Saturday, November 23, 2024
Flats for sale
Homeಕ್ರೈಂಬೆಂಗಳೂರು ; ಅಶ್ಲೀಲ ವಿಡಿಯೋ ಪ್ರಕರಣ : ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿಗೆ ಹೊರಟ ಸಂಸದ ಪ್ರಜ್ವಲ್​...

ಬೆಂಗಳೂರು ; ಅಶ್ಲೀಲ ವಿಡಿಯೋ ಪ್ರಕರಣ : ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿಗೆ ಹೊರಟ ಸಂಸದ ಪ್ರಜ್ವಲ್​ ರೇವಣ್ಣ.

ಬೆಂಗಳೂರು ; ವಿಶೇಷ ತನಿಖಾ ತಂಡ ಜೆಡಿಎಸ್ ಸಂಸದ ಮತ್ತು ಆಪಾದಿತ ಸೆಕ್ಸ್ ವಿಡಿಯೋ ಹಗರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣರವರು ಶುಕ್ರವಾರ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದು ಅವರನ್ನು ತಕ್ಷಣವೇ ಬಂಧಿಸಲಿದೆ ಎಂದು ಕರ್ನಾಟಕ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಗುರುವಾರ ಹೇಳಿದ್ದಾರೆ.

ಮ್ಯೂನಿಚ್‌ನಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ವಿಮಾನ ಹತ್ತುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಜ್ವಲ್ ಆಗಮಿಸುತ್ತಿರುವ LH764 ವಿಮಾನ ಮ್ಯೂನಿಕ್‌ ಏರ್‌ಪೋರ್ಟ್‌ನಿಂದ ಟೇಕಾಫ್ ಆಗಿದೆ. ಈಗಾಗಲೇ ಲಗೇಜ್ ಚೆಕ್ ಇನ್ ಮಾಡಿಸಿರುವ ಪ್ರಜ್ವಲ್​, ಬ್ಯುಸಿನೆಸ್​​ ಕ್ಲಾಸ್​​ ಪ್ರಯಾಣಿಕರ ಜೊತೆ ಕುಳಿತುಕೊಂಡಿದ್ದಾರೆ. ಪ್ರಜ್ವಲ್‌ ರೇವಣ್ಣ 4 ಬ್ಯಾಗ್ ತಂದಿರುವ ಮಾಹಿತಿ ಇದೆ. ಕೆಂಪೇಗೌಡ ಏರ್‌ಪೋರ್ಟ್‌ಗೆ ಮಧ್ಯರಾತ್ರಿ ಆಗಮಿಸಲಿದ್ದಾರೆ.

ಜರ್ಮನಿಯಲ್ಲಿ ಇದ್ದಾರೆ ಎನ್ನಲಾಗುತ್ತಿರುವ ಪ್ರಜ್ವಲ್ ರೇವಣ್ಣ ಅವರು 2 ದಿನಗಳ ಹಿಂದೆಯೇ ಫ್ಲೈಟ್‌ ಟಿಕೆಟ್‌ ಬುಕ್ ಮಾಡಿದ್ದರು. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರಜ್ವಲ್ ರೇವಣ್ಣ ಅವರು ಮ್ಯೂನಿಕ್‌ನಿಂದ ಲುಪ್ತಾನ್ಸಾ A350-941 ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ.ಬರೋಬ್ಬರಿ 31 ದಿನಗಳ ಬಳಿಕ ವಿಡಿಯೋ ಮಾಡಿ ಮೇ 31 ರಂದು ನಾನು ಎಸ್​ಐಟಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದರು. ಆ ಮೂಲಕ ಮ್ಯೂನಿಕ್​ನಿಂದ ಬೆಂಗಳೂರಿಗೆ ಬರಲು ಟಿಕೆಟ್​ ಕೂಡ ಬುಕ್​ ಮಾಡಲಾಗಿತ್ತು. ಪ್ರಜ್ವಲ್​ ಬುಕ್ ಮಾಡಿರುವ ಟಿಕೆಟ್​ನ ಸಂಪೂರ್ಣ ಮಾಹಿತಿ ಲಭ್ಯವಾಗಿತ್ತು. ಲುಫ್ತಾನ್ಸಾ ಏರ್​​ಲೈನ್ಸ್ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಆಗಿತ್ತು. ಇದೀಗ ಬೆಂಗಳೂರಿನತ್ತ ಹೊರಟಿದ್ದಾರೆ.

ಜರ್ಮನಿಯ ಮ್ಯೂನಿಕ್‌ನಿಂದ ಹೊರಟಿರುವ ಪ್ರಜ್ವಲ್ ರೇವಣ್ಣ ಅವರು 4 ಬ್ಯಾಗ್‌ಗಳನ್ನು ತರುತ್ತಿದ್ದಾರೆ. 2 ಕ್ಯಾರಿ ಬ್ಯಾಗ್​, 2 ಟ್ರಾಲಿ ಬ್ಯಾಗ್‌ಗಳನ್ನು ಪ್ರಜ್ವಲ್ ರೇವಣ್ಣ ತರುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮ್ಯೂನಿಕ್​ನಲ್ಲಿ ಪ್ರಜ್ವಲ್ ರೇವಣ್ಣ ಅವರಿದ್ದ ಫೈಟ್ 29 ನಿಮಿಷ ತಡವಾಗಿ ಟೇಕ್ ಆಫ್ ಆಗಿದೆ. ಇಂದು ಮಧ್ಯಾಹ್ನ 3:46ಕ್ಕೆ ಹೊರಡಬೇಕಿದ್ದ ವಿಮಾನ 4:05ಕ್ಕೆ ಹೊರಟಿದೆ. 29 ನಿಮಿಷ ತಡವಾಗಿ ಮ್ಯೂನಿಕ್‌ನಿಂದ ಹೊರಡಿರುವುದರಿಂದ ಪ್ರಜ್ವಲ್ ರೇವಣ್ಣ ಅವರಿದ್ದ ವಿಮಾನ ರಾತ್ರಿ 12:59ಕ್ಕೆ ಬೆಂಗಳೂರನ್ನು ತಲುಪುವ ಸಾಧ್ಯತೆ ಇದೆ.

ಜ್ವಲ್​ ರೇವಣ್ಣಗೆ ಬಂಧನ ಭೀತಿ ಕಾಡುತ್ತಿರುವ ಮಧ್ಯೆ ವಿದೇಶದಲ್ಲಿದ್ದುಕೊಂಡೇ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದ್ದು, ಸಿಐಡಿ ಠಾಣೆ ಕ್ರೈಮ್ ನಂ 20/2024 ಪ್ರಕರಣ, ಸೈಬರ್ ಕ್ರೈಮ್ ಠಾಣೆ ಕ್ರೈಮ್ ನಂ 2/2024, ಹೊಳೆನರಸೀಪುರ ಠಾಣೆ ಕ್ರೈಮ್ ನಂ 107/2024 ಈ 3 ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಆದರೆ ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ. ಅರ್ಜಿ ವಿಚಾರಣೆಯನ್ನ ಮೇ 31ಕ್ಕೆ ಮುಂದೂಡಿ ಆದೇಶ ಹೊರಡಿಸಿತ್ತು. ಆ ಮೂಲಕ ಪ್ರಜ್ವಲ್ ಬಂಧನ ಫಿಕ್ಸ್​ ಆಗಿದ್ದು, SIT ತಂಡ ಈಗಾಗಲೇ ಏರ್​ಪೋರ್ಟ್​ನಲ್ಲೇ ಬೀಡುಬಿಟ್ಟಿದೆ.ಮಧ್ಯರಾತ್ರಿ ಏರ್​ಪೋರ್ಟ್​ನಲ್ಲಿ ಪ್ರಜ್ವಲ್ ರೇವಣ್ಣ ಅವರು ಬಂದ್ರೆ ಅವರನ್ನು ಪೊಲೀಸರು​ ಬಂಧಿಸೋದಕ್ಕೆ ಸುಮಾರು 1 ರಿಂದ ಒಂದೂವರೆ ಗಂಟೆಗಳ ಕಾಲ ಬಂಧನ ಪ್ರಕ್ರಿಯೆ ನಡೆಯಲಿದೆ. ಅಲ್ಲಿಂದ ಆರೋಪಿಯ ಇಮಿಗ್ರೇಷನ್ ಪ್ರೋಸೆಸ್ ಆರಂಭವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular