ಬಾಗಲಕೋಟ : ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪೂರದ ಎಸ್. ಸಿ. ಪಿ ಪ್ರೌಢಶಾಲೆಯ ಚಿತ್ರಕಲಾವಿದ ಶಿವಾನಂದ ನೀಲನೂರ ಅವರು ಆರ್. ಸಿ. ಬಿ ಗೆದ್ದು ಪ್ಲೇ ಆಫ್ ತನಕ ಬಂದ ಹಿನ್ನೆಲೆ ತನ್ನ ರಕ್ತದಿಂದಲೇ ವಿರಾಟ್ ಕೊಹ್ಲಿ ಚಿತ್ರ ಬಿಡಿಸಿ, ಅಭಿಮಾನ ಮೆರೆದಿದ್ದಾನೆ.
ಇವರು ಶಿಕ್ಷಕರಾಗಿದ್ದು ತಮ್ಮ ರಕ್ತದಲ್ಲಿ ಕೊಹ್ಲಿ ಚಿತ್ರ ಬಿಡಿಸುವ ಮೂಲಕ ಅಭಿಮಾನ ತೋರಿದ್ದಾರೆ . 2008 ರಿಂದಲೂ ಆರ್. ಸಿ. ಬಿ ಹಾಗೂ ಕೊಹ್ಲಿ ಅವರ ಅಪ್ಪಟ ಅಭಿಮಾನಿಯಾದ ಶಿವಾನಂದ ರಕ್ತದ ಚಿತ್ರ ಕೊಡುಗೆ ನೀಡಿದ್ದು, ಅದನ್ನು ಕೊಹ್ಲಿ ಅವರು ಕೂಡ ನೋಡಬೇಕು ಎಂಬ ಉತ್ಕಟ ಬಯಕೆಯನ್ನು ಹೊಂದಿದ್ದಾರೆ. ಅವರ ಅಭಿಮಾನ ಚಿತ್ರಕ್ಕೆ ಶುಭಹಾರೈಕೆಯ ಸುರಿಮಳೆಗಳು ಕ್ರಿಕೆಟ್ ಅಭಿಮಾನಿಗಳಿಂದ ಕೇಳಿಬರುತ್ತಿರುವುದು ತಿಳಿದುಬಂದಿದೆ.


