ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಭಾರಿ ದುರಂತ ಸಂಭವಿಸಿದ ಪ್ರಕರಣ ಕ್ಕೆ ಸಂಭಂದಿಸಿದಂತೆ ಕೊನೆಗೂ ಆರ್ ಸಿಬಿ ಮ್ಯಾನೇಜೈಂಟ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಎ1 ಆರ್ ಸಿಬಿ ಮ್ಯಾನೇಜೈಂಟ್, ಎ2 ಡಿಎನ್ ಎ ಇವೆಂಟ್ ಮ್ಯಾನೇಜೈಂಟ್, ಎ3 ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಎಂದು ಪ್ರಕರಣ ದಾಖಲಾಗಿದೆ. ಬಿಎನ್ ಎಸ್ ಸೆಕ್ಷನ್ 105, 115, 118 ಅಡಿ ಮೊಕದ್ದಮೆ ದಾಖಲಾಗಿದೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್ ಸಿಬಿ ಮ್ಯಾನೇಜೆಂಟ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಇದೀಗ ಕಾಲ್ತುಳಿತ ದುರಂತ ಸಂಭವಿಸಿ 24 ಗಂಟೆ ಬಳಿಕ ಇದೀಗ ಪ್ರಕರಣ ದಾಖಲಾಗಿದ್ದು ಸಮಗ್ರ ತನಿಖೆ ನಡೆಸುವಂತೆ ಹೈಕೊರ್ಟ್ ಸೂಚಿಸಿದೆ.


