Tuesday, October 21, 2025
Flats for sale
Homeಕ್ರೈಂಬೀದರ್ : ಅತ್ಯಾಚಾರ ಪ್ರಕರಣ ; ಮಾಜಿ ಸಚಿವ‌ ಪ್ರಭು ಚೌಹಾಣ್ ಪುತ್ರಗೆ ಬಂಧನ ಭೀತಿ..!

ಬೀದರ್ : ಅತ್ಯಾಚಾರ ಪ್ರಕರಣ ; ಮಾಜಿ ಸಚಿವ‌ ಪ್ರಭು ಚೌಹಾಣ್ ಪುತ್ರಗೆ ಬಂಧನ ಭೀತಿ..!

ಬೀದರ್ : ಮಾಜಿ ಸಚಿವ‌ ಪ್ರಭು ಚೌಹಾಣ್ ಪುತ್ರನ ವಿರುದ್ಧ ಅತ್ಯಾಚಾರ ಕೇಸ್ ದಾಖಲಾದ ಬೆನ್ನಲ್ಲೆ ಬಂಧನದ ಭೀತಿ ಶುರುವಾಗಿದೆ. ಈಗಾಗಲೇ ಸಂತ್ರಸ್ಥೆಯ ಮೆಡಿಕಲ್ ಟೆಸ್ಟ್ ಮುಗಿದ್ದು ಮತ್ತು ಜಿಲ್ಲಾ ಜೆಎಂಎಫ್ ಸಿ ನ್ಯಾಯಾಲಧೀಶರ ಮುಂದೆ 164 ಹೇಳಿಕೆ ನೀಡಿದ್ದು ಹೀಗಾಗಿ ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರ ಯಾವ ಕ್ಷಣದಲ್ಲಿ ಬೇಕಾದ್ರು ಅರೆಸ್ಟ್ ಆಗುವ ಸಾದ್ಯತೆಯಿಂದಾಗಿ ಮುಂಬೈಗೆ ಎಸ್ಕೇಪ್ ಆಗಿದ್ದಾನೆಂದು ಮಾಹಿತಿ ದೊರೆತಿದೆ. ಆದರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗುತ್ತಿದ್ದಂತ್ತೆ ಪೊಲೀಸರು ಅಲರ್ಟ್ ಆಗಿದ್ದು ಪ್ರತೀಕ್ ಚೌಹಾಣ್ ಬಂಧಿಸಲು ತಯಾರಿ ಮಾಡಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮದುವೆಯಾಗಿ ಸುಖ ಸಂಸಾರಕ್ಕೆ ಕಾರಣವಾಗಬೇಕಿದ್ದ ಮಾಜಿ ಸಚಿವ ಪ್ರಭು ಚೌಹಾಣ್ ಕುಟುಂಬ ರಂಪ್ಪಾಟ ಬೀದಿಗೆ ಬಿದ್ದು ಬಾರಿ ಸುದ್ದಿಯಾಗಿದೆ.ನಿನ್ನೆ ಬೀದರ್ ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರ ನ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದ್ದು ಮೇಡಿಕಲ್ ಟೆಸ್ಟ್ ಕೂಡಾ ಮುಕ್ತಾಯವಾಗಿದೆ. ಸಂತ್ರಸ್ಥೆಯ ಮೇಡಿಕಲ್ ಟೆಸ್ಟ್ ಮುಗಿದ ಬೆನ್ನಲ್ಲೆ ಇಂದು ಬೀದರ್ ಜೆಎಂಎಫ್ ಸಿ ಕೋರ್ಟ್ ಗೆ ಸಂತ್ರಸ್ಥೆ ಆಗಮಿಸಿದ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ… ಸಂತ್ರಸ್ಥೆಯನ್ನು ತಮ್ಮ ರಕ್ಷಣೆಯಲ್ಲಿ ಮಹಿಳಾ ಪೊಲೀಸರು ಕೋರ್ಟ್ ಗೆ ಕರೆದುಕೊಂಡು ಬಂದಿದ್ದು ನ್ಯಾಯಾಧೀಶರ ಮುಂದೆ ಅತ್ಯಾಚಾರದ ಬಗ್ಗೆ 164 ಸ್ಟೆಟ್ಮೆಂಟ್ ನೀಡಿದ್ದಾರೆ. ಬೀದರ್ ನ ಪ್ರಿನ್ಸಿಪಲ್ ಜೆಎಂಎಫ್ ಸಿ ಕೋರ್ಟ್ ನ ನ್ಯಾಯಾಧೀಶರಾದ ಕಾಡಪ್ಪ ಹುಕ್ಕೇರಿ ಮುಂದೆ ಸಂತ್ರಸ್ಥೆ ಹೇಳಿಕೆ ನೀಡಿದ್ದು ನಿಶ್ಚಿತಾರ್ಥಕ್ಕೂ ಮೊದಲು ಬೆಂಗಳೂರು ಮತ್ತು ಮಹಾರಾಷ್ಟ್ರದ‌ ಲಾತೂರು ಸೇರಿದಂತೆ ಹಲವು ಕಡೆ ಖಾಸಗಿ ಹೋಟೆಲ್ ಗೆ ಹೋಗಿ ತಂಗಿರುವ ವಿಚಾರ ಹೇಳಿದ್ದು ಮತ್ತು ಖಾಸಗಿ ಹೋಟೆಲ್‌ನಲ್ಲಿ ಒತ್ತಾಯ ಪೂರ್ವಕವಾಗಿ ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರ ಲೈಂಗಿಕ ಕ್ರಿಯೆ ಮಾಡಿ ಅತ್ಯಾಚಾರ ಮಾಡಿದ ಬಗ್ಗೆ ಮತ್ತು ಮದುವೆ ಮಾಡಿಕೊಳ್ಳುಲು ಮುಂದೆ ಹಾಕುತ್ತಾ ಬಂದಿದ್ದು ಕುಟುಂಬದಲ್ಲಿ ಗಲಾಟೆಯಾದ ಬಗ್ಗೆ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ.

ಶಾಸಕ ಪ್ರಭು ಚೌಹಾಣ್ ಪುತ್ರನ ಗಂಭೀರ ಆರೋಪ ಬೆನ್ನಲ್ಲೆ ಇಂದು ಸಂತ್ರಸ್ಥೆ ಕೂಡಾ ಸುದ್ದಿಗೋಷ್ಠಿ ಮಾಡಿ ದಾಖಲೆಗಳನ್ನು ಬಿಡುಗಡೆ ಮಾಡಿ ಚೌಹಾಣ್ ತೀರುಗೇಟು ನೀಡಿದ್ದು ನನಗೆ ನ್ಯಾಯ ಬೇಕು ನನ್ನ ಜೊತೆ ಆಗಿದ್ದು, ಬೇರೆ ಯುವತಿ ಗೆ ಆಗಬಾರದು, ನನಗೆ ಯಾರೂ ಬಾಯ್ ಫ್ರೆಂಡ್ ಇಲ್ಲ. ಅವರು ಸುಳ್ಳು ಆರೋಪ ಮಾಡಿದ್ದಾರೆ. ನಾನು ಯಾರ ಜೊತೆಗು ಚಾಟಿಂಗ್, ವಿಡಿಯೋ ಕಾಲ್ ಅಲ್ಲಿ ಮಾತು ಆಡಿಲ್ಲ, ಈ ವೇಳೆ ಕೈ ಕಟ್ ಮಾಡಿದ ವಿಡಿಯೋ ಕೂಡಾ ಸಂತ್ರಸ್ಥೆಬಿಡುಗಡೆ ಮಾಡಿದ್ದು ನೀನು ನನ್ನ ಎಷ್ಟು ಪ್ರೀತಿ ನೋಡಣ ಎಂದು ಚೌಹಾಣ್ ಪುತ್ರ ಬ್ಲೇಡ್ ನಿಂದ ನನ್ನ ಕೈ ಕಟ್ ಮಾಡಿ ಓಡಿ ಹೋಗಿದ್ದಾನೆ ಎಂದು ಹೇಳಿದ್ದಾರೆ. ಚೌಹಾಣ್ ಭಗವಂತ್ ಖೂಬಾ ಪಿತೂರಿ ಎಂದು ಹೇಳಿದ್ದು ನಾನು ಇಲ್ಲಿಯವರೆಗೆ ಖೂಬಾ ರನ್ನು ನಾನು ನೋಡಿಲ್ಲಾ ಸಂತ್ರಸ್ಥೆ ಹೇಳಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

Most Popular