ಬೆಂಗಳೂರು : ರಾಜಾಕೀಯ ಅಂದರೆ ಇಷ್ಟು ಯಾರು ಯಾವಾಗ ಯಾರ್ಯಾರ ಕಾಲು ಏಲಿಯುತ್ತಾರೋ ಎಂಬುದು ಗೊತ್ತಾಗಲ್ಲ.ಇದೀಗ ಪೆನ್ ಡ್ರೈವ್ ವೈರಲ್ಆ ಗಿರುವ ಪ್ರಕರಣದಲ್ಲಿ, ವಿಡಿಯೋ ಹೊರಬಿಟ್ಟಿರುವ ಮೂಲ ವ್ಯಕ್ತಿ ಪ್ರಜ್ವಲ್ ರೇವಣ್ಣ ಡ್ರೈವರ್ ಕಾರ್ತಿಕ್ ಎಸ್ಐಟಿಯ ದಾರಿ ತಪ್ಪಿಸಿ ಮಲೇಷ್ಯಾಕ್ಕೆ ತೆರಳಿದ್ದಾನೆ ಎಂಬ ಮಾಹಿತಿ ದೊರೆತಿದೆ.
ಈ ವಿಚಾರದಲ್ಲಿ ಒಬ್ಬಳು ದೂರುದಾರೆ ಹೊರತುಪಡಿಸಿ ಇತರ ಮಹಿಳೆಯರು, ತಮ್ಮನ್ನು ತನಿಖೆಗೆ ಬಲವಂತಪಡಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಗುರುತು ಪರಿಚಯ ಬಹಿರಂಗಪಡಿಸಿದರೆ ತಮ್ಮ ಕುಟುಂಬಕ್ಕೆ ಸಮಸ್ಯೆಯಾಗಲಿದ್ದು, ಹೀಗಾಗಿ ತನಿಖೆಗೆ ಬರುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.ವಿಡಿಯೋ ಬ್ಲರ್ ಮಾಡದ್ದೆ ವೈರಲ್ ಮಾಡಿದ ಪರಿಣಾಮ ಸಮಾಜದಲ್ಲಿ ತಲೆತಗ್ಗಿಸುವಂತಾಗಿದೆ ಎಂದು ಹಲವು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
ಪ್ರಜ್ವಲ್ ರೇವಣ್ಣ ಸಂಸದ ಆಗುವ ಮೊದಲಿನಿಂದಲೂ ಸುಮಾರು 13 ವರ್ಷ ಈತ ಅವರ ಕಾರು ಚಾಲಕನಾಗಿದ್ದ. ಹೊಳೆನರಸೀಪುರ ತಾಲ್ಲೂಕಿನ ಕಡುವಿನಕೋಟೆ ಗ್ರಾಮದ ಕಾರ್ತಿಕ್, ಎರಡು ದಿನಗಳ ಹಿಂದೆಯೇ ಎಸ್ಐಟಿ ಮುಂದೆ ಹಾಜರಾಗುವುದಾಗಿ ಹೇಳಿರುವ ವೀಡಿಯೋ ಬಿಡುಗಡೆ ಮಾಡಿದ್ದು ಇದೀಗ ಡ್ರೈವರ್ ಕಾರ್ತಿಕ್ ನಾಪತ್ತೆಯಾಗಿದ್ದಾನೆ.
ಎಸ್ಐಟಿ ಮುಂದೆ ಹಾಜರಾಗುವ ಹೇಳಿಕೆ ನೀಡಿದ ಬಳಿಕ ಕಾರ್ತಿಕ್ ನಾಪತ್ತೆಯಾಗಿದ್ದಾನೆ. ವೀಡಿಯೋ ಇದ್ದ ಪೆನ್ ಡ್ರೈವ್ ವಕೀಲ ದೇವರಾಜೇ ಗೌಡಗೆ ಕೊಟ್ಟಿದ್ದು ನಾನೇ ಎಂದಿದ್ದ ಕಾರ್ತಿಕ್. ವೀಡಿಯೋಗಳ ಮೂಲ ವ್ಯಕ್ತಿ ನಾನೇ ಅಂದರೂ ಇನ್ನು ಆತನನ್ನು ವಿಚಾರಣೆಗೆ ಒಳಪಡಿಸಿಲ್ಲ.ಆದರೆ ರಾಜಕೀಯ ಪ್ರಭಾವಿ ರಾಮನಗರ ಬ್ರದರ್ಸ್ ಗಳ ಕೈವಾಡವಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಚಾಲಕ ಕಾರ್ತಿಕ್ ಮಲೇಶಿಯಾ ಕ್ಕೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಕಾರ್ತಿಕ್ ಗೆ ಈ ವಿಡಿಯೋ ನೀಡಿದಕ್ಕೆ ಬಾರಿ ಪ್ರಮಾಣದ ಹಣ ಹೊಳೆ ಸುರಿಸಿದ್ದಾರೆಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ .ಒಟ್ಟಿನಲ್ಲಿ ಎಸ್ಐಟಿ ಮುಂದೆ ಹಾಜರಾಗುವುದಾಗಿ ಹೇಳಿಕೆ ನೀಡಿ ಎಸ್ಕೇಪ್ ಆಗಿರುವ ಬಗ್ಗೆ ಹಲವು ಅನುಮಾನ ಮೂಡಿದ್ದು, ಕಾರ್ತಿಕ್ ಇವರೆಲ್ಲರ ದಾರಿ ತಪ್ಪಿಸಿದನೇ ಅಥವಾ ಇದರ ಹಿಂದಿನ ಮಾಸ್ಟರ್ ಮೈಂಡ್ಗಳು ಬೇರೆ ಯಾರಾದರೂ ಇದ್ದಾರಾ ಎಂದು ಅನುಮಾನ ಮೂಡಿದೆ.


