ನ್ಯೂಯಾರ್ಕ್ : ಅಮೇರಿಕಾದಲ್ಲಿ ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ಜೊಹ್ರಾನ್ ಮಮ್ದಾನಿ ಅವರು ಐತಿಹಾಸಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಡೆಮಾಕ್ರೆಟಿಕ್ ಸಮಾಜವಾದಿ ನಾಯಕರಾದ ಅವರು ಭಾರತದಂಥ ದೇಶದಲ್ಲಿ ನೀಡುತ್ತಿರುವ ಉಚಿತ ಕೊಡುಗೆಗಳ ಮಾದರಿಯನ್ನೇ ತಮ್ಮ ಚುನಾವಣಾ ತಂತ್ರವನ್ನಾಗಿ ಅಳವಡಿಸಿಕೊಂಡಿದ್ದಾರೆ. ಅವರ ಭರವಸೆಗಳು ಅತ್ಯಂತ ಬಲಾಢ್ಯ ದೇಶದ ಶ್ರೀಮಂತ ನಗರದಲ್ಲಿ ಬಡತನವನ್ನು ಬಿಚ್ಚಿಟ್ಟಿದೆ.
ಗೆಲುವಿಗೆ ಕಾರಣವಾದ ಭರವಸೆಗಳು ಯಾವುದು?
5 ವರ್ಷದೊಳಗಿನ ಮಕ್ಕಳ ಸಾರ್ವತ್ರಿಕ ಆರೈಕೆ 3 ವರ್ಷದೊಳಗಿನ ಮಕ್ಕಳಿಗೆ ಉಚಿತ ಬಾಲ್ಯ ಶಿಕ್ಷಣ ಪಟ್ಟಣಗಳಲ್ಲಿ ಮಾರುಕಟ್ಟೆ ಸ್ಥಾಪನೆ ಮಾರುಕಟ್ಟೆಯಲ್ಲಿ ಸಗಟು ದರದಲ್ಲಿ ಆಹಾರ ಪದಾರ್ಥ ಮನೆ ಬಾಡಿಗೆ ದರ ವಾರ್ಷಿಕ ಏರಿಕೆಯನ್ನು ಶೇ.7ರಿಂದ ಶೇ.3ಕ್ಕೆ ಇಳಿಸುವುದು
ಸರ್ಕಾರದ ದಿನಸಿ ಅಂಗಡಿಗಳು ವರ್ಷಕ್ಕೆ 140 ಮಿಲಿಯನ್ ಡಾಲರ್ ಸಬ್ಸಿಡಿಯೊಂದಿಗೆ ಲಾಭರಹಿತ ದಿನಸಿ ಅಂಗಡಿಗಳನ್ನು ನ್ಯೂಯಾರ್ಕ್ ನಗರದಲ್ಲಿ ತೆರೆಯುವುದಾಗಿ ಮಮ್ದಾನಿ ಘೋಷಿಸಿದ್ದಾರೆ. ದೇಶಾದ್ಯಂತ ಇರುವ ಇತರೆ ಕಿರಾಣಿ ಅಂಗಡಿಗಳAತೆ ಲಾಭದ ಉದ್ದೇಶ ಮತ್ತು ಬೆಲೆ ಏರಿಕೆ ನಮ್ಮ ಉದ್ದೇಶ ಅಲ್ಲ ಎಂದು ಮಮ್ದಾನಿ ಹೇಳಿಕೊಂಡಿದ್ದಾರೆ.
ಮೊದಲ ಮುಸಿಂ ಮೇಯರ್ ್ಲ ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಜೊಹ್ರಾನ್ ಮಮ್ದಾನಿ ಗೆಲ್ಲುವ ಮೂಲಕ ಮೊದಲ ಮುಸ್ಲಿಂ ಮೇಯರ್ ಆಗಿ ನ್ಯೂಯಾರ್ಕ್ ನಗರಕ್ಕೆ ಆಯ್ಕೆಯಾಗಿದ್ದಾರೆ. ಮಮ್ದಾನಿ ವಿರುದ್ಧ ಆಂಡ್ರೂ ಕುವೊವೊ ಸ್ಪರ್ಧೆ ಮಾಡಿದ್ದರು. ವಿಪರೀತ ಪೈಪೋಟಿಯಿದ್ದ ಈ ಚುನಾವಣೆಯಲ್ಲಿ ಮಮ್ದಾನಿ ೧೦,೦3,651 ಮತಗಳನ್ನು ಪಡೆದುಕೊಂಡಿದ್ದರೆ,ಆಂಡ್ರೂ ಕುವೊವೊ 8,54,995 ಮತಗಳನ್ನು ಪಡೆದುಕೊಂಡರು. ಅಲ್ಲಿಗೆ 1,81,೦56 ಮತಗಳ ಅಂತರದಿAದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಉಚಿತ ಬಸ್ ಸವಾರಿ
ಮಮ್ದಾನಿ ಅವರು ನ್ಯೂಯಾರ್ಕ್ ನಗರದಲ್ಲಿ ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟೇಶನ್ ಅಥಾರಿಟಿಯ ಬಸ್ಗಳಲ್ಲಿ ಟಿಕೆಟ್ ದರವನ್ನು ಸಂಪೂರ್ಣವಾಗಿ ತೆಗೆದು ಹಾಕುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಈ ಯೋಜನೆಗೆ ವಾರ್ಷಿಕ 1.2 ಶತಕೋಟಿ ಡಾಲರ್ ವೆಚ್ಚವಾಗಲಿದೆ. ಇದರ ಆದಾಯ ಕ್ರೋಢೀಕರಣಕ್ಕಾಗಿ 1 ಮಿಲಿಯನ್ ಡಾಲರ್ಗಿಂತ ಹೆಚ್ಚಿನ ಆದಾಯದ ಮೇಲೆ ಶೇ.2ರಷ್ಟು ತೆರಿಗೆ ವಿಧಿಸಲು ಮಮ್ದಾನಿ ಯೋಜಿಸಿದ್ದಾರೆ.
ತಾಯಿ ಮೀರಾ ನಾಯರ್
ಮಮ್ದಾನಿ ಭಾರತ ಮೂಲದವರು. ಅವರ ತಾಯಿ ಖ್ಯಾತ ಸಿನಿಮಾ ನಿರ್ದೇಶಕಿ ಮೀರಾ ನಾಯರ್. ಸಲಾಂ ಬಾಂಬೆ ಸೇರಿದAತೆ ಹಲವಾರು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಮೀರಾ ನಾಯರ್, ಮೊಹಮದ್ ಮಮ್ದಾನಿ ಅವರನ್ನು ವಿವಾಹವಾಗಿದ್ದರು. ಅವರು ಕಂಪಾಲಾದಲ್ಲಿದ್ದಾಗ ಜೊಹ್ರಾನ್ ಜನಿಸಿದ್ದರು.
ಬಾಡಿಗೆ ದರ ಇಳಿಕೆ
ಜಗತ್ತಿನಲ್ಲಿಯೇ ಅತಿ ಹೆಚ್ಚು ಮನೆ ಬಾಡಿಗೆ ಇರುವ ನಗರ ನ್ಯೂಯಾರ್ಕ್. ಇಲ್ಲಿ ಪುಟ್ಟ ಮನೆಗಳ ಬಾಡಿಗೆಯೇ 3,45೦ ಡಾಲರ್ ಇದೆ. ಹೀಗಾಗಿ ಈ ಹೊರೆ ಇಳಿಸುವ ದೃಷ್ಟಿಯಿಂದ ಮಮ್ದಾನಿ 10 ಲಕ್ಷ ಬಾಡಿಗೆ ಮನೆಗಳಿಗೆ ಬಾಡಿಗೆ ಏರಿಕೆ ದರವನ್ನು ವಾರ್ಷಿಕವಾಗಿ ಶೇ7 ರಿಂದ ಶೇ.3ಕ್ಕೆ ಇಳಿಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸಾರ್ವತ್ರಿಕ ಶಿಶುಪಾಲನೆ
ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾದ ನ್ಯೂಯಾರ್ಕ್ ನಗರದಲ್ಲಿ ಮಕ್ಕಳ ಆರೈಕೆಯ ವೆಚ್ಚ ಅತಿ ಹೆಚ್ಚಾಗಿದೆ. ಹೀಗಾಗಿ ಮಮ್ದಾನಿ 5 ವರ್ಷ ವಯಸ್ಸಿನೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಶಿಶುಪಾಲನೆ ಯೋಜನೆ ಜಾರಿಗೆ ತರುತ್ತೇವೆ ಎಂದು ವಾಗ್ದಾನ ನೀಡಿದ್ದಾರೆ. ಈ ಹಿಂದೆ ಬಿಲ್ ಡಿ ಬ್ಲಾಸಿಯೊ ಆಡಳಿತದ ಅವಧಿಯಲ್ಲಿ ಮೂರು ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಪ್ರೀ-ಕೆ ಮತ್ತು 3-ಕೆ ಕಾರ್ಯಕ್ರಮ ಶುರು ಮಾಡಲಾಗಿತ್ತು. ಈಗ ಆ ಕಾರ್ಯಕ್ರಮಗಳನ್ನು ವಿಸ್ತರಿಸುವ ಭರವಸೆ ಮಂದಾನಿ ಅವರದ್ದಾಗಿದೆ. ಐದು ನ್ಯೂಯಾರ್ಕ್ ನಾಗರಿಕರಲ್ಲಿ ಒಬ್ಬರು ಬಸ್ ಮತ್ತು ಸಬ್ವೇ ದರಗಳನ್ನು ಪಾವತಿ ಮಾಡಲು ಕಷ್ಟ ಪಡುತ್ತಿದ್ದಾರೆ ಎಂದು ವರದಿಗಳು ಹೇಳಿದ್ದವು. ಇದನ್ನುಪರಿಗಣಿಸಿ ಉಚಿತ ಬಸ್ ಯೋಜನೆ ಘೋಷಣೆ ಮಾಡಲಾಗಿದೆ.


