Wednesday, November 5, 2025
Flats for sale
Homeರಾಜ್ಯಬೆಂಗಳೂರು : ನಾಗಮಂಗಲದಲ್ಲಿ ಬಾಂಬ್ ಸಿಡಿಸಿಕೊಂಡು ಭಗ್ನಪ್ರೇಮಿ ಆತ್ಮಹತ್ಯೆ!

ಬೆಂಗಳೂರು : ನಾಗಮಂಗಲದಲ್ಲಿ ಬಾಂಬ್ ಸಿಡಿಸಿಕೊಂಡು ಭಗ್ನಪ್ರೇಮಿ ಆತ್ಮಹತ್ಯೆ!

ಬೆಂಗಳೂರು : ಕಲ್ಲು ಬಂಡೆಯ ಕ್ವಾರಿಗಳಲ್ಲಿ ಬಳಸುವ ಜಿಲೆಟಿನ್ ಕಡ್ಡಿಗಳನ್ನು ಜೋಡಿಸಿ ತಯಾರಿಸಿಕೊಂಡ ಬಾಂಬ್’ ಸ್ಫೋಟಿಸಿ ಕೊಂಡು ಯುವಕ ನೋರ್ವ ಆತ್ಮಹತ್ಯೆ ಮಾಡಿಕೊಂಡ ಭಯಾನಕ ಪ್ರಕರಣ ನಾಗಮಂಗಲ ತಾಲ್ಲೂಕಿನ ಹೊಣ ಕೆರೆ ಹೋಬಳಿ ಕಾಳೇ ನಹಳ್ಳಿ ಗ್ರಾಮದಲ್ಲಿ ಭಾನುವಾರ ಮುಂಜಾನೆ 4 ಗಂಟೆಗೆ ನಡೆದಿದೆ.

ಬಸವೇಶ್ವರ ನಗರದ ಚಾಮುಂಡಿ ಎಂಬು ವರ ಮಗ ರಾಮಚಂದ್ರ (21) ಆತ್ಮ ಹತ್ಯೆಗೆ ಶರಣಾದವ. ಕಾಳೇನಹಳ್ಳಿ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕಳೆದ ಕೆಲ ವರ್ಷ ಗಳಿಂದ ಪ್ರೀತಿಸುತ್ತಿದ್ದ ಯುವತಿಯ ಮನೆ
ಮುಂಭಾಗವೇ ಬಂಡೆ ಸಿಡಿಸುವ ಸ್ಫೋಟಕ ಬಳಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಫೋಟಕದ ತೀವ್ರತೆಗೆ ಯುವಕನ ದೇಹ ಛಿದ್ರವಾಗಿದೆ. ಕಳೆದ ವರ್ಷ ಅದೇ ಬಾಲಕಿಯ ಜೊತೆ ಗೂಡಿ ಮನೆ ಬಿಟ್ಟು ಹೋಗಿದ್ದ ರಾಮಚಂದ್ರನ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಜೈಲುವಾಸದಿಂದ ಜಾಮೀನಿನ ಮೇಲೆ ಹೊರ ಬಂದಿದ್ದ ಯುವಕನಿಗೆ ಪ್ರೀತಿಸುತ್ತಿದ್ದ ಯುವತಿಗೆ ಮತ್ತೊಂದು ಯುವಕ ನೊಂದಿಗೆ ಮದುವೆ ನಿಶ್ಚಯವಾಗಿದ್ದ ವಿಷಯ ತಿಳಿದು ಯುವತಿಯ ಮನೆ ಬಳಿ ಹೋಗಿ ಈ ರೀತಿ ಸ್ವಯಂ ಸ್ಫೋಟಕ ಸಿಡಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಸುದ್ದಿಗರರೊಂದಿಗೆ ಮಾತನಾಡಿದ ಅವರು ಮೇಲ್ನೋಟಕ್ಕೆಇದು ಆತ್ಮಹತ್ಯೆ ಎಂದು ಕಂಡು ಬರುತ್ತಿದ್ದರೂ ಎಲ್ಲಾ
ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದರು. ಗ್ರಾಮಾAತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular