Friday, March 13, 2026
Flats for sale
Homeಕ್ರೈಂಬಸವಕಲ್ಯಾಣ : ಅನೈತಿಕ ಸಂಬಂಧ - ಪತಿಗೆ ವಿಷ ಹಾಕಿ ಕೊಲೆ ಮಾಡಿದ ಪತ್ನಿ, ಪ್ರೀಯಕರನ...

ಬಸವಕಲ್ಯಾಣ : ಅನೈತಿಕ ಸಂಬಂಧ – ಪತಿಗೆ ವಿಷ ಹಾಕಿ ಕೊಲೆ ಮಾಡಿದ ಪತ್ನಿ, ಪ್ರೀಯಕರನ ಬಂಧನ.

ಬಸವಕಲ್ಯಾಣ : ಅನೈತಿಕ ಸಂಬಂಧಕ್ಕೆ ಅಡಿಯಾದ ಪತಿಗೆ ಪ್ರೀಯಕರನ ಜೊತೆಗೂಡಿ ಪತ್ನಿಯೇ ವಿಷ ಉಣಿಸಿ ಕೊಲೆ ಮಾಡಿದ ಘಟನೆ ನಗರದಲ್ಲಿ ಜರುಗಿದೆ.

ಚಿತ್ರದಲ್ಲಿ ಮೃತ ಮಾಧವ ರಾವ್ ರವರ ಪತ್ನಿ ಪ್ರಿಯಾಂಕಾ ಹಾಗೂ ಪ್ರಿಯಕರ ಗುರುರಾಜ ರಾಠೋಡ.

ನಗರದ ವಾತಡೆ ಲೇಔಟ್‌ನ ನಿವಾಸಿ ಮಾಧವರಾವ್ ಬಿರಾದಾರ(30) ಕೊಲೆಯಾದ ನತದೃಷ್ಟ ಪತಿಯಾಗಿದ್ದಾನೆ. ಪತ್ನಿ ಪ್ರೀಯಾಂಕ ಹಾಗೂ ಈಕೆಯ ಪ್ರೀಯಕರ ಗುರುರಾಜ್ ಕೊಲೆ ಮಾಡಿದ ಖತರ್ನಾಕ್ ಪ್ರೇಮಿಗಳಾಗಿದ್ದಾರೆ.

ಕಳೆದ ಮೂರು ವರ್ಷದ ಹಿಂದೆ ಕಲಬುರ್ಗಿ ಜಿಲ್ಲೆಯ ಕಣ್ಣೂರ ಗ್ರಾಮದ ನಿವಾಸಿ ಶರಣಬಸಪ್ಪ ಆಳಂದ ಇವರ ಪುತ್ರಿ ಪ್ರೀಯಾಂಕ ಎನ್ನುವಳನ್ನು ಮುಡಬಿ ಗ್ರಾಮದ ಮಾಧವರಾವ ಎನ್ನುವಾತನೊಂದಿಗೆ ವಿವಾಹವಾಗಿತ್ತು. ವಿವಾಹ ಪೂರ್ವದಲ್ಲೇ ಕಲಬುರ್ಗಿ ಜಿಲ್ಲೆಯವನೆ ಆದ ಗುರುರಾಜ ರಾಠೋಡ ಎನ್ನುವಾತನೊಂದಿಗೆ ಪ್ರೀತಿ, ಪ್ರೇಮದಲ್ಲಿ ಮೊಳಗಿದ್ದ ಪ್ರೀಯಂಕಾ, ವಿವಾಹದ ನಂತರವು ಸಹ ತನ್ನ ಕಳ್ಳಾಟ ಮುಂದುವರೆಸಿದ್ದಳು. ಪತಿ ಇಲ್ಲದಿದ್ದಾಗ ಪ್ರೀಯಕರನಿಗೆ ಮನೆಗೆ ಕರೆಸಿಕೊಂಡು ಅನೈತಿಕ ಸಂಬಂಧ ಮುಂದುವರೆಸಿದ್ದಳು.

ಈಕೆಯ ಕಳ್ಳಾಟ ಪತಿಗೆ ಗೊತ್ತಾಗುತಿದ್ದಂತೆ ಆತನಿಗೆ ಮುಗಿಸಲು ಮುಂದಾಗಿದ್ದ ಪತ್ನಿ ಪ್ರೀಯಂಕಾ, ಪ್ರೀಯಕರನ ಸಲಹೆ ಮೆರೆಗೆ ಊಟದಲ್ಲಿ ವಿಷ ಬೆರೆಸಿ ಪತಿ ಕಥೆ ಮುಗಿಸಲು ಪ್ರಯತ್ನಿಸಿದ್ದಾಳೆ, ಇದು ಫಲ ನೀಡದಿದ್ದಾಗ ಪತಿ ತಗೆದುಕೊಳ್ಳುತಿದ್ದ ಕಾಮಾಲೆ ಔಷಧಿ ಬಾಟಲ್‌ನಲ್ಲಿ ಕಳೆನಾಷಕ ಔಷಧಿ ಬೆರೆಸಿದ್ದು, ಇದನ್ನು ಸೆವಿಸಿದ ಪತಿ ಕಳೆದ ತಿಂಗಳು 8ರಂದು ತೀವ್ರ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸಲ್ಲಾಪೂರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ಮೃತ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಈ ಕುರಿತು ಮೃತ ಮಾಧವರಾನ ಸಹೋದರ ನೀಡಿದ ದೂರಿನ ಆಧಾರದಲ್ಲಿ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸ್ ತಂಡ, ತನಿಖೆ ಕೈಗೊಂಡಿದ್ದಾರೆ. ಪತಿಗೆ ವಿಷ ಉಣಿಸಿ ಕೊಲೆ ಮಾಡಿದ ಆರೋಪ ಹೊತ್ತ ಚಾಲಕಿ ಪತ್ನಿ ಪ್ರೀಯಂಕಾ ಹಾಗೂ ಈಕೆಯ ಪ್ರೀಯಕರ ಗುರುರಾಜ ಎನ್ನುವಾತನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ಮೃತ ಮಧಾವರಾಯನಿಗೆ 2 ವರ್ಷದ ಒಂದು ಮಗು ಇದ್ದು, ಏನು ಆರಿಯದ ಮಗು ತಂದೆ ಕಳೆದುಕೊಂಡು ಅನಾಥವಾಗಿದಲ್ಲದೆ ತಾಯಿಯೊಂದಿಗೆ ಮಗು ಸಹ ಜೈಲು ಪಾಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular