Saturday, October 25, 2025
Flats for sale
Homeರಾಜ್ಯಬಳ್ಳಾರಿ : ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಂಗಾರ ನಾಪತ್ತೆ ಪ್ರಕರಣ : ಕೇರಳದ ಎಸ್ಐಟಿ ಅಧಿಕಾರಿಗಳಿಂದ...

ಬಳ್ಳಾರಿ : ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಂಗಾರ ನಾಪತ್ತೆ ಪ್ರಕರಣ : ಕೇರಳದ ಎಸ್ಐಟಿ ಅಧಿಕಾರಿಗಳಿಂದ ಬಳ್ಳಾರಿಯ ರೊದ್ದಂ ಜ್ಯೂವೆಲರಿ ಮಾಲೀಕನ ವಿಚಾರಣೆ…!

ಬಳ್ಳಾರಿ : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಂಗಾರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಕೇರಳದ ಎಸ್ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಕೇರಳ ಪೊಲೀಸರು ಬಳ್ಳಾರಿಯ ರೊದ್ದಂ ಜ್ಯೂವೆಲರಿ ಮಾಲೀಕ ಗೋವರ್ಧನ ವಿಚಾರಣೆ ನಡೆಸಿದ್ದಾರೆ. ರೊದ್ದಂ ಜ್ಯೂವೆಲರಿ ಅಂಗಡಿ ಮತ್ತು ಮಾಲೀಕರ‌ ಮನೆ ಯಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಶಬರಿಮಲೈ ದೇವಾಲಯದಲ್ಲಿ, ಬಾಗಿಲು ಬಳಿಯ ಹೊರಗಿನ ದ್ವಾರ ಪಾಲಕ ವಿಗ್ರಹಗಳಿಗೆ ಚಿನ್ನದ ಕವಚದಲ್ಲಿ ಗೋಲ್ಮಾಲ್ ವಿಚಾರ 2019 ರಲ್ಲಿ ಚಿನ್ನದ ಮರು ಲೇಪನಕ್ಕಾಗಿ ಕವಚಗಳನ್ನು ತೆಗೆದುಕೊಂಡಿದ್ದು ಬಳ್ಳಾರಿ ಮೂಲದ ಗೋವರ್ಧನ ಚಿನ್ನದ ಲೇಪಿತ ದ್ವಾರಬಾಗಿಲು ನಿರ್ಮಾಣ ಮಾಡಿದ್ದರು
ಅರ್ಚಕ ಉನ್ನಿಕರಷ್ಣನ್ ಸೂಚನೆ ಮೇರೆಗೆ ಚಿನ್ನದ ಲೇಪಿತ ಬಾಗಿಲು ಮಾಡಿದ್ದು ಬಾಗಿಲು ಮಾಡೋದಕ್ಕೂ‌ ಮುನ್ನ ಇದ್ದ ಬಂಗಾರದ ದ್ವಾರದ ನಾಲ್ಕೂವರೆ ಕೆಜಿ ಚಿನ್ನ ನಾಪತ್ತೆಯಾಗಿತ್ತು ಆದರೆ ದ್ವಾರಪಾಲಕರ ಚಿನ್ನಕ್ಕೂ ತಾವು ಮಾಡಿದ ಚಿನ್ನದ ಬಾಗಿಲಿಗೂ ಸಂಬಂಧ ಇಲ್ಲ ಗೋವರ್ಧನ ತಿಳಿಸಿದ್ದಾರೆ.

ತಾವೊಬ್ಬ ಅಯ್ಯಪ್ಪ ಸ್ವಾಮಿ ಭಕ್ತ ಮೂವತ್ತೈದು ಲಕ್ಷ ವೆಚ್ಚದಲ್ಲಿ ನಾನೇ ನಿರ್ಮಾಣ ಮಾಡಿದ್ದೇನೆ.. ಎಸ್ಐಟಿ ಅಧಿಕಾರಿಗಳು ಬಂದಿದ್ದರು. ವಿಚಾರಣೆ ಮಾಡಿದ್ದಾರೆ. ಯಾವಾಗ ಕರೆದರು ಹೋಗ್ತೇನೆ.ಎಂದು ರೊದ್ದಂ ಜ್ಯೂವೆಲರಿ ಮಾಲೀಕರ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular