Friday, January 16, 2026
Flats for sale
Homeರಾಜ್ಯಬೆಂಗಳೂರು ; ಗಾಂಜಾ ಮತ್ತಿನಲ್ಲಿ ಕೈ ಕಟ್ ಆಗಿರುವುದನ್ನೆ ಮರೆತು ರಸ್ತೆಯಲ್ಲಿ ಅಡ್ಡಾಡಿದ ಭೂಪ.

ಬೆಂಗಳೂರು ; ಗಾಂಜಾ ಮತ್ತಿನಲ್ಲಿ ಕೈ ಕಟ್ ಆಗಿರುವುದನ್ನೆ ಮರೆತು ರಸ್ತೆಯಲ್ಲಿ ಅಡ್ಡಾಡಿದ ಭೂಪ.

ಬೆಂಗಳೂರು : ಕೈ ಮೇಲೆ ರೈಲು ಹರಿದು ಕೈ ಕಟ್ ಆದರು ಗಾಂಜಾದ ಮತ್ತಿನಲ್ಲಿ ರಸ್ತೆಯಲ್ಲಿ ಅಡ್ಡಾಡಿದ ಘಟನೆ ದೇವನಹಳ್ಳಿ ಪಟ್ಟಣದ ಕುಂಬಾರ ಬೀದಿಯಲ್ಲಿ ನಡೆದಿದೆ.

ರಾತ್ರಿ ರೈಲ್ವೆ ಹಳ್ಳಿ ಮೇಲೆ ಮತ್ತಿನಲ್ಲಿ ಬಿದ್ದಿದ್ದವನ ಕೈ ಮೇಲೆ ರೈಲು ಹರಿದು ಕೈ ಕಟ್ಟಾಗಿದ್ದು ಯುವಕ ಉತ್ತರ ಭಾರತ ಮೂಲದ ದಿಲೀಪ್ ಎಂದು ತಿಳಿದುಬಂದಿದೆ.

ಕೈ ಕಟ್ ಆಗಿದ್ದ ಕಾರಣ ಆ್ಯಂಬುಲೆನ್ಸ್ ಮೂಲಕ ಸ್ಥಳೀಯರು ಆಸ್ವತ್ರೆಗೆ ಚಿಕಿತ್ಸೆಗೆ ರವಾನಿದ್ದು ಚಿಕಿತ್ಸೆಗೆ ಕರೆದೋಗುತ್ತಿದ್ದ ವೇಳೆ ರಸ್ತೆ ಮಧ್ಯೆ ಆ್ಯಂಬುಲೇನ್ಸ್ ನಿಂದ ಜಿಗಿದು ಓಡಿದ ಹೋಗಿದ್ದಾನೆ.

ದೇವನಹಳ್ಳಿಯ ಹಳೆ ಬಸ್ ಸ್ಟಾಂಡ್ ನಿಂದ ಓಡಿ ಕುಂಬಾರ ಬೀದಿಯ ಮನೆಗಳ ಬಳಿ ಸೇರಿಕೊಂಡಿದ್ದು ಒಂದು ಗಂಟೆಗೂ ಅಧಿಕ‌ ಕಾಲ‌ ಪೋಲಿಸರು ಹಾಯ ಸ್ಥಳೀಯರಿಗೆ ಸತಾಯಿಸಿದ್ದಾನೆ.

ಮೂರು ಮೂರು ಭಾರಿ ಆ್ಯಂಬುಲೆನ್ಸ್ ಹತ್ತಿಸಿದರು ಕೆಳಕ್ಕೆ ಜಿಗಿದು ಓಡಿ ಹೋಗಲು ಯತ್ನಿದಿದ್ದು ಓಡಿ ಹೋಗ್ತಿದ್ದವನನ್ನ ಹಿಡಿದು ಹರಸಾಹಸ ಪಟ್ಟು ಆಸ್ವತ್ರೆ ಗೆ ರವಾನಿಸಿದ್ದಾರೆ.

ದೇವನಹಳ್ಳಿ ಸರ್ಕಾರಿ ಆಸ್ವತ್ರೆಯಲ್ಲು ಕಟ್ ಆದ ಕೈಗೆ ಬ್ಯಾಂಡೆಜ್ ಮಾಡಿಸಿಕೊಳ್ಳದೆ ಮೊಂಡಾಟ ತೋರಿಸಿದ್ದುಹಣವಿಲ್ಲ ಚಿಕಿತ್ಸೆ ಬೇಡ ಅಂತ ಗಾಂಜಾ ಮತ್ತಿನಲ್ಲಿ ಹೇಳಿದ್ದಾನೆ.

ಪೊಲೀಸರು ಬುದ್ದಿವಾದ ಹೇಳಿದ ಬಳಿಕ ಕಟ್ ಆಗಿದ್ದ ಕೈಗೆ ಡ್ರಸ್ಸಿಂಗ್ ಮಾಡಿ ಚಿಕಿತ್ಸೆ ಪಡೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular