ಬೆಂಗಳೂರು : ಮನೆಗಳು, ಖಾಸಗಿ ಕಟ್ಟಡಗಳು ಅಥವಾ ಗೋಡೆಗಳ ಮೇಲೆ ಪ್ರದರ್ಶಿಸಿರುವ ಜಾಹೀರಾತುಗಳು ಮತ್ತು ಜಾಹೀರಾತು ಫಲಕಗಳಿಗೆ ಇನ್ನು ಮೇಲೆ ತೆರಿಗೆ ಬೀಳಲಿದೆ. ಖಾಸಗಿ ಜಾಗಗಳಲ್ಲಿ ಸಾರ್ವಜನಿಕರ ದೃಷ್ಟಿಗೆ ಬೀಳುವಂತೆ ಪ್ರದರ್ಶನ ಗೊಳ್ಳುವ ಎಲ್ಲ ಜಾಹೀರಾತುಗಳಿಗೆ ತೆರಿಗೆ ವಿಧಿಸುವ ತಿದ್ದು ಪಡಿಯನ್ನು `ಕರ್ನಾಟಕ ಮುನ್ಸಿಪಾಲಿಟಿಗಳು ಮತ್ತು ಇತರ ಕಾನೂನು’ಗಳಿಗೆ ತರಲಾಗುತ್ತಿದೆ.
ಈ ಸಂಬAಧ ವಿಧೇಯಕವನ್ನು ನಗರಾಭಿ ವೃದ್ಧಿ ಸಚಿವ ಭೈರತಿ ಸುರೇಶ್ ಶುಕ್ರವಾರ ವಿಧಾನಸಭೆ ಯಲ್ಲಿ ಮಂಡಿಸಿದರು. ಮುಂಬರುವ ವಾರ ಚರ್ಚೆಯಾಗಿ ಶಾಸನ ರೂಪ ಪಡೆಯಲಿರುವ ವಿಧೇಯಕ ಇದಾಗಿದೆ. ಮನೆ, ಕಟ್ಟಡ, ಗೋಡೆ, ಚೌಕಟ್ಟು, ಸ್ತಂಭ ಇತ್ಯಾದಿಗಳ ಮೇಲೆ ದೀಪಾಲಂಕಾರ ಮಾಡದಿರುವ ಒಂದು ಚದರ ಮೀಟರ್ ಜಾಹೀರಾತುಗಳಿಗೆ ವಾರ್ಷಿಕ 10 ರೂಪಾಯಿ ; ಐದು ಚದರ ಮೀಟರ್ ಜಾಹೀರಾತಿಗೆ 25 ರೂಪಾಯಿ ಹೀಗೆ ವಿವಿಧ ಸ್ಲಾö್ಯಬ್ಗಳಲ್ಲಿ ತೆರಿಗೆಯನ್ನು ಪ್ರಸ್ತಾಪಿಸಲಾಗಿದೆ. ಒಂದು ಚ.ಮೀಟರ್ ಮೀರಿದ ಮತ್ತು 2.5 ಚದರ ಮೀಟರ್ವರೆಗಿನ ಫಲಕಗಳಿಗೆ 30 ರೂಪಾಯಿ; ದೀಪಾಲಂಕಾರ ಮಾಡಿದ ಫಲಕಗಳಿಗೆ ೫೦ ರೂಪಾಯಿ ತೆರಿಗೆ ಹಾಕಲು ಸರ್ಕಾರ ಉದ್ದೇಶಿಸಿದೆ.


