ಬೆಂಗಳೂರು : ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಎಲ್ಲಾ ವ್ಯಾಪಾರಿಗಳು ಬೆಲೆ ಹೆಚ್ಚಮಾಡುತ್ತಿರುವುದು ವಾಸ್ತವ್ಯ. 2010ರ ನಂತರ ಇದೇ ಮೊದಲ ಬಾರಿಗೆ ಹೆಚ್ಚಿನ ಮಟ್ಟದಲ್ಲಿ ಬೆಲೆ ಏರಿಕೆಯಾಗಿದ್ದು, ದಸರಾ, ದೀಪಾವಳಿ ಇರುವ ಕಾರಣ ಹಬ್ಬದ ಸಮಯದಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುತ್ತದೆ ಎನ್ನಲಾಗುತ್ತಿದೆ. ಜೊತೆಗೆ ಮುಂದಿನ ಆರು ತಿಂಗಳವರೆಗೆ ಈ ಬೆಲೆ ಏರಿಕೆ ಜನರನ್ನ ಕಾಡಲಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಒಂದು ಕೆ.ಜಿ ತೆಂಗಿನ ಕಾಯಿ 30ರಿಂದ 35ರೂಪಾಯಿಗೆ ಮಾರಾಟವಾಗುತ್ತಿತ್ತು. ಆದ್ರೆ ಇದೀಗಾ ಅದೇ ತೆಂಗಿನ ಕಾಯಿ 50-57 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಬಾರಿ ವಿಪರೀತ ಬಿಸಿಲಿದ್ದ ಕಾರಣ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ತರ ಭಾರತಕ್ಕೆ ಸಾಕಷ್ಟು ಎಳನೀರು ರಫ್ತಾಗಿದೆ. ಇದೇ ಕಾರಣದಿಂದಾಗಿ ತೆಂಗಿನ ಕಾಯಿ ಬೆಳೆಯಲ್ಲಿ ಕುಸಿತವಾಗಿದ್ದು ಏಕಾಏಕಿ ಬೆಲೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ತೆಂಗಿನ ಕಾಯಿ ಬೆಲೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
ಎಳನೀರು, ತೆಂಗಿನಕಾಯಿ, ಕೊಬ್ಬರಿ ಹೀಗೆ ತೆಂಗಿನ ಉತ್ಪನ್ನಗಳಿಗೆಲ್ಲ ದಿಢೀರ್ ಬೆಲೆ ಬಂದಿದೆ. ಚಿಕ್ಕ ತೆಂಗಿನ ಕಾಯಿಗೂ ಕನಿಷ್ಠ 30 ರೂ. ಕೊಡಬೇಕಾಗಿರುವುದರಿಂದ ನಿತ್ಯ ಕಾಯಿ ಬಳಸುವ ನಗರ ವ್ಯಾಪ್ತಿಯಲ್ಲಿರುವ ಕುಟುಂಬಗಳಿಗೆ ಭಾರಿ ಸಮಸ್ಯೆ ಉಂಟಾಗಿದೆ. ಅದೇ ರೀತಿಯಲ್ಲಿ ತೆಂಗಿನ ಎಣ್ಣೆಯಲ್ಲೂ ಏರಿಕೆ ಯಾಗಿರುವುದು. ಇನ್ನಷ್ಟು ಹೊಡೆತ ನೀಡಿದೆ.ಇದೀಗ ತಮಿಳುನಾಡಿನಲ್ಲಿ ತೆಂಗಿನ ಕಾಯಿ ಇಳುವರಿ ಕಡಿಮೆಯಾದ್ದರಿಂದ ಕೇರಳಕ್ಕೆ ತೆಂಗಿನ ಕಾಯಿ ಸಾಗಾಟ ಅರ್ಧದಷ್ಟು ಕುಸಿತ ಉಂಟಾಗಿದೆ. ಈ ಬಾರಿ ದಾಖಲೆ ಬೆಲೆಯೇರಿಕೆ ಉಂಟಾಗಿದೆ. ತೆಂಗು ಮಾರುಕಟ್ಟೆಯಲ್ಲಿ ಬೆಲೆಯೇರಿಕೆ ಪ್ರಧಾನವಾಗಿ ಬೇಡಿಕೆ ಹೆಚ್ಚಾಗಿದ್ದರಿಂದ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಈಗ ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳಲ್ಲಿ ತೆಂಗಿನಕಾಯಿ ಕೊಯ್ಲು ಇಲ್ಲದೇ ಇರುವುದರಿಂದಾಗಿ ತೆಂಗಿನ ಕಾಯಿ ಮಾರುಕಟ್ಟೆಗೆ ಸಾಕಷ್ಟು ಬಾರದಿರುವುದ ರಿಂದಲೇ ಸಹಜವಾಗಿಯೇ ಖರೀದಿದಾರರು ಹೆಚ್ಚಿನ ದರ ನೀಡುವಂತಾಗಿದೆ.
ತೆಂಗಿನಕಾಯಿ ಬೆಲೆ ಜಾಸ್ತಿ ಆಗಿರೋದು ಅಂತೂ ನಿಜ ಆದರೆ ಈರುಳ್ಳಿ, ಕ್ಯಾರೇಟ್, ಟೊಮೆಟೊ, ಬೀನ್ಸ್, ಮೂಲಂಗಿಯ ಬೆಲೆ ಜಾಸ್ತಿಯಾಗಿದ್ದು, ಹಬ್ಬಕ್ಕೆ ತರಕಾರಿಯನ್ನ ಖರೀದಿಸುವುದಕ್ಕೆ ಬಂದಿದ್ದಂತಹ ಗ್ರಾಹಕರು ಶಾಕ್ ಆಗಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಹಬ್ಬ ಕೂಡ ಬಲು ದುಬಾರಿಯಾದಂತಿದೆ.


