Thursday, March 12, 2026
Flats for sale
Homeರಾಜ್ಯಬೀದರ್ : 3 ಎಕರೆ ಅರಣ್ಯ ಪ್ರದೇಶ ಒತ್ತುವರಿ ಜಂಟಿ ತೆರೆವು ಕಾರ್ಯಾಚರಣೆ.

ಬೀದರ್ : 3 ಎಕರೆ ಅರಣ್ಯ ಪ್ರದೇಶ ಒತ್ತುವರಿ ಜಂಟಿ ತೆರೆವು ಕಾರ್ಯಾಚರಣೆ.

ಬೀದರ್ : ಕೊಂಗಳೀ ಗ್ರಾಮದ ರೈತರು 3 ಏಕರೆ ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ಬಳಸುತ್ತಿದ್ದದನ್ನು ಸಾಬೀತಾದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಯ ಕಾರ್ಯಾಚರಣೆ ನಡೆಸಿ ಒತ್ತುವರಿ ಪ್ರದೇಶ ತೆರವುಗೊಳಿಸಿದರು.

ಏನಿದು ಪ್ರಕರಣ?:

ತಾಲ್ಲೂಕಿನ ಸಮೀಪಲ್ಲಿರುವ ವಾಂಖರಾಖೆಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೊಂಗಳಿ ಗ್ರಾಮದ ಪರಿಭಾವಿತ ಅರಣ್ಯ ಪ್ರದೇಶದ ಸರ್ವೇ ನಂ 44 ಕ್ಷೇತ್ರದಲ್ಲಿನ ರೈತರು ಅವರ ಕುಟುಂಬದವರು ಹಿಂದಿನ ಆರೇಳು ವರ್ಷಗಳಿಂದ 3 ಎಕರೆಯಷ್ಟು ಅರಣ್ಯವನ್ನು ನಾಶಗೊಳಿಸಿ ಅಕ್ರಮ ಒತ್ತುವರಿ ಮಾಡಿ ಅಲ್ಲಿ ತಮ್ಮ ಕೃಷಿ ಚಟುವಿಕೆಗಳನ್ನು ಮಾಡುತ್ತಿದ್ದಾರೆ.

ಸದರಿ ಅಕ್ರಮದಿಂದ ಅರಣ್ಯ ಕ್ಷೇತ್ರ ಕಡಿಮಯಾಗಿದ್ದು ಪರಿಣಾಮವಾಗಿ ವನ್ಯ ಜೀವಿಗಳು ನೆರೆಹೊರೆಯ ಕೃಷಿ ಭೂಮಿಯಲ್ಲಿ ಧುಮಿಕುಸುತ್ತಿವೆ, ಮತ್ತು ಬೆಳೆಗಳು ನಾಶ ಮಾಡುತ್ತಿವೆ ಎಂದು ಗ್ರಾಮಸ್ಥರು ಸಚಿವರಾದ ಈಶ್ವರ ಖಂಡ್ರೆ (ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು) ಹಾಗೂ ಜಿಲ್ಲಾ ಅರಣ್ಯ ಅಧಿಕಾರಿ ಬೀದರ ಇವರಿಗೆ ದೂರು ನೀಡಿದ್ದರು.

ದೂರಿನನ್ವಯ ತಕ್ಷಣ ಕ್ರಮ ಕೈಗೊಂಡು ಶ್ರಿಮತಿ ವಾನತಿ ಎಂ.ಎಂ ( ಉಪಅರಣ್ಯ ಸಂರಕ್ಷಣಾಧಿಕಾರಿ)ಮಾರ್ಗದರ್ಶನ ಮೇರೆಗೆ ಶಿವಕುಮಾರ ಗಜಾರೆ ( ಸಹಾಯಕ ಅರಣ್ಯಸಂರಕ್ಷಣಾಧಿಕಾರಿ) ಇವರ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳು ಒತ್ತುವರಿ ಅಕ್ರಮ‌ ಜಮೀನು ಒತ್ತುವರಿ ತೆರವು ಮಾಡಿ‌ ಅರಣ್ಯ ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಂಡರು.

ಕಾರ್ಯಚರಣೆಯಲ್ಲಿ ಪ್ರವೀಣಕುಮಾರ ಮೋರೆ ( ವಲಯ ಅರಣ್ಯ ಅಧಿಕಾರಿ), ಶಿವಾನಂದ ಗೊರನಾಳಕರ ( ಉಪ ವಲಯ ಅರಣ್ಯ ಅಧಿಕಾರಿ), ಶಿವಾನಂದ್ ಅಲ್ಮಾಜಿ, ಶಿವಾನಂದ ಬಿರಾದಾರ , ಪಾರ್ವತಮ್ಮ , ಪವನಕುಮರ ದೋಕೆ, ಸಂತೋಷ ಚ್ವಹಾನ್, ಸಿದ್ರಾಮ ಕುಂಬಾರ ಸೇರಿ ಅರಣ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular