Wednesday, October 22, 2025
Flats for sale
Homeರಾಜ್ಯಬೆಂಗಳೂರು : ಕೋಮುಭಾವನೆಗೆ ಧಕ್ಕೆ ತರುವ,ದ್ವೇಷ ಬಾಷಣ ಮಾಡುವವರ ವಿರುದ್ಧ ಹೊಸ ಕಾನೂನು ಜಾರಿ :...

ಬೆಂಗಳೂರು : ಕೋಮುಭಾವನೆಗೆ ಧಕ್ಕೆ ತರುವ,ದ್ವೇಷ ಬಾಷಣ ಮಾಡುವವರ ವಿರುದ್ಧ ಹೊಸ ಕಾನೂನು ಜಾರಿ : ಗೃಹ ಸಚಿವ ಜಿ.ಪರಮೇಶ್ವರ್..!

ಬೆಂಗಳೂರು : ಇತ್ತಿಚ್ಚಿನ ವರ್ಷಗಳಲ್ಲಿ ಕೋಮುಭಾವನೆಗೆ ಧಕ್ಕೆ ತರುವ ಹಾಗೂ ಪ್ರಚೋದಿಸುವ ದ್ವೇಷ ಬಾಷಣ ಮಾಡುವವರ ವಿರುದ್ಧ ಹೊಸ ಕಾನೂನು ತರಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ವಿಧಾನಪರಿಷತ್‌ಗೆ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಕಿಶೋರ್ ಕುಮಾರ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರುಕರಾವಳಿ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೋಮು ಸಾಮರಸ್ಯ ಕದಡುವ ಕೆಲಸವಾಗುತ್ತಿದೆ. ಹೀಗಾಗಿ ಕೊಲೆ, ಹಿಂಸಾಚಾರ ನಡೆಯುತ್ತಿವೆ. ಇದನ್ನ ಹತ್ತಿಕ್ಕಲು ವಿಶೇಷ ಕಾರ್ಯ ಪಡೆ ರಚಿಸಲಾಗಿದೆ. ಅನಗತ್ಯವಾಗಿ ಸಾಮಾಜಿಕ ಮಾಧ್ಯಮಗಳ ದ್ವೇಷ ಭಾಷಣ ಹಾಗೂ ಪ್ರಚೋದನಕಾರಿ ಪೋಸ್ಟ್ ಗಳಿಂದ ಹಿಂಸಾಚಾರಕ್ಕೆ ಕಾರಣವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದ್ವೇಷ ಭಾಷಣ ಮಾಡುವವರ ವಿರುದ್ಧ ಹೊಸ ಕಾನೂನು ಜಾರಿ ಮಾಡಲಾಗುವುದು ಎಂದರು.

ಕಳೆದ ಜೂನ್ 11 ರಂದು ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಉಡುಪಿಗಳಲ್ಲಿ ಕೋಮು ಹಿಂಸಾಚಾರ ನಿಯAತ್ರಿಸಲು ವಿಶೇಷ ಕಾರ್ಯಪಡೆ
ರಚಿಸಲಾಗಿದೆ. ದ್ವೇಷ ಭಾಷಣ, ಕೋಮು ಸಂಬAಧಿತ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವವರ ಮೇಲೆ ನಿಗಾವಹಿಸುತ್ತಿದೆ. ಸಂಭಾವ್ಯ ಕೋಮು ಹಿಂಸಾಚಾರ ಬಗ್ಗೆ ಕಣ್ಗಾವಲು ಇರಿಸುತ್ತಿದೆ. ವಿಶೇಷ ಕಾರ್ಯಪಡೆ ಸಿಬ್ಬಂದಿಗೆ ಗುಪ್ತಚರ ಹಾಗೂ ತಂತ್ರಜ್ಞಾನ ಬಳಕೆ ತರಬೇತಿ ಕೊಡಲಾಗಿದೆ. ಬೆಂಗಳೂರು ಹೊರತುಪಡಿಸಿ ಮಂಗಳೂರು ರಾಜ್ಯದ ಜಿಡಿಪಿಯಲ್ಲಿ ಶೇ.೬ರಷ್ಟು ಕೊಡುಗೆಯಿದೆ. ಹೀಗಾಗಿ ಕೋಮುಸಾಮರಸ್ಯ ಹತ್ತಿಕ್ಕಲು ಕಾರ್ಯಪಡೆ ಕಾರ್ಯನಿರ್ವಹಿಸುತ್ತಿದೆ. ಇದುವರೆಗೂ ಹಿಂಸಾಚಾರ ಆಥವಾ ಕೋಮು ಭಾವನೆಗೆ ಧಕ್ಕೆ ತರುವ ರೀತಿ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular