ಬೆಂಗಳೂರು : ಉಪಮುಖ್ಯಮAತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವಂತೆ ಕೇಳುವುದರಲ್ಲಿ ತಪ್ಪೇನಿದೆ. ಶೀಘ್ರದಲ್ಲೇ ಡಿ.ಕೆ.ಶಿವಕುಮಾರ್ ಯಾವಾಗ ಮುಖ್ಯಮಂತ್ರಿ ಆಗುತ್ತಾರೆAದು ಮೂರನೇ ಡೇಟ್ ಕೊಡುತ್ತೇವೆ. ಅದು ಯಾವುದೇ ಕಾರಣಕ್ಕೂ ತಪ್ಪಲ್ಲ ಎಂದು ಡಿ.ಕೆ.ಶಿವಕುಮಾರ್ ಪರವಾಗಿ ಮತ್ತೊಮ್ಮೆ ಶಾಸಕ ಎಚ್.ಎ ಇಕ್ಬಾಲ್ ಹುಸೇನ್ ಬ್ಯಾಟಿಂಗ್ ಮಾಡಿದ್ದಾರೆ.
ಸುದ್ದಿಗಾರರೊAದಿಗೆ ಮಾತನಾಡಿದ ಅವರು, ಕಾಂಗ್ರೆಸ್ 140 ಶಾಸಕರೂ ಡಿ.ಕೆ.ಶಿವಕುಮಾರ್ ಪರವಾಗಿ ಇದ್ದೇವೆ. ಅವರು ಉಪಮುಖ್ಯಮಂತ್ರಿ ಆಗಿದ್ದಾರೆ. ನಮ್ಮದು ಶಿಸ್ತುಬದ್ಧ ಪಕ್ಷ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳುಬೇಕು. ಸಾಮಾಜಿಕ ನ್ಯಾಯ ಬೇಕು ಅಂತ ಎಲ್ಲರೂ ಕೇಳುತ್ತಿದ್ದಾರೆ.
ಹೀಗಿರುವಾಗ ಡಿಕೆಶಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೇಳುವುದರಲ್ಲಿ ಏನಿದೆ ತಪ್ಪು ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬೇಡ ಎನ್ನುವವರು ಪಕ್ಷದ ಅಧ್ಯಕ್ಷರಾಗಿ ಸಂಘಟನೆ ಮಾಡಿ ತೋರಿಸಲಿ. ಪಕ್ಷವನ್ನು ಅಧಿಕಾರಕ್ಕೆ ತರುವುದರ ಹಿಂದಿನ ಶ್ರಮ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಇದರ ಕಷ್ಟಸುಖ ಗೊತ್ತಾಗೋದು ಆ ಸ್ಥಾನದಲ್ಲಿ ಕೂತವರಿಗೆ ಮಾತ್ರ, ಮಾತನಾಡುವವರಿಗೆ ಅದು ಗೊತ್ತಾಗಲ್ಲ ಎಂದರು. ಕಾಂಗ್ರೆಸ್ನಿAದ 140 ಶಾಸಕರು ಗೆದ್ದು ಸರ್ಕಾರ ರಚನೆಯಾಗಲು ಡಿ.ಕೆ.ಶಿವಕುಮಾರ್ ಕಾರಣ. ಹೋರಾಟ ಮಾಡಿ, ಶ್ರಮ ಹಾಕಿ ಸರ್ಕಾರವನ್ನು ತಂದಿದ್ದಾರೆ. ಈಗ ಡಿಕೆಶಿ ಅವರೇ `ಮಾತು ಕೊಟ್ಟಿದ್ದಾರೆ’ ಅಂತ ಹೇಳಿದ್ದಾರೆ. ಅವರ ಬಾಯಿಂದ ಬಂದಮೇಲೆ ಅದು ಸತ್ಯ ಅಲ್ಲವೇ ಎಂದು ಪ್ರಶ್ನಿಸಿದರು.
ಡಿಕೆಶಿ ಪರವಾಗಿರುವ ಶಾಸಕರು ಸಭೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಅದರಲ್ಲಿ ತಪ್ಪೇನಿದೆ, ನಾವು ಶಾಸಕರು ಒಗ್ಗೂಡಿ ನಮ್ಮ ಕಷ್ಟಸುಖ ಚರ್ಚೆ ಮಾಡುತ್ತೇವೆ. ನಮ್ಮ ಪಕ್ಷದ ಆಂತರಿಕ ವಿಚಾರ ಮಾತನಾಡಲು ಯಾರದ್ದು ಅಡ್ಡಿ ಇಲ್ಲ. ನಾವೇನೂ ಬೇರೆ ಪಕ್ಷದ ಪರವಾಗಿ, ಬೇರೆ ನಾಯಕರ ಪರವಾಗಿ ಚರ್ಚೆ ಮಾಡುತ್ತಿಲ್ಲ. ನಮ್ಮ ಪಕ್ಷದ ಪರವಾಗಿ, ನಮ್ಮ ನಾಯಕರ ಪರವಾಗಿ ಮಾತನಾಡಿದರೆ ತಪ್ಪೇನು ಎಂದು ಕೇಳಿದರು. ವಸತಿ ಸಚಿವ ಜಮೀರ್ ಸ್ವಲ್ಪ ತಾಳ್ಮೆಯಿಂದ ಮಾತನಾಡಬೇಕು. ಅವರು ಬಹಳ ಹಿರಿಯರು, ರಾಜಕೀಯದಲ್ಲಿ ಅನುಭವ ಇರುವವರು. ಏನು ಮಾತನಾಡಬೇಕು ಅಂತ
ಅವರೇ ತಿಳಿದುಕೊಳ್ಳಬೇಕೆಂದು ತಿರುಗೇಟು ನೀಡಿದರು.


