ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಮೇಲೆ ಹಲ್ಲೆ ಪ್ರಕರಣಗಳು ಜಾಸ್ತಿಯಾಗಿದ್ದು ಮಸೀದಿಗೆ ಹೋಗಲು ಮನೆ ಮುಂದೆ ಪಾರ್ಕ್ ಮಾಡಿದ ಆಟೋಚಾಲಕನನ್ನು ಪ್ರಶ್ನಿಸಿದಕ್ಕೆ ಮನೆಗೆ ನುಗ್ಗಿ 8 ಜನಕ್ಕೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಪ್ರಗತಿಪರ ಬಡಾವಣೆಯಲ್ಲಿನಡೆದಿದೆ.
ನಗರತ್ ಪೇಟೆ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಗುಂಪು ಘರ್ಷಣೆ ಪ್ರಕರಣ ವರದಿಯಾಗಿದ್ದು, ಕ್ಷುಲ್ಲಕ ವಿಚಾರಕ್ಕೆ ಮಧ್ಯರಾತ್ರಿ ಅನ್ಯಕೋಮಿನ ಗುಂಪೊಂದು ಕುಟುಂಬವೊಂದರ ಮೇಲೆ ಹಲ್ಲೆ ಮಾಡಿದೆ ಎನ್ನಲಾಗಿದೆ.
ಪ್ರಗತಿಪರ ಬಡಾವಣೆಯ ಕಿರಿದಾದ ರಸ್ತೆಯಲ್ಲಿ ಶಿವಕುಮಾರ್ ಅನ್ನೋರ ಮನೆ ಮುಂದೆ ಆಟೋ ಚಾಲಕನೊಬ್ಬ ಆಟೋ ಪಾರ್ಕ್ ಮಾಡ್ತಿದ್ದರು. ಇಲ್ಲಿ ಆಟೋ ನಿಲ್ಲಿಸಬೇಡಿ ಅಂದಿದ್ದಕ್ಕೆ ಮಾತಿನ ಚಕಮಕಿ ನಡೆಸಿದ ಅನ್ಯಕೋಮಿನ ವ್ಯಕ್ತಿ ಯುವಕರನ್ನ ಕರೆತಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ನಡೆದಿದ್ದು, ತಡರಾತ್ರಿ ಆಟೋ ಪಾರ್ಕಿಂಗ್ ವಿಚಾರಕ್ಕೆ ಎರಡು ಕೋಮುಗಳ ನಡುವೆ ಗಲಾಟೆ ನಡೆದಿದೆ. ಬನಶಂಕರಿಯ ಪ್ರಗತಿಪರ ಬಡಾವಣೆಯಲ್ಲಿ ಆಟೋ ಪಾರ್ಕಿಂಗ್ ವಿಚಾರಕ್ಕೆ ಅನ್ಯಕೋಮಿನ ಯುವಕರು ಮನೆಗೆ ನುಗ್ಗಿ ಮಹಿಳೆಯರು ಪುರುಷರು, ಮಕ್ಕಳು ಸೇರಿ 8 ಮಂದಿ ಮೇಲೆ ಅನ್ಯಕೋಮಿನ ಗುಂಪು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸಮೀಪದ ಮಸೀದಿಯಿಂದಲೂ ಮತ್ತಷ್ಟು ಜನರನ್ನ ಕರೆತಂದ ಯುವಕರ ಗುಂಪು, ಶಿವಕುಮಾರ್ ಎನ್ನುವವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಮನೆಯಲ್ಲಿದ್ದ ಮಹಿಳೆಯರು, ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದು, ಶಿವಕುಮಾರ್ ಕುಟುಂಬಸ್ಥರಿಗೆ ಗಾಯಗಳಾಗಿವೆ.


