Saturday, March 14, 2026
Flats for sale
Homeಜಿಲ್ಲೆಪುತ್ತೂರು ; ಅರುಣ್ ಕುಮಾರ್ ಪುತ್ತಿಲ‌ ಬಿಜೆಪಿ ಸೇರ್ಪಡೆಗೆ ಪರಿವಾರದ ಕಾರ್ಯಕರ್ತರಿಂದ ತೀವ್ರ ವಿರೋಧ.

ಪುತ್ತೂರು ; ಅರುಣ್ ಕುಮಾರ್ ಪುತ್ತಿಲ‌ ಬಿಜೆಪಿ ಸೇರ್ಪಡೆಗೆ ಪರಿವಾರದ ಕಾರ್ಯಕರ್ತರಿಂದ ತೀವ್ರ ವಿರೋಧ.

ಪುತ್ತೂರು ; ಫೆ.5ರಂದು ಪುತ್ತೂರಿನ ಕೋಟೆಚಹಾಲ್ ನಲ್ಲಿ ಸಮಲೋಚನಾ ಸಮಾವೇಶ ನಡೆಸಲು ಪುತ್ತಿಲ ಪರಿವಾರ ನಿರ್ಧರಿಸಿದ್ದು ಪ್ರಸನ್ನ ಮಾರ್ತ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ತಿರ್ಮಾನಿಸಿದ್ದಾರೆ.

ಬಿಜೆಪಿ ಸೇರ್ಪಡೆ ಬಗ್ಗೆ ಕಾರ್ಯಕರ್ತರು ಪುತ್ತಿಲ ನಡುವೆ ಚರ್ಚೆ ನಡೆಯುತ್ತಿದ್ದು ಬಿಜೆಪಿ ಸೇರ್ಪಡೆಗೆ ಬಹುತೇಕ ಅರುಣ್ ಕುಮಾರ್ ಪುತ್ತಿಲ ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ‌.

ಲೋಕಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವುದರಿಂದ ಪುತ್ತಿಲ ಪರಿವಾರದ ಸಮಾಲೋಚನಾ ಸಭೆ ಬಹಳಷ್ಟು ಮಹತ್ವ ಪಡೆದುಕೊಂಡಿದ್ದು ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಹಾಗೂ ಪುತ್ತಿಲ ನಡುವೆ ಸಮಾಲೋಚನಾ ಸಭೆಗೆ ನಿರ್ಧಾರಿಸಿದ್ದಾರೆ. ಅದರೆ ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಸೇರುವುದು ಪರಿವಾರದ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಈ ವಿಚಾರದಲ್ಲಿ ಅರುಣ್ ಕುಮಾರ್ ಪುತ್ತಿಲರವರಿಗೆ ತಲೆನೋವು ಉಂಟಾಗಿದ ಎಂದು ತಿಳಿದುಬಂದಿದೆ.

ಈ ನಡುವೆ ಹಿಂದು ಕಾರ್ಯಕರ್ತರು ಅರುಣ್ ಕುಮಾರ್ ಪುತ್ತಿಲರವರನ್ನು ಲೋಕಸಭೆ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸುವಂತೆ ಒತ್ತಡ ಹಾಕುತ್ತಿರುವುದು ಕಂಡುಬಂದಿದೆ.

ಈ ನಡುವೆ ಬಿಜೆಪಿಗೆ ಸೇರ್ಪಡೆಗೆ ಮುಂದಾಗಿರುವ ಅರುಣ್ ಕುಮಾರ್ ಪುತ್ತಿಲರವರು ಪುತ್ತಿಲ ಪರಿವಾರದ ಕಾರ್ಯಕರ್ತರ ಜೊತೆ ಬಿಜೆಪಿ ಸೇರ್ಪಡೆಯ ವಿಚಾರದಲ್ಲಿ ಹೊಂದಣಿಕೆಯ ಕೊರತೆ ಉಂಟಾಗಿದೆ.

ಈ ನಡುವೆ ಅಡ್ಡಗೋಡೆಯಲ್ಲಿ ದೀಪವಿಟ್ಟಂತೆ ಪುತ್ತಿಲ ಪರಿವಾರದ ಸ್ಥಿತಿಯಿದ್ದು ಕಾರ್ಯಕರ್ತರ ವಿರೋಧದ ನಡುವೆಯೇ ಅರುಣ್ ಕುಮಾರಗ ಪುತ್ತಿಲರವರು ಬಿಜೆಪಿಗೆ ಸೇರ್ಪಡೆಯಾಗ್ತಾರಾ ಎಂಬುದು ನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular