Friday, March 13, 2026
Flats for sale
Homeರಾಜ್ಯಬಾಗಲಕೋಟೆ : ಮುಚಖಂಡಿ, ಸೀಮಿಕೇರಿ ಗದ್ದನಕೇರಿ ವ್ಯಾಪ್ತಿಯಲ್ಲಿಎಗ್ಗಿಲ್ಲದೆ ಸಾಗುತ್ತಿದೆ ಮಣ್ಣು ಗಣಿಗಾರಿಕೆ.

ಬಾಗಲಕೋಟೆ : ಮುಚಖಂಡಿ, ಸೀಮಿಕೇರಿ ಗದ್ದನಕೇರಿ ವ್ಯಾಪ್ತಿಯಲ್ಲಿಎಗ್ಗಿಲ್ಲದೆ ಸಾಗುತ್ತಿದೆ ಮಣ್ಣು ಗಣಿಗಾರಿಕೆ.

ಬಾಗಲಕೋಟೆ : ಆ‌ ನಗರದ ಸುತ್ತಮುತ್ತ ಗುಡ್ಡಬೆಟ್ಟಗಳಿವೆ. ಕೆಲ‌ವರ ಖಾಸಗಿ ಜಮೀನುಗಳು ಕೂಡ ಬೆಟ್ಟದ ರೀತಿಯಲ್ಲೇ ಇವೆ. ಆದರೆ ಇಂತಹ ಜಾಗದಲ್ಲಿ ಮಣ್ಣು ಗಣಿಗಾರಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಕೆಲವರು ನಿಯಮ ಪಾಲಿಸಿದರೆ ಬಹುತೇಕರು ನಿಯಮ ಉಲ್ಲಂಘಿಸಿ ಮಣ್ಣು ಗಣಿಗಾರಿಕೆ ‌ನಡೆಸುತ್ತಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ, ಸೀಮಿಕೇರಿ ಗದ್ದನಕೇರಿ ವ್ಯಾಪ್ತಿಯಲ್ಲಿ ಮಣ್ಣು ಗಣಿಗಾರಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಸರಕಾರಿ ಜಾಗೆಯಲ್ಲಿ ಬೆಟ್ಟ ಗುಡ್ಡ ಅಗೆದು ಮಣ್ಣು ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಖಾಸಗಿ ಜಮೀನುಗಳ ಭೂಮಿ ಒಡಲನ್ನು ಅಗೆದು ಮಣ್ಣು ದಂದೆ ಸಾಗಾಣಿಕೆ‌ ಮಾಡುತ್ತಿದ್ದಾರೆ.

ಇದರಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೂ ಜೊತೆಗೆ ಇತರೆ ಖಾಸಗಿ ಕೆಲಸಕ್ಕೂ ಮಣ್ಣು ಸಾಗಾಣಿಕೆ ‌ನಡೆಯುತ್ತಿದೆ.ಈ ಮಧ್ಯೆ ಹೆದ್ದಾರಿ ಪ್ರಾಧಿಕಾರದಿಂದ ರಾಜಸ್ವ ಸರಿಯಾಗಿ ತುಂಬುತ್ತಿಲ್ಲ ಎಂಬ ಸಂಶಯ ಸ್ಥಳೀಯರಿಂದ ವ್ಯಕ್ತವಾಗಿದೆ.ಈ ಬಗ್ಗೆ ಪರಿಶೀಲನೆ ಆಗಬೇಕು ಜೊತೆಗೆ ಆಕ್ರಮ ಮಣ್ಣು ಗಣಿಗಾರಿಕೆಯನ್ನು ತಡೆಯಬೇಕು ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ಗುಡ್ಡ, ಗದ್ದನಕೇರಿ ವ್ಯಾಪ್ತಿಯ ಗುಡ್ಡದ ಜಾಗದಲ್ಲಿ ಅನೇಕ ವರ್ಷಗಳಿಂದ ಮಣ್ಣು ಗಣಿಗಾರಿಕೆ ನಡೆಯುತ್ತಲೇ ಇದೆ. ಆಕ್ರಮ ಮಣ್ಣು ಗಣಿಗಾರಿಕೆಯಿಂದ ಗುಡ್ಡದ ಲಕ್ಷಣಗಳೇ ಬದಲಾಗಿವೆ. ಆದರೆ ಇಷ್ಟೆಲ್ಲ ಆಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಯಾವುದೇ ‌ಕಠಿಣ ಕ್ರಮ ‌ಕೈಗೊಳ್ಳುತ್ತಿಲ್ಲ. ಕಾಟಾಚಾರಕ್ಕೆ ಕೆಲವೊಂದು ವಾಹನ ಹಿಡಿದು ಕೇಸ್ ಹಾಕೋದನ್ನು ಬಿಟ್ಟರೆ ಶಾಸ್ವತವಾಗಿ ಇದನ್ನು ಬಂದ್ ‌ಮಾಡುವ ಕೆಲಸ ನಡೆಯುತ್ತಿಲ್ಲ.

ಮಣ್ಣು ಸಾಗಾಣಿಕೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ಅವರು ನಮ್ಮ ಇಲಾಖೆಗೆ ರಾಜಧನ ಕಟ್ಟಿಯೇ ಮಣ್ಣನ್ನು ರಸ್ತೆಗೆ ಸಾಗಿಸಿಕೊಳ್ಳುತ್ತಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಸೀಮಿಕೇರಿ ಹಾಗೂ ಗದ್ದನಕೇರಿ ಕ್ರಾಸ್ ಎರಡು ಕಡೆ ಅವರು ಮಣ್ಣನ್ನು ಖಾಸಗಿ ವ್ಯಕ್ತಿಗಳಿಂದ ಪಡೆಯುತ್ತಿದ್ದಾರೆ. ಒಟ್ಟು 14 ಸಾವಿರದ 744 ಟನ್ ಮೊಹರಂ ಮಣ್ಣು ಸಾಗಿಸಿದ್ದು, ಇದಕ್ಕೆ 15 ಲಕ್ಷ 77 ಸಾವಿರ ರೂ ರಾಜಸ್ವ ಕಟ್ಟಿದ್ದಾರೆ. ಉಳಿದಂತೆ ಮುಚಖಂಡಿ ಸೇರಿದಂತೆ ಇತರೆ ಜಾಗದಲ್ಲಿ ಆಕ್ರಮ‌ ಮಣ್ಣು ಗಣಿಗಾರಿಕೆ ಬಗ್ಗೆ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಅಂತಾರೆ.

ನಗರದ ಸುತ್ತಮುತ್ತ ಅಕ್ರಮ ಮಣ್ಣು ದಂದೆ ಸಾಗಿಸುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಇದಕ್ಕೆ ಕಡಿವಾಣ ಹಾಕಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular