Friday, January 16, 2026
Flats for sale
Homeರಾಜಕೀಯಬಳ್ಳಾರಿ : ಬ್ಯಾನರ್ ಅಳವಡಿಕೆ ವೇಳೆ ಘರ್ಷಣೆ ,ಕಾಂಗ್ರೆಸ್​​ ಕಾರ್ಯಕರ್ತ ಸಾವು, ಶಾಸಕ ಜನಾರ್ದನ ರೆಡ್ಡಿ,...

ಬಳ್ಳಾರಿ : ಬ್ಯಾನರ್ ಅಳವಡಿಕೆ ವೇಳೆ ಘರ್ಷಣೆ ,ಕಾಂಗ್ರೆಸ್​​ ಕಾರ್ಯಕರ್ತ ಸಾವು, ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ, ಶ್ರೀರಾಮುಲು ಸೇರಿ 11 ಜನರ ವಿರುದ್ಧ FIR ದಾಖಲು.

ಬಳ್ಳಾರಿ : ಬ್ಯಾನರ್ ಅಳವಡಿಕೆ ವೇಳೆ ಶುರುವಾದ ಘರ್ಷಣೆ ಕಾಂಗ್ರೆಸ್ ಕಾರ್ಯಕರ್ತನ ಬಲಿತೆಗೆದುಕೊಂಡಿದೆ. ಜನವರಿ 3ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟುತ್ತಿದ್ದಾಗ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿದೆ. ಈ ಘರ್ಷಣೆಯು ಕಲ್ಲು ತೂರಾಟ, ದೊಣ್ಣೆಗಳ ಬಳಕೆ ಮತ್ತು ಖಾರದ ಪುಡಿ ಎರಚಾಟ ಸೇರಿದಂತೆ ತೀವ್ರ ಸ್ವರೂಪ ಪಡೆದುಕೊಂಡಿತ್ತು ಎಂಬುದು ಘಟನಾ ಸ್ಥಳದ ವಿಡಿಯೋದಿಂದ ತಿಳಿದುಬಂದಿದೆ.

ಪರಿಸ್ಥಿತಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಶಾಸಕ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಅವರ ಖಾಸಗಿ ಗನ್‌ಮ್ಯಾನ್‌ಗಳು ಏರ್ ಫೈರ್ ಮಾಡಿದ್ದಾರೆ. ಇದೇ ವೇಳೆ ಪೊಲೀಸರೂ ಕೂಡ ಗುಂಪನ್ನು ಚದುರಿಸಲು ಏರ್ ಫೈರ್ ಮಾಡಿದ್ದು, ಒಂದು ಮಿಸ್‌ಫೈರ್ ಆಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬುವವರಿಗೆ ಗುಂಡು ತಗುಲಿದೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ರಾಜಶೇಖರ್ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ದೇಹಕ್ಕೆ ಖಾಸಗಿ ವ್ಯಕ್ತಿಯ ರಿವಾಲ್ವಾರ್ ನ ಬುಲೆಟ್ ಹೊಕ್ಕಿದ್ದು ಘಟನಾ ಸ್ಥಳದ ಉಸ್ತುವಾರಿ ಎಸ್ಪಿ ರಂಜಿತ್ ಕುಮಾರ್ ಭಂಡಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಿನ್ನೆ ಗಲಾಟೆ ವೇಳೆ ರಾಜಶೇಖರ ಸಾವಾಗಿದೆ ಪೊಲೀಸರು ಫೈರ್ ಮಾಡಿದಾಗ ತಗುಲಿರುವ ಬುಲೆಟ್ ಅಲ್ಲ,ಆದ್ರೆ ಅದು ಖಾಸಗಿ ರಿವಾಲ್ವಾರ್ ಬುಲೆಟ್,ಇದರ ಬಗ್ಗೆ ತನಿಖೆ ಮಾಡ್ತೇವೆ, ಮಾಹಿತಿ ಸಂಗ್ರಹಿಸ್ತಿದ್ದೇವೆ,ಸಿಸಿ ಕ್ಯಾಮರಾಗಳ ಪರಿಶೀಲನೆಯನ್ನೂ ಮಾಡ್ತೇವೆ
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಭರತ್ ರೆಡ್ಡಿ ಬೆಂಬಲಿಗರು ನಾಲ್ಕು ಕೇಸ್ ದಾಖಲಿಸಿದ್ದಾರೆ
ಖಾಸಗಿ ವ್ಯಕ್ತಿ ಫೈರ್ ಮಾಡಿರೋ ಬಗ್ಗೆ ಪರಿಶೀಲಿಸ್ತೇವೆ ಎಂದ ರಂಜಿತ್ ಕುಮಾರ್ ಬಂಡಾರ ತಿಳಿಸಿದ್ದಾರೆ .

ಬಳ್ಳಾರಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ರೆಡ್ಡಿ ರಾಮುಲು ಸೇರಿ 11 ಜನರ ವಿರುದ್ದ ಫರ್ ದಾಖಲಾಗಿದೆ. ಶಾಸಕ‌ ನಾರಾ ಭರತ್ ರೆಡ್ಡಿ ಆಪ್ತ ಚಾನಾಳ್ ಶೇಖರ್ ರಿಂದ ದೂರು ಹಿನ್ನೆಲೆ ಫರ್ ದಾಖಲಿಸಿದ್ದು ಅವ್ಯಾಚ್ಯ ಪದ ಬಳಸಿ, ಮಾರಕಾಸ್ತ್ರ ಬಳಸಿ ಕೊಲೆಗೆ ಯತ್ನಎಡನು ದೂರು ದೂರು ನೀಡಿದ್ದಾರೆ.ದೂರಿನ ಹಿನ್ನೆಲೆ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ, ಶ್ರೀರಾಮುಲು, ಮೊತ್ಕರ್ ಶ್ರೀನಿವಾಸ್, ರಮಣ, ದಿವಾಕರ್, ಪ್ರಕಾಶ್ ರೆಡ್ಡಿ, ಅಲಿಖಾನ್, ಪಾಲಣ್ಣ, ಮಾರುತಿ ಪ್ರಸಾದ್, ದಮ್ಮೂರು ಶೇಖರ್ ಸೇರಿ ಒಟ್ಟು 11 ಜನರ ವಿರುದ್ದ FIR ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular