Sunday, March 15, 2026
Flats for sale
Homeಜಿಲ್ಲೆಪುತ್ತೂರು : ದ.ಕ. ಕಾಂಗ್ರೆಸ್ ಲೋಕಸಭಾ ಟಿಕೆಟ್ ರೇಸ್ ನಲ್ಲಿ ಡಿಕೆಶಿ ಆಪ್ತ ಒಕ್ಕಲಿಗ ಸಮುದಾಯದ...

ಪುತ್ತೂರು : ದ.ಕ. ಕಾಂಗ್ರೆಸ್ ಲೋಕಸಭಾ ಟಿಕೆಟ್ ರೇಸ್ ನಲ್ಲಿ ಡಿಕೆಶಿ ಆಪ್ತ ಒಕ್ಕಲಿಗ ಸಮುದಾಯದ ನಾಯಕ ಕಿರಣ್ ಬುಡ್ಲೆ ಗುತ್ತು ಹೆಸರು ಮುಂಚೂಣಿ .

ಪುತ್ತೂರು : ದ.ಕ ಜಿಲ್ಲೆಯ ಕಾಂಗ್ರೆಸ್ ನಲ್ಲಿ ಡಿಕೆಶಿ ಆಪ್ತ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಅಚ್ಚರಿ ಆಯ್ಕೆ ಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ತಿಳಿದಿದೆ.

ಈ ಬಾರಿ ದ.ಕ ಜಿಲ್ಲೆಯಿಂದ ಕಾಂಗ್ರೆಸ್ ಯುವ ನಾಯಕನಿಗೆ ಮಣೆ ಹಾಕೋ ಭರ್ಜರಿ ಪ್ಲ್ಯಾನ್ ನಲ್ಲಿದ್ದು ಮೂಲತಃ ಸುಳ್ಯ ಮೂಲದ ಯುವ ನಾಯಕ ಕಿರಣ್ ಬುಡ್ಲೆಗುತ್ತು ಗುತ್ತುವಿಗೆ ದ.ಕ. ಲೋಕಸಭಾ ಟಿಕೆಟ್ ಸಿಗುವ ಸಾಧ್ಯತೆ ಎಂದು ಸುದ್ದಿಯಾಗಿದೆ.

ಡಿಕೆಶಿ ಆಪ್ತ ವಲಯಗಳಲ್ಲಿ ಕಾಣಿಸಿಕೊಂಡ ಕಿರಣ್ ಬುಡ್ಲೆಗುತ್ತುವಿಗೆ ಹೈಕಮಾಂಡ್ ಕೃಪಕಟಾಕ್ಷ
ತೋರಿದ್ದು ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಪದ್ಮರಾಜ್ ನಡುವೆ ಕಿರಣ್ ಬುಡ್ಲುಗುತ್ತು ಹೆಸರು ಮುಂಚೂಣಿಯಲ್ಲಿದೆ ಎಂಬ ಮಾಹಿತಿ ದೊರೆತಿದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪುತ್ತೂರಿನಲ್ಲಾದ ಮ್ಯಾಜಿಕ್ ಲೋಕಸಭಾ ಚುನಾವಣೆಯಲ್ಲೂ ಮಾಡೋ ಪ್ಲ್ಯಾನ್ ನಲ್ಲಿದ್ದು ಕಳೆದ ಬಾರಿ ಪುತ್ತೂರಿನಲ್ಲಿ ಅರುಣ್ ಪುತ್ತಿಲ ಬಂಡಾಯದಿಂದ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದು ಕಾಂಗ್ರೆಸ್ ಜಯಭೇರಿಯಾಗಿತ್ತು ಇದೇ ಪ್ಲ್ಯಾನ್‌ನಲ್ಲಿ ಲೋಕಸಭಾ ಚುನವಣೆಯಲ್ಲಿ ಒಕ್ಕಲಿಗ ಸಮುದಾಯದ ಕಿರಣ್ ಬುಡ್ಲೆಗುತ್ತುವಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಬಾರಿ ಹಿಂದೂ ನಾಯಕರ ಬಂಡಾಯದಿಂದ ಬಿಜೆಪಿಗೆ ತಲೆನೋವು ಉಂಟಾಗಿದ್ದು ಲೋಕಸಭಾ ಚುನಾವಣೆಯಲ್ಲೂ ಅರುಣ್ ಪುತ್ತಿಲ, ಸತ್ಯಜಿತ್ ಸುರತ್ಕಲ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಇಬ್ಬರೂ ಹಿಂದೂ ನಾಯಕರ ಬಂಡಾಯದಿಂದ ಕಾಂಗ್ರೆಸ್ ಗೆ ಲಾಭ ಆಗೋ ಲೆಕ್ಕಾಚಾರದಿಂದ ಯುವ ನಾಯಕನಿಗೆ ಮಣೆ ಹಾಕಿ ದ.ಕ. ದಲ್ಲಿ ಕಾಂಗ್ರೆಸ್ ಗೆಲುವಿಗೆ ಲೆಕ್ಕಾಚಾರ ಶುರುಮಾಡಿದ್ದಾರೆ ಎಂಬುದು ಮಾಹಿತಿ.

ಇತ್ತೀಚೆಗೆ ಮಂಗಳೂರಿನಲ್ಲಿ ಅಭ್ಯರ್ಥಿ‌ ಆಯ್ಕೆ ವಿಚಾರದಲ್ಲಿ ನಡೆದ ಸಭೆಯಲ್ಲೂ ಹೆಸರು ಪರಿಗಣನೆಯಲ್ಲಿದ್ದು ವೀಕ್ಷಕರಾಗಿ ಬಂದಿದ್ದ ಸಚಿವ ಮಧು ಬಂಗಾರಪ್ಪ ಅವರು ಕಿರಣ್ ಬುಡ್ಲೆಗುತ್ತು ಪರ ಬ್ಯಾಟಿಂಗ್ ಮಾಡಿದ್ದಾರೆ ಎಂದು ತಿಳಿದಿದೆ.ಯುವ ನಾಯಕರ ಪರಿಗಣನೆಗೆ ಸಭೆಯಲ್ಲೂ ತೀರ್ಮಾನಿಸಿದ್ದು ಅದರಂತೆ ದ.ಕ‌. ಲೋಕಸಭಾ ಟಿಕೆಟ್ ಕಾಂಗ್ರೆಸ್ ನಿಂದ ಅಚ್ಚರಿ ಆಯ್ಕೆ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳಿಂದ ತಿಳಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular