ಮಂಗಳೂರು : ದಕ್ಷಿಣ ಕನ್ನಡ, ಉಡುಪಿ, ಭಟ್ಕಳದಲ್ಲಿ ಪವಿತ್ರ ರಂಜಾನ್ ಮಾಸದ ಆರಂಭದ ಸಂಕೇತವಾಗಿ ಮೂಡಿಬಂದಿದೆ.ಕರಾವಳಿಯಲ್ಲಿ ಇಂದು ಚಂದ್ರನ ದರ್ಶನವಾಗಿದೆ. ಹೀಗಾಗಿ ಕರಾವಳಿಯಲ್ಲಿ ನಾಳೆಯಿಂದ ರಂಜಾನ್ ಮಾಸ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಕರಾವಳಿಯಲ್ಲಿ ನಾಳೆಯಿಂದ ರಂಜಾನ್ ವ್ರತ ಆರಂಭಗೊಳ್ಳಲಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೂಡು ಸೇರಿದಂತೆ ಕರಾವಳಿಯಲ್ಲಿ ರಂಜಾನ್ ಉಪವಾಸ ವ್ರತವನ್ನು ಆಚರಣೆ ಮಾಡುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಸೋಮವಾರ ಸಂಜೆ ಉಡುಪಿ, ದಕ್ಷಿಣ ಕನ್ನಡ ಮತ್ತು ಭಟ್ಕಳದ ಖಾಜಿಗಳು ಮಾಹಿತಿಯನ್ನು ಹಂಚಿಕೊಂಡಿದ್ದು ಮಾರ್ಚ್ 12 ರ ಮಂಗಳವಾರದಿಂದ ರಂಜಾನ್ ಆರಂಭವನ್ನು ಸೂಚಿಸುತ್ತದೆ. ಪವಿತ್ರವಾದ ರಂಜಾನ್ ಮಾಸವನ್ನು ಆಚರಿಸಲು ಈ ಪ್ರದೇಶದ ಮುಸ್ಲಿಮರು ಮಂಗಳವಾರದಿಂದ ಒಂದು ತಿಂಗಳ ಉಪವಾಸದ ಪ್ರಯಾಣವನ್ನು ಪ್ರಾರಂಭಿಸುತ್ತಾರೆ.


