ಬೆಂಗಳೂರು : ಮಹಡಿ ಮೇಲೆ ಒಣಹಾಕಿದ್ದ ಬಟ್ಟೆ ತರಲು ಹೋಗಿದ್ದ ವೇಳೆ ನೀರು ತುಂಬಿದ ಬಕೆಟ್ನಲ್ಲಿ ಮುಳುಗಿ 11 ತಿಂಗಳು ಮಗು ಸಾವನ್ನಪ್ಪಿದ್ದನ್ನು ನೋಡಿದ ತಾಯಿ ದುಃಖ ತಡೆಯಲಾರದೇ ತಾನೂ ಸಹ ಆತ್ಮಹತ್ಯೆಗೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ಠಾಣೆಯ ಭೈರವೇಶ್ವರ ನಗರದಲ್ಲಿ ನಡೆದಿದೆ.
ಅಗಸ್ತ್ಯ ಮೃತ ಮಗು. ಮಗು ತಾಯಿ ಪ್ರತಿಭಾ ವಾಲಿ (29) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ತಾಯಿ, ಮಗು ಇಬ್ಬರೇ ಇದ್ದಾಗ ಘಟನೆ ನಡೆದಿದೆ. ಪ್ರತಿಭಾ ಮತ್ತು ಮಹಂತೇಶ್ ವೃತ್ತಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಗಳಾಗಿದ್ದರು. ಮಹಾಂತೇಶ್ ವಾಲಿ ಅವರು ಪೀಣ್ಯ ೨ನೇ ಹಂತದಲ್ಲಿರುವ ಏಸ್ ಡಿಸೈನರ್ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಪ್ರತಿಭಾ ವಾಲಿ ಅವರು ಸಿಲ್ಕ್ ಬೋರ್ಡ್ ಬಳಿ ಇರುವ ಇನ್ ಟೈಮ್ ಟೆಕ್ ಎಂಬ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಅವರು ಮನೆಯಿಂದಲೇ ಕೆಲಸ ಮಾಡಿಕೊಂಡಿದ್ದರು. ಪ್ರತಿಭಾ ಅವರು ಮಹಡಿ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಹೋಗಿದ್ದರು. ಆಗ, ಮಗು ನೀರು ತುಂಬಿದ ಬಕೆಟ್ನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದೆ. ಅದನ್ನು ನೋಡಿದ ಪ್ರತಿಭಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.
ಪತಿ ಮಹಾಂತೇಶ್ ಕಚೇರಿಯಿಂದ ಮನೆಗೆ ಹಿಂತಿರುಗಿ ಬಾಗಿಲನ್ನು ಬಡಿದರೆ ಬಾಗಿಲು ತೆರೆಯಲಿಲ್ಲ. ಪ್ರತಿಭಾಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೇಗೋ
ಮಾಡಿ ಕಿಟಕಿಯ ಒಳಗಡೆ ಭಾಗದಲ್ಲಿದ್ದ ಕೀಯನ್ನು ತೆಗೆದುಕೊಂಡು ಬಾಗಿಲು ತೆರೆದು ಒಳಗೆ ಹೋಗಿ ರೂಮ್ ನೋಡಿದರೆ, ನನ್ನ ಪತ್ನಿ ನೇಣು ಹಾಕಿಕೊಂಡಿದ್ದಳು. ಎಡಗೈ ಮುಂಗೈಯನ್ನು ಚಾಕುವಿನಿಂದ ಕತ್ತರಿಸಿಕೊಂಡಿದ್ದು, ರಕ್ತ ಸೋರುತ್ತಿತ್ತು. ಡೆತ್ನೋಟ್ ಪಕ್ಕದಲ್ಲಿ ಖಾಲಿಯಾಗಿದ್ದ 15 ಮಾತ್ರೆ ಶೀಟ್ಪತ್ತೆಯಾಗಿದೆ. ಮಗನನ್ನು ಮಂಚದ ಮೇಲೆ ಮಲಗಿಸಿದ್ದು, ಆತನೂ ಮೃತಪಟ್ಟಿದ್ದನು ಎಂದು ಪತಿ ತಿಳಿಸಿದ್ದಾರೆ. ಈ ಘಟನೆ ಸಂಬAಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೆತ್ನೋಟ್ನಲ್ಲಿ ಏನಿದೆ?
ನಾನು ಬಟ್ಟೆ ತರಲು ಮಹಡಿ ಮೇಲೆ ಹೋಗಿದ್ದೆ. ಈ ವೇಳೆ ಮಗು ಬಚ್ಚಲು ಮನೆಗೆ ಹೋಗಿದೆ. ಆ ವೇಳೆ ಬಕೆಟ್ನಲ್ಲಿ ಮುಳುಗಿ ಸತ್ತಿದೆ. ನನ್ನ ಮಗುವನ್ನು ಉಳಿಸಿಕೊಳ್ಳಲು ಆಗಿಲ್ಲ. ನನ್ನ ಮಗುವಿನ ಸಾವಿಗೆ ನಾನೇ ಕಾರಣ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದಾಗಿ ಪ್ರತಿಭಾ ಡೆತ್ ನೋಟ್ನಲ್ಲಿ ಬರೆದಿದ್ದಾರೆ. ಮೊದಲಿಗೆ ಪ್ರತಿಭಾ ಮಾತ್ರೆ ನುಂಗಿ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ರಕ್ತ ಬಾರದ ಹಿನ್ನೆಲೆ ನೇಣಿಗೆ ಶರಣಾಗಿದ್ದಾರೆ.


