Thursday, September 18, 2025
Flats for sale
Homeವಾಣಿಜ್ಯನವದೆಹಲಿ : 31 ಬಿಲಿಯನ್ ಡಾಲರ್‌ಗಳಿಂದ 133 ಬಿಲಿಯನ್ ಡಾಲರ್‌ಗಳಿಗೆ ಬೆಳೆದ ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನೆ…!

ನವದೆಹಲಿ : 31 ಬಿಲಿಯನ್ ಡಾಲರ್‌ಗಳಿಂದ 133 ಬಿಲಿಯನ್ ಡಾಲರ್‌ಗಳಿಗೆ ಬೆಳೆದ ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನೆ…!

ನವದೆಹಲಿ : ಮೇಕ್ ಇನ್ ಇಂಡಿಯಾ ನೀತಿಯಡಿ 2014-15 ರಿಂದ ಪ್ರಾರಂಭವಾದ ಒಂದು ದಶಕದಲ್ಲಿ ಭಾರತದ ಎಲೆಕ್ಟಾçನಿಕ್ಸ್ ಉತ್ಪಾದನೆಯು 31 ಬಿಲಿಯನ್ ಡಾಲರ್‌ಗಳಿಂದ 133 ಬಿಲಿಯನ್ ಡಾಲರ್‌ಗಳಿಗೆ ಬೆಳೆದಿದೆ ಎಂದು ಕೇAದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

2024-25ರ ಇದೇ ತ್ರೈ ಮಾಸಿಕಕ್ಕೆ ಹೋಲಿಸಿದರೆ 2025-26ರ ಮೊದಲ ತ್ರೈ ಮಾಸಿಕದಲ್ಲಿ ಎಲೆಕ್ಟಾçನಿಕ್ಸ್ ರಫ್ತು ಶೇಕಡಾ 47 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಕಂಡಿದೆ ಎಂದು ಕೇಂದ್ರ ಸಚಿವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ತಯಾರಿಕಾ ವಲಯದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ನಮ್ಮ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡಿದೆ. ಇದರ ಪರಿಣಾಮವಾಗಿ, 2014 ರಲ್ಲಿ ನಮ್ಮಲ್ಲಿ ಕೇವಲ ಎರಡು ಮೊಬೈಲ್ ಉತ್ಪಾದನಾ ಘಟಕಗಳಿದ್ದವು, ಅದು ಇಂದು 300 ಕ್ಕೂ ಹೆಚ್ಚು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ಮೊಬೈಲ್ ಆಮದುದಾರರಾಗುವುದರಿಂದ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕರಾಗುವವರೆಗಿನ ಪ್ರಯಾಣವು ಅತ್ಯಂತ ಮಹತ್ವದ ಮೈಲಿಗಲ್ಲು. ಎಲೆಕ್ಟಾçನಿಕ್ಸ್ ವಲಯವು ಬೃಹತ್ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಮತ್ತು ಸೌರ ಮಾಡ್ಯೂಲ್‌ಗಳು, ನೆಟ್‌ವರ್ಕಿಂಗ್ ಉಪಕರಣಗಳು, ಚಾರ್ಜರ್ ಅಡಾಪ್ಟರುಗಳು ಮತ್ತು ಎಲೆಕ್ಟಾçನಿಕ್ ಘಟಕಗಳು ನಮ್ಮ ರಫ್ತು ಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕೇಂದ್ರ
ಸಚಿವ ಗೋಯಲ್ ಹೇಳಿದ್ದಾರೆ.

ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟಾçನಿಕ್ಸ್ ಅಸೋಸಿಯೇಷನ್ ಸಂಗ್ರಹಿಸಿದ ಇತ್ತೀಚಿನ ಮಾಹಿತಿಯ ಪ್ರಕಾರ, 2026 ರ ಹಣಕಾಸು ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಎಲೆಕ್ಟಾçನಿಕ್ಸ್ ರಫ್ತು $12.4 ಬಿಲಿಯನ್ ತಲುಪಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ $8.43 ಬಿಲಿಯನ್ ಆಗಿತ್ತು. ಈ ಆವೇಗದೊಂದಿಗೆ, ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಎಲೆಕ್ಟಾçನಿಕ್ಸ್ ರಫುö್ತ $46-50 ಬಿಲಿಯನ್ ತಲುಪುವ ನಿರೀಕ್ಷೆಯಿದೆ ಎಂದು ಕೈಗಾರಿಕಾ ಸಂಸ್ಥೆ ಅಂದಾಜಿಸಿದೆ.

ಮೊಬೈಲ್ ಫೋನ್ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡಿದೆ. ಇದು ಆರ್ಥಿಕ ವರ್ಷ 25 ರಲ್ಲಿ $೪.೯ ಶತಕೋಟಿಯಿಂದ ಆರ್ಥಿಕ ವರ್ಷ26 ರಲ್ಲಿ ಅಂದಾಜು $7.6 ಶತಕೋಟಿಗೆ ಶೇಕಡಾ 55 ರಷ್ಟು ಬೆಳೆಯಲಿದೆ. ಮೊಬೈಲ್ ಅಲ್ಲದ ಎಲೆಕ್ಟಾçನಿಕ್ಸ್ ರಫುö್ತ ಸಹ ಬೆಳವಣಿಗೆಯನ್ನು ದಾಖಲಿಸಿದ್ದು, $3.53 ಬಿಲಿಯನ್ ನಿಂದ ಅಂದಾಜು $4.8ಬಿಲಿಯನ್ ಗೆ ಏರಿಕೆಯಾಗಿದ್ದು, ಇದು ಶೇಕಡಾ 36 ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಸೌರ ಮಾಡ್ಯೂಲ್‌ಗಳು, ಸ್ವಿಚಿಂಗ್
ಮತ್ತು ರೂಟಿಂಗ್ ಉಪಕರಣಗಳು, ಚಾರ್ಜರ್ ಅಡಾಪ್ಟರುಗಳು ಮತ್ತು ಭಾಗಗಳು ಮತ್ತು ಘಟಕಗಳಂತಹಪ್ರಮುಖ ಉತ್ಪನ್ನ ವಿಭಾಗಗಳು ಸೇರಿವೆ.

ಕಳೆದ ದಶಕದಲ್ಲಿ ಎಲೆಕ್ಟಾçನಿಕ್ಸ್ ಉತ್ಪಾದನಾ ವಲಯವು ಐತಿಹಾಸಿಕ ರೂಪಾಂತರವನ್ನು ಕಂಡಿದೆ. ಹಂತ ಹAತದ ಉತ್ಪಾದನಾ ಕಾರ್ಯಕ್ರಮ ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆಗಳು ಮತ್ತು ಬಲವಾದ ರಾಜ್ಯ-ಕೈಗಾರಿಕಾ ಸಹಯೋಗದಂತಹ ಉತ್ತಮ ಯೋಜಿತ ನೀತಿ ಮಧ್ಯಸ್ಥಿಕೆಗಳಿಂದಾಗಿ ಈ ಬೆಳವಣಿಗೆ ಸಾಧ್ಯವಾಗಿದೆ

RELATED ARTICLES

LEAVE A REPLY

Please enter your comment!
Please enter your name here

Most Popular