Monday, March 16, 2026
Flats for sale
Homeರಾಜಕೀಯಬೆಂಗಳೂರು ; ಕೇರಳದಲ್ಲಿ ನಮ್ಮ ವಿರುದ್ಧ ಶತ್ರು ಭೈರವಿ ಯಾಗ,ಕಪ್ಪು ಬಣ್ಣದ ಕುರಿ, ಮೇಕೆ ಬಲಿ...

ಬೆಂಗಳೂರು ; ಕೇರಳದಲ್ಲಿ ನಮ್ಮ ವಿರುದ್ಧ ಶತ್ರು ಭೈರವಿ ಯಾಗ,ಕಪ್ಪು ಬಣ್ಣದ ಕುರಿ, ಮೇಕೆ ಬಲಿ : ಡಿಕೆಶಿ ಹೊಸ ಬಾಂಬ್.

ಬೆಂಗಳೂರು ; ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇರಳದಲ್ಲಿ ದೊಡ್ಡ ಪ್ರಯೋಗ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.ಕರ್ನಾಟಕ ಸೇರಿ ದೇಶಾದ್ಯಂತ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಇದರ ಬೆನ್ನಲ್ಲೇ, ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೊಸ ಬಾಂಬ್‌ ಸಿಡಿಸಿದ್ದಾರೆ. 21 ಮೇಕೆ, 3 ಎಮ್ಮೆ, 21 ಕುರಿಗಳು ಸೇರಿದಂತೆ ಪಂಚ ಬಲಿ ಕೊಡುತ್ತಿದ್ದಾರೆ. ಅವರ ಪ್ರಯತ್ನ ನಡೀತಾ ಇದೆ. ಪ್ರಯೋಗ ಯಾರು ಮಾಡುತ್ತಿದ್ದಾರೆ ಎಲ್ಲ ಗೊತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ನಡೆಯುತ್ತಿದೆ” ಎಂಬುದಾಗಿ ಹೇಳಿರುವುದು ಈಗ ಸಂಚಲನ ಮೂಡಿಸಿದೆ.ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಸುತ್ತಮುತ್ತ ಯಾಗ ನಡೆಯುತ್ತಿದೆ. ನನ್ನ ಹಾಗೂ ಸಿಎಂ ಮೇಲೆ ಯಾವ ಪೂಜೆ ನಡೆಯುತ್ತಿದೆ ಎಂಬುದು ಕೂಡ ಗೊತ್ತಿದೆ” ಎಂದು ಹೇಳಿದ ಅವರು ಯಾರೋ ಬರೆದು ಕೊಟ್ಟಿದ್ದಾರೆ ಎಂಬುದಾಗಿ ಜೇಬಿನಲ್ಲಿರುವ ಚೀಟಿಯನ್ನು ತೆಗೆದು ನೋಡಿದ್ದಾರೆ.

ಅಘೋರಿಗಳ ಮೂಲಕ ಈ ಯಾಗ ಮಾಡಿಸುತ್ತಿದ್ದಾರೆ. ಯಾರು ಮಾಡುತ್ತಿದ್ದಾರೆ ಎಲ್ಲ ಗೊತ್ತಿದೆ ಎಂದು ಹೇಳಿದ್ದಾರೆ. 21 ಕಪ್ಪು ಮೇಕೆ, 3 ಎಮ್ಮೆ, 21 ಕುರಿ, 5 ಹಂದಿ ಹಾಗೂ ಕೋಣವನ್ನು ಬಲಿ ಕೊಡುತಿದ್ದಾರೆ. ಈಗ ಯಾಗ ನಡೆಯುತ್ತಿದ್ದು, ಅವರ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಆದರೆ, ನಾವು ನಂಬಿದ ದೇವರು ನಮ್ಮನ್ನು ಕಾಪಾಡುತ್ತಾನೆ. ಎಲ್ಲ ಡೀಟೇಲ್ಸ್‌ ಅನ್ನು ಚೀಟಿ ಬರೆದುಕೊಟ್ಟಿದ್ದಾರೆ. ಯಾರು ಭಾಗಿಯಾಗಿದ್ದರೋ ಅವರೇ ನನಗೆ ಮಾಹಿತಿ ಕೊಟ್ಟಿದ್ದಾರೆ. ಇದೆಲ್ಲವನ್ನು ರಾಜಕೀಯದವರಲ್ಲದೆ ಬೇರೆ ಯಾರು ಮಾಡಲು ಸಾಧ್ಯ. ಆದರೆ, ಇದೆಲ್ಲವನ್ನು ನಾವು ನಂಬುವುದಿಲ್ಲ” ಎಂಬುದಾಗಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ನಾವು ನಂಬಿರುವ ದೇವರು ನಮ್ಮನ್ನು ಕಾಪಾಡುತ್ತಾನೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular