ಬೆಂಗಳೂರು : ಇತ್ತೀಚ್ಚಿಗೆ ಬರೆಯಲು ಗೊತ್ತಿದೆ ಎಂದು ಗೀಚುವ ನಾಲಯಕರ ಸಂತತಿ ಹೆಚ್ಚಾಗಿದೆ ಅವರ ನೀಲುವು ಸರಿ ,ಇವರ ನೀಲುವು ಸರಿ ಎಂದು ಪ್ರಶ್ನಿಸುವವರ ಸಂಖ್ಯೆ ಹೆಚ್ಚಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಬೇಕಾಬಿಟ್ಟಿ ಸುಳ್ಳು ಸುದ್ದಿ ಪಸರಿಸುವುದು ಕಾಮನ್ ಆಗಿ ಬಿಟ್ಟಿದೆ. ತಪ್ಪು ಮಾಹಿತಿ ಹಂಚಿಕೊಂಡವರಿಗೆ ಬಿಸಿ ಮುಟ್ಟಿಸಲು ಇದೀಗ ರಾಜ್ಯ ಸರ್ಕಾರ ಮುಂದಾಗಿದೆ. ಹೌದು ಇನ್ಮುಂದೆ ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ ಹಂಚಿಕೊಂಡವರಿಗೆ ಏಳು ವರ್ಷ ಜೈಲು ಶಿಕ್ಷೆ ಮತ್ತು ಹತ್ತು ಲಕ್ಷ ರೂ ದಂಡ ವಿಧಿಸಲು ಸಜ್ಜಾಗಿದೆ ಎಂಬ ಮಾಹಿತಿ ತಿಳಿದಿದೆ.
ರಾಜ್ಯಸರಕಾರ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ಮಸೂದೆ’ ಸಿದ್ಧವಾಗಿದ್ದು ಗುರುವಾರ ನಡೆದ ಸಚಿವ ಸಂಪುಟ ಸಭೆಯ ಮುಂದೆ ಅದನ್ನು ಮಂಡಿಸಲಾಗಿತ್ತು. ಸಾರ್ವಜನಿಕ ಭದ್ರತೆ, ಸಾಮರಸ್ಯಕ್ಕೆ ಧಕ್ಕೆ ತರುವ ಯಾವುದೇ ಪೋಸ್ಟ್ ಯಾರೇ ಮಾಡಿದರೂ ಅಂತವರಿಗೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಈ ಮಸೂದೆಯಲ್ಲಿ ಹೇಳಲಾಗಿದೆ.ಒಟ್ಟಿನಲ್ಲಿ ಕೋಮು ದ್ವೇಷ ಹೆಚ್ಚಾಗಿರೋ ಕರಾವಳಿ ಹಾಗೂ ಇನ್ನಿತರ ಭಾಗದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠೀಣ ಕ್ರಮ ಜರುಗಲಿದೆ ಎಂದು ಮಾಹಿತಿ ದೊರೆತಿದೆ.


