Monday, February 3, 2025
Flats for sale
Homeರಾಜ್ಯಬೆಂಗಳೂರು : ಕೇಂದ್ರದಿಂದ ಮೆಟ್ರೋಗೆ 1,717 ಕೋಟಿ ರೂ. ಕೇಂದದ ನೆರವು ಖಚಿತ..!

ಬೆಂಗಳೂರು : ಕೇಂದ್ರದಿಂದ ಮೆಟ್ರೋಗೆ 1,717 ಕೋಟಿ ರೂ. ಕೇಂದದ ನೆರವು ಖಚಿತ..!

ಬೆಂಗಳೂರು : ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ದೇಶದ ಮೆಟ್ರೋ ಯೋಜನೆಗಳಿಗೆ ಹಣಕಾಸಿನ ನೆರವನ್ನು ಪ್ರಕಟಿಸಿದ್ದು ನಮ್ಮ ಮೆಟ್ರೋಗೆ 1717.62 ಕೋಟಿ ರೂ. ಲಭ್ಯವಾಗಲಿದೆ.

ನಮ್ಮ ಮೆಟ್ರೋ ೩ನೇ ಹಂತದ ಯೋಜನೆ ಪ್ರಮುಖವಾದದ್ದು. ಈ ಯೋಜನೆ ನಗರದ ಟ್ರಾಫಿಕ್ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದಕ್ಕಾಗಿ ಬಿಎಂಆರ್‌ಸಿಎಲ್ ಕೇಂದ್ರದ ನೆರವು ಕೇಳಿತ್ತು. ಇದರಿಂದ ಮುಂದಿನ ಕೆಲವೇ ದಿನಗಳಲ್ಲಿ 1,717.62 ಕೋಟಿ ರೂ. ಸ್ವೀಕರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರದಿAದ ನಮ್ಮ ಮೆಟ್ರೋ ಯೋಜನೆಗಳಿಗಾಗಿ 1,717.62 ಕೋಟಿ ರೂ. ನೆರವು ಸಿಗಲಿದೆ. ಸಿಗುವ ಈ ಹಣದಲ್ಲಿ ಒಟ್ಟು ಶೇಕಡಾ 70ರಷ್ಟು ಅನುದಾನವನ್ನು ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಖರ್ಚು ಮಾಡಲು ನಿರ್ಧರಿಸಲಾಗಿದೆ. ಈ ಹಂತದ ಯೋಜನೆಗಳಿಗೆ ಈಗಾಗಲೇ ಅನುಮೋದನೆ ದೊರೆತಿವೆ. ಅನುದಾನ ಬರಬೇಕಿದೆ. ಕೇಂದ್ರ ಬಜೆಟ್‌ನಲ್ಲಿ ಭಾರತದ ಎಲ್ಲ ಮೆಟ್ರೋ ಯೋಜನೆಗಳಿಗೆಂದು ಒಟ್ಟು 31,239.28 ಕೋಟಿ ರೂ. ಘೋಷಿಸಿದೆ. ಇದು ಕಳೆದ ವರ್ಷ ಇಟ್ಟಿದ್ದ 21,335.98 ಕೋಟಿ ರೂ.ಗಳಿಗಿಂತಲೂ ಅಧಿಕ ಅನುದಾನವಾಗಿದೆ. ಈ ಹಂಚಿಕೆಯ ಹಣದಲ್ಲಿ ಬೆಂಗಳೂರು ಮೆಟ್ರೋಗೆ ಸುಮಾರು 1,717 ಕೋಟಿ ರೂ. ನೆರವು ಬರಬಹುದು. ಮುಂದಿನ 15 ದಿನಗಳಲ್ಲಿ ಈ ಬಗ್ಗೆ ಅಂಕಿ ಸಂಖ್ಯೆಗಳು ನಿಖರವಾಗಿ ಮತ್ತು ಅಧಿಕೃತವಾಗಿ ಗೊತ್ತಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular