Friday, March 13, 2026
Flats for sale
Homeರಾಜ್ಯಬೆಂಗಳೂರು : ಕನಕಪುರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ.

ಬೆಂಗಳೂರು : ಕನಕಪುರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ.

ಬೆಂಗಳೂರು : ಡಿಸಿಎಂ ಡಿ ಕೆ ಶಿವಕುಮಾರ್ ತವರು ಕ್ಷೇತ್ರ ಕನಕಪುರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಇಂದು ಬೆಳ್ಳಂ ಬೆಳಿಗ್ಗೆ ಕಾಡಾನೆ ದಾಳಿಗೆ ರೈತ ಬಲಿಯಾದ ಘಟನೆ ನಡೆದಿದೆ.

ಕನಕಪುರ ತಾಲೂಕಿನ ಗೇರಹಳ್ಳಿ ಯಲ್ಲಿ ನಿವಾಸಿ ರೈತ ಪುಟ್ನಂಜ ರವರು ಕಣದಲ್ಲಿ ರಾಗಿ ಕಾಯುತ್ತಾ ಮಲಗಿದ್ದ ಸಮಯದಲ್ಲಿ ಕಾಡಾನೆ ದಾಳಿ ನಡೆಸಿದೆ. ಗಾಢನಿದ್ರೆಯಲ್ಲಿರುವಾಗ 65 ವರ್ಷದ ಪುಟ್ನಂಜ ಎಂಬ ರೈತನ ಮೇಲೆ ಆನೆ ತುಳಿದಿದೆ ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಾತನೂರು ವ್ಯಾಪ್ತಿಯಲ್ಲಿ ನಡೆದಿರುವ ಎರಡನೇ ಪ್ರಕರಣವಾಗಿದ್ದು ಈ ಹಿಂದೆ ಅಚ್ಚಲು ಗ್ರಾಮದಲ್ಲಿ ಮಹಿಳೆ ಒಂಟಿ ಸಲಗ ದಾಳಿಗೆ ಸಾವನ್ನಪ್ಪಿದ್ದರು,ಈ ಪ್ರಕರಣದ ಬೆನ್ನಲ್ಲೆ ಪಕ್ಕದ ಗ್ರಾಮದಲ್ಲಿ ಮತ್ತೊಂದು ಆನೆ ದಾಳಿಗೆ ರೈತ ಬಲಿಯಾಗಿದ್ದಾರೆ .

ಒಂಟಿ ಆನೆಯ ದಾಳಿಯಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿದ್ದು ಊರಿನ ಗ್ರಾಮಸ್ಥರಿಗೆ ಹಾಗೂ ಸುತ್ತಮುತ್ತಲಿನ ನವರಿಗೆ ಆತಂಕ ಹೆಚ್ಚಾಗಿದೆ.ಆನೆ ಸೆರೆ ಹಿಡಿಯುವಲ್ಲಿ ವಿಫಲರಾದ ಅರಣ್ಯ ಇಲಾಖೆಯಾ ವಿರುದ್ಧ ರೈತರು ಆಕ್ರೋಶವ್ಯಕ್ತ ಪಡಿಸಿದ್ದಾರೆ.

ಸ್ಥಳಕ್ಕೆ ಅರಣ್ಯಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದು ಆನೆಗಳ ಹಾವಳಿಯನ್ನು ತಪ್ಪಿಸಲು ಕ್ರಮತೆಗೆದುಕೊಳ್ಳಬೇಕಾಗಿ ವಿನಂತಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular