ಬೆಂಗಳೂರು : ಬಿಗ್ ಬಾಸ್ ಒಂದು ನಾಟಕ ರಂಗ ಇದರಲ್ಲಿ ಇನ್ನೇನೆಲ್ಲಾ ನಡೆಯಲಿಕ್ಕೆ ಇದೆಯೋ ಎಲ್ಲವು ನೀಗೂಡ . ಬಿಗ್ ಬಾಸ್ ಕನ್ನಡ ಸೀಸನ್ 10’ ಕೊನೆಯ ಹಂತಕ್ಕೆ ಬಂದಿದೆ. ಇನ್ನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದೆ. ಸದ್ಯ ಮನೆಯಲ್ಲಿ ಒಂಭತ್ತು ಮಂದಿ ಇದ್ದು ಸ್ಪರ್ಧೆ ಜೋರಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳೋದು ತುಂಬಾನೇ ಮುಖ್ಯ ಆಗುತ್ತದೆ. ಇಂಥ ಸಂದರ್ಭದಲ್ಲಿ ಆಸ್ಪತ್ರೆ ಸೇರಿದರೆ ಅವರಿಗೆ ಬೀಳೋ ವೋಟ್ ಮೇಲೆ ಇದು ಪ್ರಭಾವ ಬೀರುತ್ತದೆ. ಈಗ ಡ್ರೋನ್ ಪ್ರತಾಪ್ ಅವರು ಇದೇ ರೀತಿಯ ತೊಂದರೆ ಅನುಭವಿಸಿದ್ದಾರೆ. ಅವರಿಗೆ ಆರೋಗ್ಯ ಕೈ ಕೊಟ್ಟಿದೆ. ಅಲ್ಲದೆ, ಅವರು ಬಿಗ್ ಬಾಸ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಕೆಲವು ಕಡೆಗಳಲ್ಲಿ ವದಂತಿ ಹಬ್ಬಿತ್ತು. ಆ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ.
ಸಂಗೀತಾ ಅವರು ಕ್ಯಾಮೆರಾ ಎದುರು ಬಂದು ‘ಮಿಸ್ ಯೂ ಪ್ರತು’ ಎಂದು ಹೇಳಿದ್ದರು. ಡ್ರೋನ್ ಪ್ರತಾಪ್ ಅವರು ಲೈವ್ನಲ್ಲಿ ಕಾಣಿಸಿರಲಿಲ್ಲ. ಪ್ರತಾಪ್ ಎಲ್ಲಿ ಹೋದರು ಎನ್ನುವ ಪ್ರಶ್ನೆ ಮೂಡಿತ್ತು. ಮೂಲಗಳ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ ಅವರಿಗೆ ಫುಡ್ ಪಾಯ್ಸನ್ ಆಗಿದೆ. ಈ ಕಾರಣದಿಂದಲೇ ಅವರು ಆಸ್ಪತ್ರೆ ಸೇರಿದ್ದಾರೆ. ಅವರು ಈಗ ಚೇತರಿಕೆ ಕಂಡಿದ್ದಾರೆ. ಇಂದು ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆ ಒಳಗೆ ತೆರಳಲಿದ್ದಾರೆ. ಈ ಬಗ್ಗೆ ಅವರ ಫ್ಯಾಮಿಲಿ ಕಡೆಯಿಂದ ಮಾಹಿತಿ ಸಿಕ್ಕಿದೆ. ಅಲ್ಲದೆ, ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಅಪ್ಡೇಟ್ ನೀಡಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಅವರು ಶೀಘ್ರವೇ ಬಿಗ್ ಬಾಸ್ಗೆ ಮರಳಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.
ಈ ವಾರ ಡ್ರೋನ್ ಪ್ರತಾಪ್ ಅವರು ಡೇಂಜರ್ಜೋನ್ನಲ್ಲಿ ಇದ್ದಾರೆ. ಮೈಕಲ್, ಕಾರ್ತಿಕ್, ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಜೊತೆ ಪ್ರತಾಪ್ ಕೂಡ ನಾಮಿನೇಟ್ ಆಗಿದ್ದಾರೆ. ಈ ವಾರ ಅವರು ಸೇವ್ ಆಗಲೇಬೇಕಾದ ಅನಿವಾರ್ಯತೆ ಇದೆ.ಈ ವೇಳೆ ಅವರು ‘ತಂದೆ ತಾಯಿಯಿಂದ ದೂರವೇ ಇದ್ದರೆ ನಿನನಗೆ ಒಳಿತಾಗುತ್ತದೆ’ ಎಂದು ಪ್ರತಾಪ್ಗೆ ಹೇಳಿದ್ದರು. ಇದನ್ನು ಕೇಳಿ ಪ್ರತಾಪ್ ಅವರು ಬೇಸರಗೊಂಡಿದ್ದರು. ಈ ಬೆನ್ನಲ್ಲೇ ಅವರಿಗೆ ಅನಾರೋಗ್ಯ ಆಗಿದೆ.