Saturday, March 14, 2026
Flats for sale
Homeಜಿಲ್ಲೆಪುತ್ತೂರು : ಸಿಡಿಲಿನ ಹೊಡೆತಕ್ಕೆ ಅಡ್ಲ್ಯಾಬ್ ಫೋಟೊ ಸ್ಟುಡಿಯೋ ಭಸ್ಮ.

ಪುತ್ತೂರು : ಸಿಡಿಲಿನ ಹೊಡೆತಕ್ಕೆ ಅಡ್ಲ್ಯಾಬ್ ಫೋಟೊ ಸ್ಟುಡಿಯೋ ಭಸ್ಮ.

ಪುತ್ತೂರು : ಸಿಡಿಲಿನ ಹೊಡೆತಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿ ಅಡ್ಲ್ಯಾಬ್ ಫೋಟೊ ಸ್ಟುಡಿಯೋ ಸುಟ್ಟು ಭಸ್ಮವಾದ ಘಟನೆ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನ ಹೃದಯ ಭಾಗದ ಜಿಎಲ್ ಕಾಂಪ್ಲೆಕ್ಸ್ ನಲ್ಲಿರುವ ಇರುವ ಅಡ್ಲ್ಯಾಬ್ ಪೋಟೊ ಸ್ಟುಡಿಯೋ ಎಂದು ತಿಳಿದಿದೆ.

ಅಪಾಯದಿಂದ ಅಡ್ಲ್ಯಾಬ್ ಸಿಬ್ಬಂದಿಗಳು ಪಾರಾಗಿದ್ದಾರೆ.ಸಿಡಿಲಿನ ರಭಸಕ್ಕೆ ವಿದ್ಯುತ್ ಆಘಾತವಾಗಿ ಕಂಪ್ಯೂಟರ್ ಸಿಸ್ಟಂ, ಫೋಟೊ ಮೆಷಿನರಿ, ಪ್ಯಾನ್, ಫೋಟೊ ಆಲ್ಬಂ, ಇನ್ನಿತರ ವಸ್ತಗಳು ಸುಟ್ಟು ಕರಗಿದೆ.ಹಾಗೂ ಸ್ಟುಡಿಯೋದಲ್ಲಿನ ವಸ್ತಗಳು ಸಂಪೂರ್ಣ ಭಸ್ಮವಾಗಿದೆ.

ಅಡ್ಲ್ಯಾಬ್ ಸ್ಟುಡಿಯೋ ಪೊನ್ನಪ್ಪ ಎಂಬವರಿಗೆ ಸೇರಿದ್ದು ,ಸುಮಾರು 6 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಬದಿಯಲ್ಲಿರುವ ಗಣೇಶ್ ಪ್ರಸಾದ್ ಹೋಟೆಲಿನ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಒಟ್ಟುಸೇರಿ ಬೆಂಕಿಯನ್ನು ನಂದಿಸಿದ್ದಾರೆ.

ಸ್ಟುಡಿಯೋದಲ್ಲಿದ್ದ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದು,ಗ್ರಾಹಕರಿಗೆ ನೀಡಬೇಕಾಗಿದ್ದ ಹಲವು ಮದುವೆ ಆಲ್ಬಂಗಳು ಸುಟ್ಟು ಭಸ್ಮವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular