ಪುತ್ತೂರು ; ಪುತ್ತೂರು ನಗರಸಭಾ ವ್ಯಾಪ್ತಿಯ ಬಪ್ಪಳಿಗೆ ಎಂಬಲ್ಲಿ ನೋಡು ನೋಡುತ್ತಿದ್ದಂತೆ ಪಾತಾಳಕ್ಕೆ ಬಾವಿ ಕುಸಿದು ಬಿದ್ದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುವ ಪರಿಣಾಮ ಪುತ್ತೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ಕಳೆದ ಎರಡು ದಿನದಿಂದ ಸುರಿಯುವ ಭಾರಿ ಮಳೆಯಿಂದಾಗಿ ಭೂಮಿ ಒಳಗೆ ಬಾವಿ ಜಾರಿದ ಪರಿಣಾಮ ಪಕ್ಕದಲ್ಲಿರುವ ಮನೆಗಳು ಅಪಾಯದಲ್ಲಿದೆ ಎಂದು ತಿಳಿದು ಬಂದಿದೆ.
ಬಪ್ಪಳಿಗೆ ನಿವಾಸಿ ಸುಶೀಲ ಎಂಬವರಿಗೆ ಸೇರಿದ ಮನೆಯಲ್ಲಿ ಭೂಕುಸಿತದ ಪರಿಣಾಮ ಬಿರುಕುಬಿದ್ದಿದೆ.
ಅಗ್ನಿಶಾಮಕದಳದಿಂದ ಮನೆ ಮಂದಿಯ ರಕ್ಷಣೆ ಮಾಡಲಾಗಿದೆ.ಹಾಗೂ ಮನೆ ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಮನೆ ಸುತ್ತಲೂ ತಾತ್ಕಾಲಿಕ ತಡೆ ಹಾಕಲಾಗಿದ್ದು ,ಯಾರು ಸಂಚರಿಸದಂತೆ ಸೂಚನೆ ನೀಡಲಾಗಿದೆ.


