Thursday, March 12, 2026
Flats for sale
Homeರಾಜ್ಯಬಸವಕಲ್ಯಾಣ : ಸಾರಿಗೆ ಸಂಸ್ಥೆ ಬಸ್ ಪಲ್ಟಿ: 8 ಜನ ಪ್ರಯಾಣಿಕರಿಗೆ ಗಂಭೀರ ಗಾಯ.

ಬಸವಕಲ್ಯಾಣ : ಸಾರಿಗೆ ಸಂಸ್ಥೆ ಬಸ್ ಪಲ್ಟಿ: 8 ಜನ ಪ್ರಯಾಣಿಕರಿಗೆ ಗಂಭೀರ ಗಾಯ.

ಬಸವಕಲ್ಯಾಣ : ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಸಂಸ್ಥೆ ಬಸ್ ಪಲ್ಟಿಯಾಗಿ 8 ಜನ ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗಳಾದ ಘಟನೆ ಬಸವಕಲ್ಯಾಣ ತಾಲೂಕಿನ ಕಲಖೋರಾ ಗ್ರಾಮದ ಬಳಿ ಜರುಗಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸವಕಲ್ಯಾಣ ಘಟಕಕ್ಕೆ ಸೇರಿದ ಈ ಬಸ್ಸು ನೆರೆಯ ಕಲಬುರ್ಗಿ ಜಿಲ್ಲೆಗೆ ತೆರಳುತಿತ್ತು, ಮಾರ್ಗ ಮಧ್ಯೆ ಕಲಖೋರಾ ಗ್ರಾಮದ ಬಳಿ ವೇಗದಲ್ಲಿ ಚಲಿಸುತಿದ್ದ ಬಸ್ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ.

ಬಸ್ ನಲ್ಲಿ ಒಟ್ಟು 11 ಜನ ಮಾತ್ರ ಪ್ರಯಾಣಿಸುತಿದ್ದು, ಈ ಪೈಕಿ 8 ಜನ ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗಳಾಗಿವೆ. 4 ಜನ ಗಾಯಾಳುಗಳನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿದ್ದು, ಉಳಿದ 4 ಜನರಿಗೆ ಕಲಬುರ್ಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular