ನವದೆಹಲಿ : ದೇಶದ ಮೊದಲ ಬುಲೆಟ್ ರೈಲು 2027ರ ಅಗಸ್ಟ್15 ರಂದು ಸಂಚಾರ ಆರಂಭಿಸಲಿದೆ ಎಂದು ಕೇಂದ್ರ ರೇಲ್ವೆ ಸಚಿವ ಅಶ್ವನಿ ವೈಷ್ಣವ್ ಗುರುವಾರ ಘೋಷಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2027 ರ ಅಗಸ್ಟ್15ಕ್ಕೆ ಬುಲೆಟ್ ಟ್ರೇನ್ ಸಂಚರಿಸಲು ಸಿದ್ಧವಾಗಲಿದೆ. ಮೊದಲು ಸೂರತ್‌ನಿಂದ ಬಿಲಿಮೋರಾವರೆಗೆ ರೈಲು ಸಂಚಾರ ಆರಂಭವಾಗಲಿದೆ. ನಂತರ ವಾಪಿಯಿಂದ ಅಹ್ಮದಾಬಾದ್‌ವರೆಗೆ ತೆರಯಲಾಗುವುದು. ನಂತರದ ಹಂತಗಳಲ್ಲಿ ಪುಣೆ, ಅಹ್ಮದಾಬಾದ್ ಹಾಗೂ ಕೊನೆಗೆ ಮುಂಬೈನಿಂದ ಅಹಮದಾಬಾದ್ ವರೆಗೆ ಸಂಚರಿಸಲಿದೆ ಎಂದು ಹೇಳಿದರು.
ಅಹಮದಾಬಾದ್ ಹಾಗೂ ಮುಂಬೈ ನಡುವೆ ನಿರ್ಮಿಸಲಾಗುತ್ತಿರುವ ಹೈಸ್ಪೀಡ್ ರೈಲು ಕಾರಿಡಾರ್‌ನ್ನು ಗಂಟೆಗೆ 320 ಕಿ.ಮೀ ವೇಗದಲ್ಲಿ ಸಂಚರಿಸುವ ರೈಲುಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರಿಡಾರ್ ಸಂಪೂರ್ಣ ಕಾರ್ಯರೂಪಕ್ಕೆ ಬಂದ ನಂತರ ಬುಲಟ್ ರೈಲು 2 ಗಂಟೆ 17 ನಿಮಿಷಗಳಲ್ಲಿ ಸಂಪೂರ್ಣ ದೂರಕ್ರಮಿಸುತ್ತದೆ ಎಂದರು. 2017ರಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. 2023 ಡಿಸೆಂಬರ್ ವೇಳೆಗೆ ಯೋಜನೆ ಪೂರ್ಣಗೊಳಿಸುವ ಗುರಿಹೊಂದಲಾಗಿತ್ತು. ಆದರೆ ಭೂಸ್ವಾಧೀನ ಸೇರಿದಂತೆ ಹಲವಾರು ಸವಾಲುಗಳಿಂದ ವಿಳಂಬವಾಗಿದೆ ಎಂದು ಹೇಳಲಾಗಿದೆ.
15-20 ದಿನದಲ್ಲಿ ವಂದೇ ಭಾರತ್ ಸ್ಲೀಪರ್ ಶುರು : ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಗುವಾಹಟಿ ಮತ್ತು ಕೋಲ್ಕತ್ತಾ ನಡುವೆ ಸಂಚರಿಸಲಿದೆ ಎಂದು ಕೇಂದ್ರ ಸಚಿವ ವೈಷ್ಣವ್ ತಿಳಿಸಿದರು. ಗುವಾಹಟಿಯಿಂದ ಕೋಲ್ಕತಾ ಮಾರ್ಗದಲ್ಲಿ 15-20 ದಿನದಲ್ಲಿ ಮೊದಲ ಕಾರ್ಯಾಚರಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಲಿದ್ದಾರೆ ಎಂದು ಹೇಳಿದರು. ವಂದೇ ಭಾರತ್ ರೈಲು ಒಟ್ಟಿ 16 ಬೋಗಿಗಳನ್ನು ಹೊಂದಿದೆ. ಇದು 3 ಟಯರ್‌ನ 11 ಎಸಿ ಕೋಚ್ ಹಾಗೂ 2 ಟಯರ್‌ನ 4 ಎಸಿ ಕೋಚ್‌ಗಳು, 1 ಟಯರ್‌ನ ಒಂದು ಎಸಿ ಕೋಚ್‌ಅನ್ನು ಒಳಗೊಂಡಿದೆ. ಈ ರೈಲು ಒಟ್ಟು 823 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. 3 ಟಯರ್‌ನ ಎಸಿ ದರ 2,3೦೦ ರೂ. 2 ಟಯರ್‌ನ ಎಸಿ ದರ 3,೦೦೦ ರೂ. ಹಾಗೂ 1 ಟಯರ್‌ನ ಎಸಿ ದರ 3,6೦೦ ರೂ ಆಗಿರುತ್ತದೆ ಎಂದು ತಿಳಿಸಿದ್ದಾರೆ.


