಾರೆ.ಇನ್ನುಅನೇಕ ಜನರು ಬಟ್ಟೆ ಮತ್ತು ಟವೆಲ್ ಜೊತೆಗೆ ಜಿಮ್‌ಗಳಿಗೆ ತೆರಳುತ್ತಿದ್ದು, ಇಲ್ಲಿಯೇ ಸ್ನಾನ ಮಾಡಿ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಅದೆಷ್ಟರ ಮಟ್ಟಿಗೆ ಅಂದರೆ ಖುದ್ದು ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಟ್ಯಾಂಕರ್ ಮೂಲಕ ನೀರು ಹರಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ನ ತೀರ್ಪಿನಂತೆ ತಮಿಳುನಾಡಿಗೆ ನೀರು ಬಿಟ್ಟ ಪರಿಣಾಮ ಈ ಪರಿಸ್ಥಿತಿ ಉಂಟಾಗಿದೆ ಎಂದು ಸರಕಾರ ತಮಿಳರನ್ನು ಮೆಚ್ಚಿಸಲು ಹೋಗಿ ಬೆಂಗಳೂರಿಗರಿಗೆ ತಿಕ ತೊಳಿಯಲು ನೀರಿಲ್ಲದಂತೆ ಮಾಡಿದೆ ಎಂದು ಮಲ್ಲೇಶ್ವರಂ ನಿವಾಸಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular