Friday, January 16, 2026
Flats for sale
Homeವಿದೇಶನ್ಯೂಯಾರ್ಕ್ : ಆರ್ಥಿಕವಾಗಿ ಅತ್ಯಂತ ದುರ್ಬಲವಾಗಿರುವ ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್‌ನಿಂದ 700 ದಶಲಕ್ಷ ಡಾಲರ್ ಸಾಲ.

ನ್ಯೂಯಾರ್ಕ್ : ಆರ್ಥಿಕವಾಗಿ ಅತ್ಯಂತ ದುರ್ಬಲವಾಗಿರುವ ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್‌ನಿಂದ 700 ದಶಲಕ್ಷ ಡಾಲರ್ ಸಾಲ.

ನ್ಯೂಯಾರ್ಕ್ : ಆರ್ಥಿಕವಾಗಿ ಅತ್ಯಂತ ದುರ್ಬಲವಾಗಿರುವ ಪಾಕಿಸ್ತಾನದ ಅರ್ಥಿಕ ಸದೃಢತೆಗಾಗಿ ವಿಶ್ವ ಬ್ಯಾಂಕ್ ಮತ್ತೆ ಹೊಸದಾಗಿ 7೦೦ ದಶಲಕ್ಷ ಡಾಲರ್ (ಅಂದಾಜು 6270 ಕೋಟಿ ರೂ) ಸಾಲ ಮಂಜೂರು ಮಾಡಿದೆ.

ಅಭಿವೃದ್ಧಿ ಒಳಗೊಂಡAತೆ ಸಾರ್ವಜನಿಕ ಸಂಪನ್ಮೂಲ ಉದ್ದೇಶದ ಅಡಿಯಲ್ಲಿ ಸಾಲ ಮಂಜೂರಾಗಿದೆಯಾದರೂ, ಇದನ್ನು ಇಡಿಗಂಟಾಗಿ ನೀಡುತ್ತಿಲ್ಲ; ಬದಲಿಗೆ
ಸಾಲದ ಸದ್ಬಳಕೆ ಹಾಗೂ ಪ್ರಗತಿಯ ವೇಗ ಗಮನಿಸಿಕೊಂಡು ಹಂತ ಹಂತವಾಗಿ ಹಣ ಬಿಡುಗಡೆ ಮಾಡಲು ನಿರ್ಧರಿಸಿದೆ. ಆ ಪ್ರಕಾರ ಪ್ರತಿ ಹಂತದಲ್ಲೂ 1.35 ಶತಕೋಟಿ ಡಾಲರ್ (ಅಂದಾಜು 1209 ಕೋಟಿ ರೂ.) ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಐಎಂಎಫ್ ಪ್ರತಿನಿಧಿ ಮಹಿರ್ ಬಿನಿಸಿ ಅವರು ಪಾಕಿಸ್ತಾನದ ಆರ್ಥಿಕ ಸೂಚಕಗಳಲ್ಲಿನ ಇತ್ತೀಚಿನ ಸುಧಾರಣೆಗಳನ್ನು ಒಪ್ಪಿಕೊಂಡರೂ, ಸ್ಥೂಲ
ಆರ್ಥಿಕ ದುರ್ಬಲತೆಗಳು ಮುಂದುವರೆದಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಂಧನ ವಲಯ, ಸರ್ಕಾರಿ ಸ್ವಾಮ್ಯದ ಉದ್ಯಮಗಳು ಮತ್ತು ಆಡಳಿತದಂತಹ
ಕ್ಷೇತ್ರಗಳಲ್ಲಿ ನಿರಂತರ ಮತ್ತು ವಿಶ್ವಾಸಾರ್ಹ ಸುಧಾರಣೆಗಳನ್ನು ತಂದಲ್ಲಿ ಆರ್ಥಿಕ ಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಳ್ಳಬಹುದೆಂದು ಸಲಹೆ ನೀಡಿದರು. ಇದಲ್ಲದೆ, ಹಣಕಾಸು ನೀತಿ, ತೆರಿಗೆ ಆಡಳಿತದಲ್ಲಿ ಸುಧಾರಣೆ ಮತ್ತು ಅಭಿವೃದ್ಧಿ ಖರ್ಚು ಮತ್ತು ಗುರಿಯಿಲ್ಲದ ಸಬ್ಸಿಡಿಗಳನ್ನು ತರ್ಕಬದ್ಧಗೊಳಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular