ಬೆಂಗಳೂರು : ಬಹು ನಿರೀಕ್ಷಿತ 18 ನೇ ಆವೃತ್ತಿಯ ಐಪಿಎಲ್ ಕದನಕ್ಕೆ ಅಖಾಡ ಸಜ್ಜಾಗಲು ಒಂದು ದಿನ ಮಾತ್ರ ಬಾಕಿ ಉಳಿದಿದೆ. ಆದರೆ,ಆರ್ಸಿಬಿ ತಂಡಕ್ಕೆ ಐಪಿಎಲ್ ಕಪ್ ಗೆಲ್ಲಲು ಇನ್ನೂ ಸಾಧ್ಯವಾಗಿಲ್ಲ.
ಈ ಬಾರಿ ಕಪ್ ನಮ್ದೆ ಎಂದು ಹೇಳಬೇಡಿ. ಈ ರೀತಿ ಹೇಳಿರುವುದು ಆರ್ಸಿಬಿಯ ಬಿರುಸಿನ ಆಟಗಾರ ವಿರಾಟ್ಕೊಹ್ಲಿ ಅಭಿಮಾನಿಗಳಿಗೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ. ಈ ಸಲ ಕಪ್ ನಮ್ದೆ ಅಂತ ಹೇಳಬೇಡಿ ಎಂದು ಎಬಿಡಿಗೆ ವೈಯಕ್ತಿಕವಾಗಿ ಸಂದೇಶ ಕಳುಹಿಸಿರುವುದನ್ನು ಸ್ವತಃ ಎಬಿಡಿಯವರೇ ಬಹಿರಂಗಪಡಿಸಿದ್ದಾರೆ.
ಈ ಹಿಂದೆ ಒಂದು ಬಾರಿ ಕಪ್ ನಮ್ದೆ ಎಂಬುದಾಗಿ ಹೇಳಿದ್ದೆ. ಇದನ್ನು ಗಮನಿಸಿದ ವಿರಾಟ್ಕೊಹ್ಲಿ, ನನಗೆ ವೈಯಕ್ತಿಕ ಸಂದೇಶ ರವಾನಿಸಿ ಕಪ್ ನಮ್ದೆ ಅಂತ ಹೇಳಬೇಡಿ. ಈ ಮಾತು ಕೇಳಿ ಕೇಳಿ ಸಾಕಾಗಿದೆ ಎಂಬ ಅಂಶವನ್ನು ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.
ಈ ಘೋಷವಾಕ್ಯವನ್ನು ನಾನು ಬಿಟ್ಟಿದ್ದೇನೆ.ಆದರೂ ಈ ಬಾರಿ ಆರ್ಸಿಬಿ ಕಪ್ ಗೆಲ್ಲುವ ವಿಶ್ವಾಸವಿದೆ. ಆರ್ಸಿಬಿ ಈ ಬಾರಿ ಬಲಿಷ್ಠ ತಂಡವಾಗಿದ್ದು, ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಬಿಡಿ. ಅಚ್ಚರಿ ಎಂದರೆ ಐಪಿಎಲ್ನ 18ನೇ ಆವೃತ್ತಿ ನಡೆಯುತ್ತಿದ್ದು, ವಿರಾಟ್ಕೊಹ್ಲಿಯ ಜರ್ಸಿ ನಂಬರ್ ಕೂಡ ೧೮. ಆದ್ದರಿಂದ ಟ್ರೋಫಿ ಆರ್ಸಿಬಿಯದ್ದು ತಾವು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಆರ್ಸಿಬಿ ಇದುವರೆಗೂ ಕಪ್ ಗೆದ್ದಿಲ್ಲ. 2009, 2011 ಹಾಗೂ 2016ರಲ್ಲಿ ಮೂರು ಬಾರಿ ಐಪಿಎಲ್ ಫೈನಲ್ ತಲುಪಿದೆ. ಆದರೂ ಸೋಲು ಕಂಡಿತು


