ಬರ್ನ್ (ಸ್ವಿಜರ್ಲೆಂಡ್ ): ಹೊಸ ವರ್ಷಾಚರಣೆ ಸಂದರ್ಭದಲ್ಲಿ ಇಲ್ಲಿನ ಅಲ್ಫಿನ್ ಶ್ರೇಣಿಯಲ್ಲಿರುವ ಕ್ರಾನ್ಸ್ ಮೊಂಟಾನ ಪಟ್ಟಣದ ಐಷಾರಾಮಿ ಬಾರ್ವೊಂದರಲ್ಲಿ ಗುರುವಾರ ಮುಂಜಾನೆ ಉಂಟಾದ ಭಾರಿ ಸ್ಫೋಟ ಮತ್ತು ಅಗ್ನಿ ದುರಂತದಲ್ಲಿ ಪ್ರಕರಣದಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದಾರೆ. ಬಹಳಷ್ಟು ಜನ 16 ರಿಂದ 26 ವಯಸ್ಸಿನವರು ಎಂದು ಪೊಲೀಸರು ತಿಳಿಸಿದ್ದಾರೆ. ಪಟಾಕಿ ಹಾಗೂ ಸಿಡಿಮದ್ದುಗಳ ಯದ್ವಾತದ್ವ ಬಳಕೆಯಿಕೆಯಿಂದಾಗಿ ಸ್ವಿಸ್ನ ಬಾರ್ನಲ್ಲಿ ಮಧ್ಯರಾತ್ರಿ ನಂತರ ನಡೆದ ಸ್ಫೋಟದ ಸಂದರ್ಭದಲ್ಲಿ ಒಳಗೆ ಅಂತಾರಾಷ್ಟ್ರೀಯ ಪ್ರವಾಸಿಗರೂ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಜಮಾಯಿಸಿದ್ದರು
ಘಟನಾ ಸ್ಥಳವನ್ನು ಪೊಲೀಸರು ಸುತ್ತುವರೆದಿದ್ದು, ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪ್ರದೇಶವನ್ನು `ಹಾರಾಟ ಮುಕ್ತ ವಲಯ’ ಎಂದು ಘೋಷಿಸಲಾಗಿದೆ. ಘಟನೆಗೆ ಕಾರಣ ಏನು ಎನ್ನುವುದನ್ನು ಇನ್ನೂ ಸ್ಪಷ್ಟವಾಗದಿದ್ದರೂ, ಭಯೋತ್ಪಾದನಾ ಕೃತ್ಯ ಅಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ವ್ಯಾಪಕವಾಗಿ ಹರಡಿದ ಬೆಂಕಿಯಿAದಾಗಿ ಗಾಯಾಳುಗಳ ಪೈಕಿ ಹಲವರಿಗೆ ಗಂಭೀರ ಸುಟ್ಟ ಗಾಯಗಳಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಸುಮಾರು 10 ಹೆಲಿಕಾಪ್ಟರ್ಗಳು, 40 ಆಂಬುಲೆನ್ಸ್ಗಳು ಮತ್ತು 150 ಸ್ವಯಂಸೇವಕರು ಪರಿಹಾರ ಕ್ರಮಗಳಿಗಾಗಿ ಸ್ಥಳಕ್ಕೆ ದೌಡಾಯಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ವಿಜರ್ಲೆಂಡ್ ಪ್ರಕರಣದ ಜೊತೆಗೆ ಜರ್ಮನಿ ಹಾಗೂ ನೆದರ್ಲ್ಯಾಂಡ್ನಲ್ಲೂ ತಲಾ ಇಬ್ಬರು ಮೃತಪಟ್ಟಿದ್ದಾರೆ. ಇದರಿಂದಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಒಟ್ಟು 44 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವುದು ವರದಿಯಾಗಿದೆ.
ಇನ್ನೆರಡು ಪ್ರಕರಣಗಳು: ಪಶ್ಚಿಮ ಜರ್ಮನಿಯಲ್ಲಿ ಮನೆಯಲ್ಲಿ ತಯಾರಿಸಿದ ಪಟಾಕಿಗಳು ಸ್ಫೋಟಗೊಂಡ 2 ಪ್ರತ್ಯೇಕ ಪ್ರಕರಣಗಳಲ್ಲಿ 18 ವರ್ಷದ ಇಬ್ಬರು ಮೃತರಾಗಿದ್ದಾರೆ. ಹಿಂಸಾಚಾರದಲ್ಲಿ ಪಟಾಕಿಗಳನ್ನು ಎಸೆದ ಕಾರಣ 21 ಪೊಲೀಸ್ ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಬರ್ಲಿನ್ನಲ್ಲಿ 400 ಮಂದಿಯನ್ನು ಬಂಧಿಸಲಾಗಿದೆ. ನೆದರ್ಲ್ಯಾAಡ್ನ ಆಮ್ಸ್ಟರ್ಡ್ಯಾಂ ಚರ್ಚ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಪಟಾಕಿಗಳ ಸಿಡಿತ
ಪ್ರಕರಣಗಳಲ್ಲಿ 17 ವರ್ಷದ ಬಾಲಕ ಹಾಗೂ 38 ವರ್ಷದ ಇನ್ನೊಬ್ಬ ವ್ಯಕ್ತಿ ಸೇರಿ ಇಬ್ಬರು ಮೃತರಾಗಿದ್ದಾರೆ. ಇತರ ಮೂವರಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಇಲ್ಲೂ ಪೊಲೀಸರ ವಿರುದ್ಧ ಹಿಂಸಾಚಾರ ನಡೆದಿದೆ.


