ಬೆಂಗಳೂರು : ಶುಕ್ರವಾರ ರಾಜಸ್ಥಾನದಿಂದ ಸುಮಾರು 90 ಬಾಕ್ಸ್ಗಳಲ್ಲಿ ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಮಾಂಸವು ಸರಬರಾಜಾಗಿತ್ತು. ಈ ಬಗ್ಗೆ ಅನುಮಾನಗೊಂಡ ಹಿಂದೂಪರ ಸಂಘಟನೆಗಳು ದಾಳಿ ನಡೆಸಿ, ಸರಬರಾಜಾಗಿರುವ ಮಾಂಸವು ಕುರಿಯದ್ದಲ್ಲ. ನಾಯಿ ಮಾಂಸ ಎಂದು ಅನುಮಾನ ವ್ಯಕ್ತಪಡಿಸಿದರು.
ಒಟ್ಟು 90 ಥರ್ಮಾಕೋಲ್ ಬಾಕ್ಸ್ಗಳನ್ನು ಸೀಜ್ ಮಾಡಲಾಗಿದೆ. ಒಂದೊಂದರಲ್ಲಿ 30ರಿಂದ 40 ಕೆಜಿ ಮಾಂಸ ತರಿಸಲಾಗಿತ್ತು. ಒಂದೊಂದು ಬಾಕ್ಸ್ಗಳಲ್ಲಿ ಒಂದೊಂದು ರೀತಿಯ ಮಾಂಸವಿದೆ. ಒಂದು ಬಾಕ್ಸ್ನಲ್ಲಿ ತಲೆ, ಮತ್ತೊಂದರಲ್ಲಿ ದೇಹ, ಒಂದೊಂದರಲ್ಲಿ ಕಾಲುಗಳು, ಹೀಗಿದೆ. ಒಟ್ಟು ನಾಲ್ಕು ಟಾಟಾ ಏಸ್ಗಳಲ್ಲಿ ಮಾಂಸದ ಬಾಕ್ಸ್ ತರಿಸಲಾಗಿತ್ತು. ಎಲ್ಲವನ್ನೂ ಫ್ರೀಜರ್ನಲ್ಲಿ ಸ್ಟೋರ್ ಮಾಡಲಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ನೂರಾರು ಮಾಂಸದ ಬಾಕ್ಸ್ಗಳನ್ನು ತುಂಬಿರುವ ವಾಹನವನ್ನು ತಡೆದಿರುವ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.ಇದೆಲ್ಲದರ ನಡುವೆ ಹಿಂದೂ ಮುಖಂಡ ಪುನೀತ್ ಕೆರೆ ಹಳ್ಳಿಯನ್ನು ಕಾಟನ್ ಪೇಟೆ ಪೊಲೀಸರು ಮಧ್ಯರಾತ್ರಿ 12 ಗಂಟೆಗೆ ಬಂಧಿಸಿದ್ದರು. ಬಿಎನ್ಎಸ್ 132 ಆ್ಯಕ್ಟ್ ( ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ, 351 (2) ಅಡಿಯಲ್ಲಿ ಪೊಲೀಸರು ಬಂಧನ ಮಾಡಿದ್ದರು. ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಬಾಕ್ಸ್ ಸಾಗಾಟಕ್ಕೆ ತಡೆ ನೀಡಿ, ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಬಂಧನವಾಗಿತ್ತು.
ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಅಸ್ವಸ್ಥಗೊಂಡು, ಪ್ರಜ್ಙಾಹೀನ ಸ್ಥಿತಿಯಲ್ಲಿದ್ದರು. ಇದೀಗ ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ 4.45 ಕ್ಕೆ ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕೆ.ಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಪುನೀತ್ ಕೆರೆಹಳ್ಳಿಯನ್ನು ಕರೆದುಕೊಂಡು ಬಂದಿದ್ದಾರೆ.