ಪಾಟ್ನಾ : ಬಿಹಾರ ವಿಧಾನಸಭೆಗೆ ನಡೆಯುತ್ತಿರುವ ತುರುಸಿನ ಚುನಾವಣೆಯಲ್ಲಿ ಉಭಯ ಮೈತ್ರಿಕೂಟಗಳಿಂದಲೂ ಮತದಾರರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಕಸರತ್ತುಗಳು ನಡೆಯುತ್ತಿವೆ. ಮಂಗಳವಾರ ಬಿಡುಗಡೆ ಗೊಂಡ ಮಹಾಗಠ ಬಂಧನ್ ಪ್ರಣಾಳಿಕೆಯಲ್ಲಿ ಕರ್ನಾಟಕದ ಮಾದರಿ ವಿವಿಧಉಚಿತ ಕೊಡುಗೆಗಳ ಮಳೆ ಸುರಿಸಲಾಗಿದೆ.
ಮಹಾಗಠಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಈ ಹಿಂದೆಯೇ ಪ್ರಕಟಿಸಿದ್ದ ಮನೆಗೊಬ್ಬರಿಗೆ ಸರ್ಕಾರಿ ಉದ್ಯೋಗ, ಜೀವಿಕಾ ದೀದಿಯರಿಗೆ ಸರ್ಕಾರಿ ಉದ್ಯೋಗದ ಸ್ಥಾನಮಾನವೂ ಪ್ರಣಾಳಿಕೆಯಲ್ಲಿ ಸ್ಥಾನ ಪಡೆದುಕೊಂಡಿದೆ.
ಬಿಹಾರ್ ಕಾ ಪ್ರಾಣ್ ತೇಜಸ್ವಿ ಹೆಸರಿನ ಪ್ರಣಾಳಿಕೆ ಬಿಡು ಗಡೆ ಮಾಡಿ ಮಾತನಾಡಿದ ತೇಜಸ್ವಿ ಯಾದವ್, ರಾಜ್ಯದ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ತಿಳಿಸಿದರು ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿಯ ಸೂತ್ರದ ಗೊಂಬೆ ಆಗಿದ್ದು, ಚುನಾವಣೆ ನಂತರ ಅವರು ಸಿಎಂ ಪಟ್ಟದಲ್ಲಿ ಮುಂದುವರಿಯುವುದಿಲ್ಲ ಎಂದು ಘೋಷಿಸಿದರು. ಈ ಬಾರಿ ಚುನಾವಣೆಗೆ ೧೫೦೦ ಕಂಪನಿ ಕೇಂದ್ರದ ಪಡೆಗಳನ್ನು ನಿಯೋಜಿಸಲಾಗಿದೆ. ಇಷ್ಟು ಭಾರಿ ಪ್ರಮಾಣದಲ್ಲಿ ನಿಯೋಜಿಸಿರುವುದು ಇದೇ ಮೊದಲು. ಕಳೆದ ಎರಡು ದಿನಗಳಲ್ಲಿ ಅವರಿಗೆ ಯಾವ ಸೂಚನೆಗಳನ್ನು ನೀಡಲಾಗಿದೆ ಎನ್ನುವುದು ನಮಗೆ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಗಠಬಂಧನದ ಭರವಸೆಗಳು
ಪ್ರತಿ ಮನೆಯ ಒಬ್ಬರಿಗೆ ಸರ್ಕಾರಿ ಉದ್ಯೋಗ
ಅತ್ಯಂತ ಹಿಂದುಳಿದ ವರ್ಗದವರಿಗೆ ಹಾಲಿ ಇರುವ ಶೇ.೨೦ ಮೀಸಲಾತಿ ಶೇ.೩೦ಕ್ಕೆ ಹಾಗೂ ಪರಿಶಿಷ್ಟ ಜಾತಿ-ಪಂಗಡದವರಿಗೆ ಇರುವ ಮೀಸಲಾತಿ ಶೇ.16 ರಿಂದ ಶೇ.20ಕ್ಕೆ ಏರಿಕೆ.
ಮೈ ಬೆಹಿನ್ ಮನ್' ಯೋಜನೆ ಅಡಿ ಪ್ರತಿ ಮಹಿಳೆಯ ಖಾತೆಗೆ ಡಿಸೆಂಬರ್ ೧ರಿಂದಲೇ ತಿAಗಳಿಗೆ 2,5೦೦ ರೂ. ಪಾವತಿ. ತಿಂಗಳಿಗೆ 2೦೦ ಯೂನಿಟ್ ಉಚಿತ ವಿದ್ಯುತ್ ಪ್ರತಿಯೊಬ್ಬರಿಗೂ ೨೫ ಲಕ್ಷಕ್ಕೆ ಆರೋಗ್ಯ ವಿಮೆ ನೀಡುವಜನ ಸ್ವಾಸ್ಥ್ಯ ಸುರಕ್ಷೆ’ ಯೋಜನೆ .


