Friday, March 13, 2026
Flats for sale
Homeರಾಜ್ಯಬೆಂಗಳೂರು : ಗಾಂಧಿನಗರದ ಹೋಟೆಲ್ ಮುಂದೆ ನಿಲ್ಲಿಸಿದ ಹುಂಡೈ ಕ್ರೇಟಾ ಕಾರಿನ ನಾಲ್ಕು ಚಕ್ರವನ್ನು ಕದ್ದೊಯ್ದ...

ಬೆಂಗಳೂರು : ಗಾಂಧಿನಗರದ ಹೋಟೆಲ್ ಮುಂದೆ ನಿಲ್ಲಿಸಿದ ಹುಂಡೈ ಕ್ರೇಟಾ ಕಾರಿನ ನಾಲ್ಕು ಚಕ್ರವನ್ನು ಕದ್ದೊಯ್ದ ಖತರ್ನಾಕ್ ಕಳ್ಳರು..!

ಬೆಂಗಳೂರು : ಇನ್ನೋವಾ ಕಾರಿನಲ್ಲಿ ಬಂದ ದುರುಳರು ಹುಂಡೈ ಕ್ರೇಟಾ ಕಾರಿನ ನಾಲ್ಕು ಗಾಲಿಗಳನ್ನು ಬಿಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.

ಗಾಂಧಿನಗರದ ಹೋಟೆಲ್‌ವೊಂದರ ಮುಂದೆ ನಿಲ್ಲಿಸಿದ್ದ ಹುಂಡೈ ಕಾರಿನ ನಾಲ್ಕು ಚಕ್ರದ ಸುತ್ತಲು ಕಲ್ಲು ಬಂಡೆ, ಮರದ ತುಂಡುಗಳನ್ನು ಇಟ್ಟು ಗಾಲಿಗಳನ್ನು ಬಿಚ್ಚಿದ್ದಾರೆ. ತಮ್ಮದೆ ಕಾರು ಎಂಬAತೆ ರಾಜಾರೋಷವಾಗಿ ಈ ಕೃತ್ಯವನ್ನು ಎಸಗಿದ್ದಾರೆ. ಗಾಂಧಿನಗರ ಎಂದರೆ ದಿನ ೨೪ ಗಂಟೆ ಜನರು ಓಡಾಡಿಕೊಂಡಿರುವ ರಸ್ತೆ ಇದಾಗಿದೆ. ಪೊಲೀಸರು, ಹೊಯ್ಸಳ ಗಸ್ತು ವಾಹನ ಗಂಟೆ ಒಂದು ಬಾರಿ ಈ ಪ್ರದೇಶದಲ್ಲಿ ಸುತ್ತಾಕುತ್ತದೆ. ಆದರೆ, ಪೊಲೀಸರು ರೌಂಡ್ಸ್ಗೆ ಬಂದು ಹೋದ ನಂತರ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.

ಹುಬ್ಬಳ್ಳಿ ಮೂಲದ ಗೋವಿಂದಗೌಡ ಎಂಬುವರು ವೈಯಕ್ತಿಕ ಕೆಲಸ ನಿಮಿತ್ತ ಮಾ.೧೫ರಂದು ಬೆಂಗಳೂರಿಗೆ ಆಗಮಿಸಿದ್ದರು. ಗಾಂಧಿನಗರದ ಹೋಟೆಲ್ ಮುಂದೆ ಕಾರು ನಿಲ್ಲಿಸಿ, ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಕಾರಿನ ನಾಲ್ಕು ಗಾಲಿಗಳು ಮಾಯವಾಗಿರುವುದನ್ನು ಕಂಡು ಆತಂಕಗೊAಡಿದ್ದಾರೆ. ತಕ್ಷಣ ಗೋವಿಂದಗೌಡ ಸಮೀಪದ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ಕಾರಿನ ಚಕ್ರಗಳನ್ನು ಕದ್ದ ಖದೀಮರಿಗಾಗಿ ಶೋಧ ನಡೆಸಿದ್ದಾರೆ. ಕಾರಿನ ಚಕ್ರ ಮಾಯವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular