Friday, March 13, 2026
Flats for sale
Homeರಾಜ್ಯಬಾಗಲಕೋಟೆ : ಶತಮಾನಗಳು ಉರುಳಿದರೂ ಒಂದು ಸಾರಿಯೂ ಬತ್ತದ ಬಾವಿ - ಹೀಗೂ ಉಂಟೆ ?

ಬಾಗಲಕೋಟೆ : ಶತಮಾನಗಳು ಉರುಳಿದರೂ ಒಂದು ಸಾರಿಯೂ ಬತ್ತದ ಬಾವಿ – ಹೀಗೂ ಉಂಟೆ ?

ಬಾಗಲಕೋಟೆ : ಜಗವೇ ವಿಷ್ಮಯ ,ಏನೆಲ್ಲಾ ನಡೆಯುತ್ತೆ ಅದಕ್ಕೆ ಆ ಪಾಮಾತ್ಮನೇ ಕಾರಣ ಎಂಬುದು ಜನರ ನಂಬಿಕೆ.ಬಾಗಲಕೋಟೆಯ ಇಳಕಲ್ ವಿಜಯಮಹಾಂತೇಶ್ವರ ಮಠದ ಶಾಖಾ ಮಠವಾದ ಮಹಾಂತ ತೀರ್ಥವನ್ನು ಡಾ ಬಸವಲಿಂಗ ಸ್ವಾಮೀಜಿ ನೈಸರ್ಗಿಕ ಕಾಡನ್ನಾಗಿ ಬದಲಿಸಿದ್ದಾರೆ. ಇಲ್ಲಿ ಎಂಟು ಎಕರೆ ನಾಲ್ಕು ಗುಂಟೆ ಜಾಗದಲ್ಲಿ ನೂರಾರು ತಳಿ ಗಿಡಗಳು, ಔಷಧಿ ಸಸ್ಯವನ್ನು ಬೆಳೆದಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ನೂರಾರು ವರ್ಷ ಹಳೆಯದಾದ ಒಂದು ಬಾವಿಗಳಿವೆ. ಶತಮಾನಗಳಿಂದಲೂ ಎಷ್ಟೇ ಸಾರಿ ಬರಗಾಲ ಬಂದರೂ ಇದು ಒಂದೇ ಒಂದು ಸಾರಿ ಬರಿದಾಗಿಲ್ಲ.

ಇಲ್ಲಿ ಎಂಟು ಎಕರೆ ನಾಲ್ಕು ಗುಂಟೆ ಜಾಗದಲ್ಲಿ ನೂರಾರು ತಳಿ ಗಿಡಗಳು, ಔಷಧಿ ಸಸ್ಯವನ್ನು ಬೆಳೆದಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ನೂರಾರು ವರ್ಷ ಹಳೆಯದಾದ ಒಂದು ಬಾವಿಗಳಿವೆ. ಇಳಕಲ್ ವಿಜಯಮಹಾಂತೇಶ್ವರ ಮಠದ ಶಾಖಾ ಮಠವಾದ ಮಹಾಂತ ತೀರ್ಥವನ್ನು ಡಾ ಬಸವಲಿಂಗ ಸ್ವಾಮೀಜಿ ನೈಸರ್ಗಿಕ ಕಾಡನ್ನಾಗಿ ಬದಲಿಸಿದ್ದಾರೆ. ಶತಮಾನಗಳಿಂದಲೂ ಎಷ್ಟೇ ಸಾರಿ ಬರಗಾಲ ಬಂದರೂ ಇದು ಒಂದೇ ಒಂದು ಸಾರಿ ಬರಿದಾಗಿಲ್ಲ.

ತಮ್ಮ ತಮ್ಮ ಊರುಗಳಿಗೆ ಈ ನೀರನ್ನು ತೀರ್ಥ ಎಂದು ತೆಗೆದುಕೊಂಡು ಹೋಗುತ್ತಾರೆ. ಈ ನೀರನ್ನು ರ್ತೀಥ ಎಂದು ಸೇವಿಸುವ ಭಕ್ತರು ಇದು ಕೇವಲ ನೀರಲ್ಲ ವಿಜಯಮಹಾಂತೇಶ್ವರ ಸ್ವಾಮೀಜಿ ಅವರ ತೀರ್ಥ ಪ್ರಸಾದ ಅಂತಿದ್ದಾರೆ.ಇಲ್ಲಿಗೆ ಬರುವ ಭಕ್ತರು ಈ ಬಾವಿಯ ನೀರನ್ನು ತೀರ್ಥ ಎಂದು ಕರೆಯುತ್ತಾರೆ. ಬಾವಿಯಲ್ಲಿ ಇಳಿದು ನೀರನ್ನು ಮೈ ಮೇಲೆ ಹಾಕಿಕೊಂಡು ಕುಡಿದು ಪುನೀತರಾಗುತ್ತಾರೆ.

ಈಗ ಎಲ್ಲ ಕಡೆ ಬರ ಬಿದ್ದು ನದಿ ಕರೆಗಳು, ಹಳ್ಳಕೊಳ್ಳಗಳು ಎಲ್ಲ ಖಾಲಿಯಾದರೂ ಈ ಬಾವಿ ಮಾತ್ರ ಬತ್ತಿಲ್ಲ. ಇದಕ್ಕೆ ಕಾರಣ ವಿಜಯಮಹಾಂತೇಶ್ವರ ಸ್ವಾಮೀಜಿ ಅವರ ಪವಾಡ. ಅವರ ಅಮೃತಹಸ್ತದ ಆಸಿರ್ವಾದದಿಂದ ಇದು ನಿರ್ಮಾಣವಾಗಿರೋದು.ಅದು ಕೇವಲ ಹತ್ತರಿಂದ ಹದಿನೈದು ಅಡಿ ಬಾವಿ. ಕಲ್ಲಿನಿಂದ ಬಾವಿ ಕಟ್ಟಿಸಿ ನೂರಾರು ವರ್ಷಗಳು ಕಳೆದಿವೆ. ಆದರೆ ಇಂದಿಗೂ ಈ ಬಾವಿಯಲ್ಲಿನ ನೀರು ಮಾತ್ರ ಕಡಿಮೆಯಾಗಿಲ್ಲ.

ಇದೇ ಬಾವಿಯ ನೀರೇ ಇದೀಗ ಜನ ಜಾನುವಾರುಗಳಿಗೆ ಆಸರೆಯಾಗಿದೆ. ಈ ಬಾವಿಗೆ ಮಹತ್ವದ ಹಿನ್ನೆಲೆ ಇದೆ.ಇಗ ಎಲ್ಲ ಕಡೆ ನೀರಿಲ್ಲದ ಕಾರಣ ಸುತ್ತಮುತ್ತಲಿನ ಜನರು ದನಕರುಗಳು ಕುರಿಮೇಕೆಗಳು ನೀರು ಕುಡಿಯೋದಕ್ಕೆ ಈ ಬಾವಿಯನ್ನೇ ಅವಲಂಭಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular