ಬಾಗಲಕೋಟೆ : ಬಾಗಲಕೋಟೆ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಕೃಷಿ ಇಲಾಖೆ ಜಂಟಿ ನಿರ್ದೇಶಕಿಯ ಲೂಟಿ ಕೃಷಿಯಾಗಿದೆ. ಮುಂಗಾರು ಬಾರದಿದ್ರೂ ಮೂಟೆಗಟ್ಟಲೆ ಮನಿ ಬೆಳೆದ ಚೇತನಾ.
ಬಾಗಲಕೋಟೆಯ ಅಕ್ಕಿಮರಡಿ ಲೇಔಟ್ನಲ್ಲಿರುವ ಚೇತನಾ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೇತನಾ ಪಾಟೀಲ್ ಮನೆಯಲ್ಲಿ 32 ಲಕ್ಷ ಪತ್ತೆಯಾಗಿದ್ದು, ಲೋಕಾಯುಕ್ತ ಎಸ್ಪಿ ಅನಿತಾ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ಪರಿಶೀಲನೆ ವೇಳೆ ಎರಡು ಲಾಕರ್ ಪತ್ತೆ , 31 ವ್ಯಾನಿಟಿ ಬ್ಯಾಗ್ ಕೂಡ ಪತ್ತೆಯಾಗಿದೆ.
ಚೇತನಾ ಪಾಟೀಲ್ ಮನೆಯಲ್ಲೇ ಎರಡು ಆಮೆಗಳನ್ನು ಸಾಕಿದ್ದು ಕೂಡ ಬೆಳಕಿಗೆ ಬಂದಿದ್ದು, ಸುಮಾರು 20 ವರ್ಷ ವಯೋಮಾನದ ಎರಡು ಆಮೆಗಳು ಪತ್ತೆಯಾಗಿದೆ. ಅದೃಷ್ಟದ ಆಮೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. DySPಗಳಾದ ಶಂಕರ ರಾಗಿ, ಪುಷ್ಪಲತಾ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ಧಾರೆ.


