ಪುತ್ತೂರು ; ರಾಜಕೀಯ ಇತಿಹಾಸದಲ್ಲೇ ಪ್ರಪ್ರಥಮ ಭಾರಿಗೆ ಬದ್ದ ವಿರೋಧಿಗಳಾಗಿದ್ದ ಬಿಜೆಪಿ ಕಾಂಗ್ರೆಸ್ ಒಂದಾಗಿದೆ.
ಸಿದ್ದಾಂತ ವಿಚಾರವಾಗಿ ಸದಾ ಕಚ್ಚಾಡುವ ಬಿಜೆಪಿ ಹಾಗೂ ಕಾಂಗ್ರೇಸ್ ಬಿಜೆಪಿ ಭದ್ರಕೋಟೆ ಪುತ್ತೂರಿನಲ್ಲಿ ಇದೀಗ ಹಿಂದೂತ್ವದ ಅಡಿಯಲ್ಲಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆಯಿಂದ ಬಿಜೆಪಿ ಕಂಗೇಟ್ಟಿದೆ.
ಇದೀಗ ಪ್ರಪ್ರಥಮ ಭಾರಿಗೆ ಬಿಜೆಪಿ ಕಾಂಗ್ರೆಸ್ ಒಟ್ಟಿಗೆ ಬೂತ್ ಹಾಕಿ ಕೂತ್ಕೊಳ್ಳುವ ಮಟ್ಟಕ್ಕೆ ಬಂದಿದೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಹಲವು ಕಡೆ ಕಾಂಗ್ರೇಸ್ ಬಿಜೆಪಿ ಒಟ್ಟಿಗೆ ಬೂತ್ ನಲ್ಲಿ ಕೂತುಕೊಂಡ ದೃಶ್ಯಗಳು ವೈರಲ್ ಆಗಿದೆ. ಈ ದೃಶ್ಯ ಕಂಡು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಚೀ.. ಥೂ.. ಎಂದು ನಾಯಕರಿಗೆ ಬೈದು ಪುತ್ತಿಲರಿಗೆ ಓಟ್ ಹಾಕಿದ್ದಾರೆ ಎನ್ನಲಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಈ ವರ್ಷದ ಸಮೀಕ್ಷೆ ಪ್ರಕಾರ ಪಕ್ಷೇತರ ಅಭ್ಯರ್ಥಿ ಪುತ್ತಿಲ ಭರ್ಜರಿ ಗೆಲುವು ದಾಖಲಿಸಿದ್ದಾರೆ ಎಂಬ ವರದಿ ಇದೆ.


